ಬೆಂಗಳೂರು:ಚುನಾವಣೆ ಫಲಿತಾಂಶದಲ್ಲಿ ಬಹುಮತ ಒಲಿದಿದ್ದರೂ ಸಿಎಂ ಆಯ್ಕೆಯಲ್ಲಿ ಒಮ್ಮತ ದಕ್ಕಿಸಿಕೊಳ್ಳಲು ಆಗದಿರುವ ಕಾಂಗ್ರೆಸ್​ ಹೈಕಮಾಂಡ್​ ವಿರುದ್ಧ ಈಗ ಡಿ.ಕೆ.ಶಿವಕುಮಾರ್ ರೆಬೆಲ್ ಆಗಿದ್ದಾರೆ. ಪರಿಣಾಮವಾಗಿ ಸಿಎಂ ಆಯ್ಕೆಗೆ ಮತ್ತಷ್ಟು ಟ್ರಬಲ್ ಎದುರಾಗಿದೆ.
ಮುಖ್ಯಮಂತ್ರಿ ಆಯ್ಕೆ ಅಂತಿಮಗೊಳಿಸುವ ವಿಚಾರ ಈಗಾಗಲೇ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಅದಾಗಲೇ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲಿನ ಖಾಸಗಿ ಹೋಟೆಲೊಂದರಲ್ಲಿ ತಮ್ಮ ಆಪ್ತ ಶಾಸಕರೊಂದಿಗೆ ತಂಗಿರುವ ಸಿದ್ದರಾಮಯ್ಯ, ಗಹನವಾದ ಚರ್ಚೆಯಲ್ಲಿ ತೊಡಗಿದ್ದಾರೆ.
ಇತ್ತ ಸಿಎಂ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಆಗಿರುವ ಡಿ.ಕೆ.ಶಿವಕುಮಾರ್​ ಕೂಡ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಮಾನನಿಲ್ದಾಣದಲ್ಲಿ ಪೊಲೀಸರು ಕೂಡ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಇದೀಗ ಕೊನೆಯ ಕ್ಷಣದಲ್ಲಿ ದೆಹಲಿಗೆ ತೆರಳುವುದನ್ನು ಡಿಕೆಶಿ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಲಿಂಗಾಯತರನ್ನು ಸಿಎಂ ಮಾಡಲಿ ನೋಡೋಣ: ಕಾಂಗ್ರೆಸ್​ಗೆ ಮಾಜಿ ಸಚಿವ ನಿರಾಣಿ ಸವಾಲು
ತಾವು ಕೊಟ್ಟ ಮಾತಿನಂತೆ ರಾಜ್ಯದಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬಂದು ಅಧಿಕಾರಕ್ಕೆ ತಂದಿದ್ದರೂ ಹೈಕಮಾಂಡ್ ತಮ್ಮ ಬಗ್ಗೆ ಮೀನಾಮೇಷ ಎಣಿಸುತ್ತಿದೆ ಎಂಬ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಈಗ ಹೈಕಮಾಂಡ್ ವಿರುದ್ಧವೇ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದ್ದರೂ ಡಿಕೆಶಿ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ನಾವ್ಯಾರೂ ಪಕ್ಷಕ್ಕೆ ಅನಿವಾರ್ಯ ಅಲ್ಲ: ಮಾಜಿ ಸಚಿವ ವಿ.ಸೋಮಣ್ಣ
ನನಗೆ ಹೊಟ್ಟೆನೋವು ಇದೆ, ಗ್ಯಾಸ್ಟ್ರಿಕ್ ಸಮಸ್ಯೆ ಇದೆ, ಹೀಗಾಗಿ ನನಗೆ ವಿಶ್ರಾಂತಿ ಬೇಕಿದೆ ಎಂಬ ನೆಪ ಹೇಳಿ ದೆಹಲಿಗೆ ತೆರಳುವುದರಿಂದ ಡಿ.ಕೆ. ಶಿವಕುಮಾರ್​ ತಪ್ಪಿಸಿಕೊಂಡು ಬೆಂಗಳೂರಿನಲ್ಲೇ ಉಳಿಯುವ ಸಾಧ್ಯತೆ ಹೆಚ್ಚಾಗಿದೆ. ಹೀಗೆ ಇಲ್ಲಿದ್ದುಕೊಂಡೇ ಮುಂದಿನ ತಂತ್ರ ಹೆಣೆಯಲಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.
ನಾನು ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ, ಅವರೇನು ನಿರ್ಧರಿಸುತ್ತಾರೋ ನೋಡೋಣ: ಡಿ.ಕೆ.ಶಿವಕುಮಾರ್

ಜಗತ್ತು ನಿಮ್ಮನ್ನು ತಿರಸ್ಕರಿಸಿದರೂ..: ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಅಮ್ಮನ ಬಳಿಗೆ ತೆರಳಿ ಹೀಗಂದಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 9 =
Remember me
