ಬೆಂಗಳೂರು:ಅಭಿವೃದ್ಧಿ ಅನುದಾನ, ಅಧಿಕಾರಿಗಳ ವರ್ಗಾವಣೆ ಇನ್ನಿತರ ವಿಷಯಗಳಿಗೆ ಮುನಿದ ಶಾಸಕರ ಮನವೊಲಿಕೆ, ಸಿಟ್ಟು ಶಮನಗೊಳಿಸುವ ತಾಲೀಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಹಾಕಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ (ಆ.7) ಆರು ಜಿಲ್ಲೆಗಳ ಸಭೆ ನಿಗದಿ ಮೂಲಕ ಉಳಿದ ಜಿಲ್ಲೆಗಳ ಶಾಸಕರಿಗೆ ಸಕಾರಾತ್ಮಕ ಸಂದೇಶ ರವಾನಿಸಿದ್ದಾರೆ.ಮೊದಲ ಹಂತದಲ್ಲಿ ಆರು ಜಿಲ್ಲೆಗಳ ಸಚಿವರು, ಶಾಸಕರೊಂದಿಗೆ ಚರ್ಚಿಸಲಿದ್ದಾರೆ.
ಲಭ್ಯ ಕಾಲಾವಕಾಶದ ಪ್ರಕಾರ ಶಾಸಕರಿಗೆ ಮುಂಚಿತವಾಗಿ ತಿಳಿಸಿ, ಸಭೆ ನಿಗದಿಯಾಗಲಿದೆ. ಎಲ್ಲರ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಲಾಗುವುದು ಎಂದು ಸಿದ್ದರಾಮಯ್ಯ ಈಗಾಗಲೇ ಭರವಸೆ ನೀಡಿದ್ದು, ಸದ್ಯಕ್ಕೆ ಮೊದಲ ಕಂತಿನ ಸಭೆ ಗೊತ್ತುಪಡಿಸಿದ್ದಾರೆ.
ಐದು ಗ್ಯಾರಂಟಿ ಯೋಜನೆಗಳ ಜಾರಿ ಮೂಲಕ ಸರ್ಕಾರದ ಪರವಾಗಿ ಉತ್ತಮ ಜನಾಭಿಪ್ರಾಯ ಮೂಡಿದೆ. ಇದೇ ವಾತಾವರಣ ಮುಂದಿನ ಲೋಕಸಭೆ ಚುನಾವಣೆವರೆಗೂ ಕಾಪಿಟ್ಟುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ತಂಡ ಯೋಚಿಸಿತ್ತು.ಆದರೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ವಿಷಯ ಸ್ಫೋಟಿಸಿ, ತೀವ್ರ ಚರ್ಚೆಗೆ ಗ್ರಾಸವಾಯಿತು. ಪ್ರತಿಪಕ್ಷಗಳು ಇದನ್ನೇ ಅಸ ಮಾಡಿಕೊಂಡು ಸರ್ಕಾರದ ಮೇಲೆ ಮುಗಿಬಿದ್ದರೆ, ಈ ವಿಷಯ ದೆಹಲಿ ವರಿಷ್ಠರ ಅಂಗಳಕ್ಕೂ ತಲುಪಿತ್ತು.ಪೂರ್ವ ನಿಗದಿತ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆತೆರಳಿದ್ದ ಸಚಿವರಿಗೆ ಹೈಕಮಾಂಡ್ ಕಿವಿ ಹಿಂಡಿ ಕಳುಹಿಸಿದ್ದಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಅಹವಾಲು ಆಲಿಸಿ ಬಗೆಹರಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಳಗ್ಗೆ 11 ರಿಂದ 12: ತುಮಕೂರು ಜಿಲ್ಲೆ, ಪಾಲ್ಗೊಳ್ಳುವವರು- ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರು- ಕೆ.ಷಡಕ್ಷರಿ, ಡಾ.ಎಚ್.ಡಿ.ರಂಗನಾಥ್, ಎಸ್.ಆರ್.ಶ್ರೀನಿವಾಸ (ವಾಸು), ಎಚ್.ವಿ.ವೆಂಕಟೇಶ್, ಆರ್.ರಾಜೇಂದ್ರ ರಾಜಣ್ಣ.
ಮಧ್ಯಾಹ್ನ 12 ರಿಂದ 1: ಯಾದಗಿರಿ ಜಿಲ್ಲೆ, ಪಾಲ್ಗೊಳ್ಳುವವರು- ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕರು- ರಾಜಾ ವೆಂಕಟಪ್ಪ ನಾಯಕ, ಚನ್ನಾರೆಡ್ಡಿ ಪಾಟೀಲ್ ತುನ್ನೂರ್.
ಮಧ್ಯಾಹ್ನ 1 ರಿಂದ 2: ಚಿತ್ರದುರ್ಗ ಜಿಲ್ಲೆ, ಪಾಲ್ಗೊಳ್ಳುವವರು- ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರು- ಎನ್.ವೈ.ಗೋಪಾಲಕೃಷ್ಣ, ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ, ಬಿ.ಜಿ.ಗೋವಿಂದಪ್ಪ.
ಸಂಜೆ 4 ರಿಂದ 5: ಬಾಗಲಕೋಟೆ ಜಿಲ್ಲೆ, ಪಾಲ್ಗೊಳ್ಳುವವರು- ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಶಾಸಕರು- ಜಿ.ಟಿ.ಪಾಟೀಲ್, ಬಿ.ಬಿ.ಚಿಮ್ಮನಕಟ್ಟಿ, ಎಚ್.ವೈ.ಮೇಟಿ, ಕಾಶಪ್ಪನವರ್ ವಿಜಯಾನಂದ ಶಿವಶಂಕರಪ್ಪ.
ಸಂಜೆ 5 ರಿಂದ 6: ಬಳ್ಳಾರಿ ಜಿಲ್ಲೆ, ಪಾಲ್ಗೊಳ್ಳುವವರು- ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಶಾಸಕರು- ಈ.ತುಕಾರಾಮ್, ಜೆ.ಎನ್.ಗಣೇಶ್, ಬಿ.ಎಂ.ನಾಗರಾಜ, ನಾರಾ ಭರತರೆಡ್ಡಿ.ಸಂಜೆ 6 ರಿಂದ ರಾತ್ರಿ 7: ಧಾರವಾಡ ಜಿಲ್ಲೆ, ಪಾಲ್ಗೊಳ್ಳುವವರು- ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಶಾಸಕರು- ಎನ್.ಎಚ್.ಕೋನರೆಡ್ಡಿ, ವಿನಯ ಕುಲಕರ್ಣಿ, ಅಬ್ಬಯ್ಯ ಪ್ರಸಾದ್, ಜಗದೀಶ ಶೆಟ್ಟರ್.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
