ಮುಡಾ ಫಲಾನುಭವಿ ಆಗಿರೋದರಿಂದ ಸಿಎಂ ರಾಜೀನಾಮೆ ಕೇಳ್ತಿರೋದು: ಸ
ಬೆಂಗಳೂರು: ನಾನೇಕೆ ರಾಜೀನಾಮೆ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ್ದಾರೆ. ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಫಲಾನುಭವಿ ಆಗಿರೋದರಿಂದ ನಾವು ರಾಜೀನಾಮೆ ಕೇಳ್ತಿರೋದು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸಮರ್ಥಿಸಿಕೊಂಡರು.
ಅರಮನೆ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ನಿವೇಶನ ಹಂಚಿರುವುದು ಎನ್ನುತ್ತಾರೆ. ಆಗ ನಮ್ಮ ಪಕ್ಷದ ಒಬ್ಬ ಮುಖಂಡ ಈ ತರಹ ನಿವೇಶನ ಅಕ್ರಮವಾಗಿ ತೆಗೆದುಕೊಂಡಿಲ್ಲ. ಆಗ ತಪ್ಪಾಗಿದ್ದರೂ ತಪ್ಪೇ, ನಿಮ್ಮಿಂದ ತಪ್ಪಾಗಿದ್ದರೂ ತಪ್ಪೇ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಮಾನ ಮರ್ಯಾದೆ ಉಳಿಸಿಕೊಳ್ಳಬೇಕು ಎಂದರು.
ಮುಡಾದಿಂದ ನಿವೇಶನ ಅಕ್ರಮವಾಗಿ ಪಡೆದಿರುವವರಲ್ಲಿ ನೂರಾರು ಫಲಾನುಭವಿಗಳಿದ್ದಾರೆ. ಈ ಪೈಕಿ ಸಿಎಂ ಪತ್ನಿ ಕೂಡಾ ಒಬ್ಬರು. ಇದು ಬಿಟ್ಟು ಎಡಗಡೆ ಇರೋರು ಬಲಗಡೆ ಇರೋರು, ಅವರ ಆಪ್ತರು, ಬೇರೆ ಬೇರೆ ಪಕ್ಷದವರು ಹಲವರಿದ್ದಾರೆ. ಯಾರೇ ಇದ್ದರೂ ತನಿಖೆಯಾಗಿ ಕ್ರಮವಾಗಲಿ ಎಂದು ಸಿ.ಟಿ.ರವಿ ಆಗ್ರಹಿಸಿದರು.
ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಈ‌ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಯಾವಾಗ ಬೇಕಾದರೂ ನೋಟಿಫಿಕೇಷನ್ ಬರಬಹುದು. ಅಭ್ಯರ್ಥಿಗಳ ವಿಚಾರದಲ್ಲಿ ನಾವು ಅಥವಾ ಜೆಡಿಎಸ್ ನವರು ಏಕಾಂಗಿಯಾಗಿ ತೀರ್ಮಾನ ತೆಗೆದುಕೊಳ್ಳಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಎನ್‌ಡಿಎ ಭಾಗವಾಗಿದ್ದೇವೆ. ಬಿಜೆಪಿ, ಜೆಡಿಎಸ್ ಜಂಟಿಯಾಗಿ ಸಮಾಲೋಚನೆ ಮಾಡುತ್ತೇವೆ. ಈ ಸಂದರ್ಭಕ್ಕೆ ಯಾರು ಸೂಕ್ತ ಅಭ್ಯರ್ಥಿ ಎಂದು ನಮ್ಮ ಪಕ್ಷದ ಪಾರ್ಲಿಮೆಂಟರಿ ಬೋರ್ಡ್‌ ತೀರ್ಮಾನಿಸುತ್ತದೆ ಎಂದರು.
ಎಲ್ಲ ಚುನಾವಣೆಗಳೂ‌ ನಮಗೆ ಹೈವೋಲ್ಟೇಜ್ ಆಗಿವೆ. ಎಲ್ಲ ಚುನಾವಣೆಗಳನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಚನ್ನಪಟ್ಟಣ ಸೇರಿ ಯಾವುದೇ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಊಹಾಪೋಹ ವಿಚಾರಗಳಿಗೆ ಉತ್ತರಿಸುವುದಿಲ್ಲ ಎಂದ ಸಿ.ಟಿ.ರವಿ, ಚನ್ನಪಟ್ಟಣಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವಗೌಡರ ಪುತ್ರಿ ಅನಸೂಯಾ ಹೆಸರು ಕೇಳಿ ಬರುತ್ತಿರುವುದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 2 =
Remember me
