ಬೆಂಗಳೂರು:ಬಿಜೆಪಿ ಮತ್ತು ಸಂಘ ಪರಿವಾರದವರು ತೋರುಗಾಣಿಕೆಗಾಗಿ ವಿವೇಕಾನಂದರನ್ನು ಎಷ್ಟೇ ಆರಾಧಿಸಿದರೂ, ಮುದ್ದಾಡಿದರೂ ಅವರ ಆಂತರ್ಯದೊಳಗೆ ವಿವೇಕಾನಂದರ ಬಗ್ಗೆ ಎಷ್ಟು ಅಸಹನೆ ಇದೆ ಎಂಬುದಕ್ಕೆ ಇಂದಿನ ಪಕ್ಷದ ಕಾರ್ಯಕಾರಣಿ ವಿಶೇಷ ಸಭೆಯಲ್ಲಿ ನಡೆದಿರುವ ಘಟನೆ ಸಾಕ್ಷಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಈಗಲಾದರೂ ನಿಮಗೆಲ್ಲಾ ಅರ್ಥವಾಯ್ತಾ? ಮಿ. 360 ಮಾತಿಗೆ ಕ್ರಿಕೆಟ್ ಫ್ಯಾನ್ಸ್ ಗಪ್​ ಚುಪ್​!
“ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್‌ ದಾಸ್‌ ಅಗರ್ವಾಲ್‌ ಅವರು ವೇದಿಕೆಯ ಮೇಲೆ ಕಾರ್ಯಕ್ರಮದಲ್ಲಿ ವಿವೇಕಾನಂದರ ಭಾವಚಿತ್ರ ಯಾಕಿದೆ? ಎಂದು ಪ್ರಶ್ನಿಸುವ ಮೂಲಕ ಬಹಿರಂಗವಾಗಿಯೇ ತಮ್ಮ ಅಸಮಧಾನ ಹೊರಹಾಕಿದ್ದಾರೆ. ವಿವೇಕಾನಂದರ ಪುಣ್ಯಸ್ಮರಣೆಯ ದಿನದಂದೇ ಅವರನ್ನು ಅವಮಾನಿಸುವ ಮೂಲಕ ಬಿಜೆಪಿ ಇಡೀ ಹಿಂದೂ ಸಮಾಜಕ್ಕೆ ಅವಮಾನಗೈದಿದೆ” ಎಂದು ಆರೋಪಿಸಿದರು.
“ಸಂಘಪರಿವಾರದವರೂ ವಿವೇಕಾನಂದರನ್ನು ಎಷ್ಟೇ ಹೊತ್ತು ಮುದ್ದಾಡಿದರೂ ಅವರು ಇಂದಿಗೂ ಬಿಜೆಪಿಗೆ ಪೂರ್ಣವಾಗಿ ದಕ್ಕಿಲ್ಲ, ಮುಂದೆ ದಕ್ಕುವುದೂ ಇಲ್ಲ. ವಿವೇಕಾನಂದರು ದ್ವೇಷದ ಬದಲಾಗಿ ಸಹೋದರತ್ವವನ್ನು, ಮೌಢ್ಯದ ಬದಲಾಗಿ ವೈಜ್ಞಾನಿಕ ಚಿಂತನೆಯನ್ನು, ಕೋಮುಗಲಭೆಗಳಿಗೆ ಬದಲಾಗಿ ಸರ್ವಧರ್ಮ ಸಹಬಾಳ್ವೆಯನ್ನು ಹಿಂದೂ ಧರ್ಮದ ನೆಲೆಗಟ್ಟಿನಲ್ಲಿ ತಂದವರು” ಎಂದರು.
ಇದನ್ನೂ ಓದಿ:ಶ್ರೀದೇವಿ ಮೇಲೆ ನಟಿ ಮಾನನಷ್ಟ ಮೊಕದ್ದಮೆ ಕೇಸ್​ ಬಗ್ಗೆ ಲಾಯರ್​ ರಿಯಾಕ್ಷನ್​
“ಜಾಗತಿಕ ಸರ್ವಧರ್ಮ ಸಮ್ಮೇಳನದಲ್ಲಿ ಜಗತ್ತಿನ ನೂರಾರು ದೇಶಗಳಿಂದ ಆಗಮಿಸಿದ್ದ ಹತ್ತು ಹಲವು ಧರ್ಮ, ಸಂಸ್ಕೃತಿ, ಭಾಷೆಯ ಜನರನ್ನು ಮೈ ಡಿಯರ್‌ ಬ್ರದರ್ಸ್‌ ಎಂಡ್‌ ಸಿಸ್ಟರ್ಸ್‌ ( ನನ್ನ ಪ್ರೀತಿಯ ಸಹೋದರ – ಸಹೋದರಿಯರೇ ) ಎಂದು ಸಂಬೋಧಿಸಿದ್ದ ವಿವೇಕಾನಂದರು, ವಿಶ್ವಮಾನವ ಚಿಂತನೆಯೇ ಹಿಂದೂ ಧರ್ಮವೆಂದು ಹೇಳಿದವರು. ಆದರೆ ಬಿಜೆಪಿ ನಾಯಕರು ಬಾಯಿ ತೆರೆದರೆ ಹೊಡಿ, ಬಡಿ, ಕೊಲ್ಲು ಎಂದು ಹಿಂಸೆಗೆ ಪ್ರಚೋದನೆ ನೀಡುತ್ತಾರೆ. ಧರ್ಮ ರಕ್ಷಣೆಯ ಹೆಸರಲ್ಲಿ ದ್ವೇಷ ಬಿತ್ತುವ ಬಿಜೆಪಿಗೆ ವಿವೇಕಾನಂದರ ಈ ಚಿಂತನೆಗಳು ರುಚಿಸದು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯೂ ಹೊರತಾಗಿಲ್ಲ. ಇದೇ ಕಾರಣಕ್ಕೆ ಸಾವಿರಾರು ಜನರು ತುಂಬಿದ್ದ ಸಭೆಯಲ್ಲೇ ವಿವೇಕಾನಂದರ ಫೋಟೊ ಯಾಕಿದೆ? ಎಂದು ಕೇಳುವ ಧೈರ್ಯವನ್ನು ರಾಧಾಮೋಹನ್‌ ದಾಸ್‌ ಮಾಡಿದ್ದಾರೆ” ಎಂದರು.
“ಓರ್ವ ಸಂತನಾಗಿ, ದಾರ್ಶನಿಕರಾಗಿ, ಮಹಾನ್ ಮಾನವತಾವಾದಿಯಾಗಿ ಸರ್ವರಿಂದಲೂ ಗೌರವಿಸಲ್ಪಡುವ, ಅನುಸರಿಸಲ್ಪಡುವ ವಿವೇಕಾನಂದರಿಗೆ ಅವಮಾನ ಮಾಡಿರುವ ಬಿಜೆಪಿ ಪಕ್ಷ ಅದೇ ವೇದಿಕೆಯಲ್ಲೇ ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತೇನೆ” ಎಂದು ಸಿಎಂ ಒತ್ತಾಯಿಸಿದ್ದಾರೆ.
ಈಗಲಾದರೂ ನಿಮಗೆಲ್ಲಾ ಅರ್ಥವಾಯ್ತಾ? ಮಿ. 360 ಮಾತಿಗೆ ಕ್ರಿಕೆಟ್ ಫ್ಯಾನ್ಸ್ ಗಪ್​ ಚುಪ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 7 =
Remember me
