ಬೆಂಗಳೂರು: ಅಧಿಕೃತ ಕಾರ್ಯಕ್ರ‌ಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೇಟು ಹಾಕಿದರೆ ? ಎನ್ನುವ ಸಂಶಯದ ಬಿರುಗಾಳಿ ರಾಜಕೀಯ ವಲಯದಲ್ಲಿ ಎದ್ದಿದೆ.
ಸಿಎಂ ಗುರುವಾರದ ಅಧಿಕೃತ ಪ್ರವಾಸದ ಪಟ್ಟಿ ಪ್ರಕಾರ ಶುಕ್ರವಾರ ಮಧ್ಯಾಹ್ನ 2.10ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಬರ ಮಾಡಿಕೊಳ್ಳಲಿದ್ದಾರೆ ಎಂದಿತ್ತು. ಆದರೆ, ಶುಕ್ರವಾರ ಪರಿಷ್ಕೃತ ಪ್ರವಾಸ ಪಟ್ಟಿ ಪ್ರಕಾರ ಪ್ರಧಾನಿಗೆ ಸ್ವಾಗತಿಸಲು ಹೋಗುವುದಿಲ್ಲ. ಆದರೆ, ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ ನಲ್ಲಿ ನಡೆಯಲಿರುವ ಕಾರ್ಯಕ್ರಮದ ಜತೆಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಪ್ರಧಾನಿಯವರನ್ನು ಬರ ಮಾಡಿಕೊಳ್ಳಲು ಸಿಎಂ ಸಿದ್ದರಾಮಯ್ಯ ಹೋಗುವುದಿಲ್ಲವೆಂದು ಸಿಎಂ‌ ಕಚೇರಿ ಮೂಲಗಳು ಖಚಿತಪಡಿಸಿವೆ. ಸರ್ಕಾರಿ ಕಾರ್ಯಕ್ರಮ ಎಂಬ ಕಾರಣಕ್ಕೆ ರಾಜ್ಯ ಬಿಜೆಪಿ ಬಯಸಿದ್ದ ರೋಡ್ ಶೋ ಪ್ಲ್ಯಾನ್ ಗೆ ಪಿಎಂ ಕಚೇರಿ ಅನುಮತಿ ನೀಡಿದ್ದಿಲ್ಲ. ಆಮಟ್ಟಿಗೆ ಶಿಷ್ಟಾವಾರ ಪಾಲನೆಯ ಸೂಕ್ಷ್ಮ ಸಂವೇದನೆ ಮೆರೆದಿತ್ತು. ಈ ಹಿಂದೆ ಇಸ್ರೋಗೆ ಪ್ರಧಾನಿ ಭೇಟಿ ನೀಡಿದ ವೇಳೆ, ಹೊತ್ತಲ್ಲದ ಹೊತ್ತಲ್ಲಿ ಶಿಷ್ಟಾಚಾರದ ಕಾರಣಕ್ಕೆ ಸ್ವಾಗತಿಸಲು ಬರಬೇಡಿ ಎಂದು ಪಿಎಂ ಕಚೇರಿಯಿಂದ ಸಿಎಂ ಸಿದ್ದರಾಮಯ್ಯ ಕಚೇರಿಗೆ ಮಾಹಿತಿ ನೀಡಲಾಗಿತ್ತು.
ಆಗ ನಾವು ಶಿಷ್ಟಾಚಾರದ ದೃಷ್ಟಿಯಿಂದ ಪ್ರಧಾನಿಗೆ ಬರ ಮಾಡಿಕೊಳ್ಳಬೇಕೆಂದಿದ್ದೆವು. ಆದರೆ ಅವರೇ ಬೇಡವೆಂದ ಕಾರಣ ಹೋಗಿಲ್ಲವೆಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಈ ಬಾರಿ ಪಿಎಂ ಪ್ರವಾಸದ ಅಧಿಕೃತ .ಮಾಹಿತಿ ನೀಡಿದರೂ ಸ್ವಾಗತಕ್ಕೆ ಸಿಎಂ ಹೋಗುತ್ತಿಲ್ಲ. ಇದೊಂದು ಕೆಟ್ಟ ಸಂಪ್ರದಾಯ, ರಾಜ್ಯದ ಸಂಸ್ಕೃತಿ, ಗೌರವಕ್ಕೆ ಚ್ಯುತಿ ತರುವ ರಾಜಕೀಯ ಎಂದು ವಿಶ್ಲೇಷಿಸಲಾಗುತ್ತಿದೆ. ಗಮನಾರ್ಹ ಸಂಗತಿಯೆಂದರೆ, ಪ್ರಧಾನಿಗೆ ಬರ ಮಾಡಿಕೊಳ್ಳಲು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಜರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೋದಿಯವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ಸರಣಿಯನ್ನು ಸಿದ್ದರಾಮಯ್ಯ ಮುಂದುವರಿಸಿದ್ದು, ಮೋದಿಯವರು ಬೆಂಗಳೂರಿಗೆ ಆಗಮನದ ಕೆಲವೇ ಗಂಟೆಗಳ ಮುಂಚೆ ಮತ್ತಷ್ಟು ತೀಕ್ಷ್ಣವಾಗಿ ಹರಿಹಾಯ್ದಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀತಿ ಆಯೋಗದ ಸಿಇಒ ಬಿ.ವಿ.ಆರ್.ಸುಬ್ರಮಣ್ಯ ಬರೆದಿದ್ದಾರೆ ಎನ್ನಲಾದ ಲೇಖನ ಮುಂದಿಟ್ಟುಕೊಂಡು, ರಾಜ್ಯದ ಪಾಲಿನ ತೆರಿಗೆಯನ್ನು ಕಡಿತಗೊಳಿಸಲು ಮೋದಿಯವರು 2014ರಿಂದಲೇ ಸಂಚು ಹೂಡಿದ್ದರು ಎಂದು ಸಿದ್ದರಾಮಯ್ಯ‌ಆರೋಪಿಸಿ ಸಂದೇಶ ಹಂಚಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − five =
Remember me
