ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹಾಸ್ಯನಟ ಸಾಧುಕೋಕಿಲ ಜತೆ ಮಸಾಲೆ ದೋಸೆ ಸವಿದರು. ಜತೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಇದ್ದರು.
ಮಂಗಳವಾರ ಸರಣಿ ಕಾರ್ಯಕ್ರಮ ಮುಗಿಸಿ ರಿಲ್ಯಾಕ್ಸ್ ಮೂಡ್‌ಗೆ ಹೊರಳಿದ ಸಿಎಂ ತಮ್ಮ ನೆಚ್ಚಿನ ಶಿವಾನಂದ ಸರ್ಕಲ್‌ ಬಳಿಯ ಜನಾರ್ದನ ಹೋಟೆಲ್‌ಗೆ ತೆರಳಿದರು. ಆಗಾಗ್ಗೆ ಅವರು ತಮ ಸ್ನೇಹಿತರೊಂದಿಗೆ ಈ ಹೋಟೆಲ್‌ಗೆ ಬರುವುದು ವಾಡಿಕೆ.
ಬೆಳಗ್ಗೆ ತಮ್ಮ‌ಮನೆಯಲ್ಲಿ ಧ್ವಜಾರೋಹಣ ನಡೆಸಿ, ಬಳಿಕ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಅವರು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಸಂದೇಶವನ್ನು ನೀಡಿದರು. ಇದಾದ ಬಳಿಕ‌ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ, ಸಂಗೊಳ್ಳಿರಾಯಣ್ಣ ಜಯಂತ್ಯೋತ್ಸವದ ಬಳಿಕ ಅವರ ಸವಾರಿ ಹೋಟೆಲ್ ಕಡೆ ಧಾವಿಸಿತು. ಬಜು ಕಾಲದಿಂದಲೂ ಹಿಂದಿನ ತಲೆಮಾರಿನ ರಾಜಕೀಯ ನಾಯಕರಿಗೆ ಜನಾರ್ದನ ಹೋಟೆಲ್‌ಗೆ ಭೇಟಿಕೊಡುವುದು ವಾಡಿಕೆ ಮಾಡಿಕೊಂಡಿದ್ದಾರೆ. ಅಲ್ಲಿನ ಹಲ್ವಾ, ಮಸಾಲೆದೋಸೆ ಸೇರಿ ಇತರ ತಿನಿಸು ಜನಜನಿತವಾಗಿದ್ದು, ಸಿಎಂ ಕೂಡ ಅದನ್ನು ತರಿಸಿಕೊಂಡು ಚಪ್ಪರಿಸಿ ಸವಿದಿದ್ದು ವಿಶೇಷವಾಗಿತ್ತು. ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಗೋಂವಿಂದರಾಜು ಕೂಡ ಈ ವೇಳೆ ಸಾಥ್ ನೀಡಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 3 =
Remember me
