ಬೆಂಗಳೂರು:ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದರೆ ಕೆಲವು ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಉಚಿತವಾಗಿ ನೀಡುತ್ತೇವೆಂದು ಕಾಂಗ್ರೆಸ್​​ ಸರ್ಕಾರ ಭರವಸೆ ನೀಡಿತ್ತು. ಅದರಂತೆ ಇದೀಗ ಗ್ಯಾಂರಟಿಯನ್ನು ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.
ಶಕ್ತಿ ಯೋಜನೆ ನನ್ನ ಹೆಂಡತಿಗೂ ಅನ್ವಯ ಅಂದ ಸಿಎಂ ಸಿದ್ದರಾಮಯ್ಯ:
ಸಚಿವ ಸಂಪುಟದ ಬಳಿಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮತನಾಡಿದ್ದು, ಶಕ್ತಿ ಯೋಜನೆ ಅಡಿಯಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ವಿದ್ಯಾರ್ಥಿನಿಯರು ಸೇರಿ ಎಲ್ಲಾ ಮಹಿಳೆಯರಿಗೆ ‘ಶಕ್ತಿ’ ಯೋಜನೆ ಅನ್ವಯವಾಗಲಿದೆ. ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಶಕ್ತಿ ಯೋಜನೆ ನನ್ನ ಹೆಂಡತಿಗೂ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.
ಶೇ. ೫೦% ಮಹಿಳೆಯರು ಸಮಾಜದಲ್ಲಿ ಇದ್ದಾರೆ. ಸ್ಟೂಡೆಂಟ್ ಸೇರಿ ಎಲ್ಲರಿಗೂ ಉಚಿತ ಬಸ್ ಪಾಸ್ ನೀಡಲಾಗುತ್ತದೆ. ಈ ತಿಂಗಳ ೧೧ ರಂದು‌ ಈ ಯೋಜನೆ ಲಾಂಚ್ ಆಗುತ್ತದೆ ಎಂದು ಹೇಳಿದ್ದಾರೆ.
ಬಸ್ ಸೇವೆ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ರಾಜ್ಯದ ಒಳಗೆ ಮಾತ್ರ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇರುತ್ತದೆ. ಎಕ್ಸ್‌ಪ್ರೆಸ್ ಬಸ್ ನಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಬಿಎಂಟಿಸಿ ಮತ್ತು ಕೆ ಎಸ್ ಆರ್​​ಟಿಸಿ ಬಸ್​ನಲ್ಲಿ ಅವಕಾಶ ಇದೆ.
ಎಸಿ ಬಸ್ ಬಿಟ್ಟು ಎಲ್ಲದರಲ್ಲೂ ಉಚಿತವಾಗಿ ಪ್ರಯಾಣ ಮಾಡಬಹುದು. ಎಸಿ ಮತ್ತು ಐಷಾರಾಮಿ ಬಸ್​ಗಳಲ್ಲಿ ಉಚಿತ ಪ್ರಯಾಣವಿಲ್ಲ. ರಾಜಹಂಸ ಬಸ್​ನಲ್ಲಿಯೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಇರುವುದಿಲ್ಲ. ಅಂತಾರಾಜ್ಯ ಪ್ರಯಾಣಕ್ಕೆ ಉಚಿತ ಸೌಲಭ್ಯ ಇರುವುದಿಲ್ಲ.
ಗಂಡಸರಿಗೆ ೫೦% ಆಸನ ಮೀಸಲು:
ಈ ತಿಂಗಳ ೧೧ ರ ಬಳಿಕ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಇದ್ದು, ಗಂಡಸರಿಗೆ ೫೦% ಆಸನ ಮೀಸಲು ನೀಡುವ ಮೂಲಕವಾಗಿ ೫೦:೫೦ ಆಸನಕ್ಕೆ ಸರ್ಕಾರ ಅವಕಾಶ ನೀಡಿದೆ.
ಎಲ್ಲರಿಗೂ 200 ಯೂನಿಟ್​​ ವಿದ್ಯುತ್​ ಉಚಿತ: ಸಿಎಂ ಸಿದ್ದರಾಮಯ್ಯ
ಎಲ್ಲರಿಗೂ 200 ಯೂನಿಟ್​​ ವಿದ್ಯುತ್​ ಉಚಿತ: ಸಿಎಂ ಸಿದ್ದರಾಮಯ್ಯ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
