ಬೆಂಗಳೂರು:ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡಲಾಗಿದ್ದು, ಖಾತೆ ಹಂಚಿಕೆ ಇವತ್ತು ಅಥವಾ ನಾಳೆ ಮಾಡುತ್ತೇವೆ. ಸಿಎಂ ಬಿಟ್ಟು 33 ಮಂದಿ ಸಂಪುಟ ದರ್ಜೆ ಸಚಿವರನ್ನಾಗಿ ಮಾಡಿದ್ದೇವೆ. ಮೊದಲ ಬಾರಿ ಗೆದ್ದವರನ್ನು ಮಂತ್ರಿ ಮಾಡಿಲ್ಲ. ಮೂರು-ನಾಲ್ಕು ಬಾರಿ ಗೆದ್ದವರನ್ನು ಸಚಿವರನ್ನಾಗಿ ಮಾಡಿದ್ದೇವೆ. ಹೊಸ ಮುಖ, ಹಿರಿಯರು ಎಲ್ಲರನ್ನೂ ಸೇರಿಸಿ ಸಚಿವ ಸಂಪುಟ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೆಲವು ಮಾನದಂಡಗಳನ್ನು ಮುಂದಿಟ್ಟುಕೊಂಡು ಸಂಪುಟ ರಚಿಸಿದ್ದೇವೆ. ಕೊಡಗು, ಹಾಸನ, ಚಿಕ್ಕಮಗಳೂರು, ಹಾಸನ , ಹಾವೇರಿ ಜಿಲ್ಲೆಗಳು ಹಾಗೂ ಹೊಸ ಶಾಸಕರಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ಸಮಾಧಾನ, ಅಸಮಧಾನ ಇರುವುದು ಸಹಜ. ಅಸಮಧಾನದ ಜತೆ ಸಮಾಧಾನ ಇದೆ. ಪಕ್ಷದ ಎಲ್ಲರೂ ಇದನ್ನು ಒಪ್ಪಿಕೊಂಡಿದ್ದಾರೆ ಎಂದರು.
ಇದನ್ನೂ ಓದಿ:ಯಾರಿಗೆ ಯಾವ ಖಾತೆ? ಇಲ್ಲಿದೆ ಸಚಿವರ ಸಂಭವನೀಯ ಖಾತೆಗಳ ಪಟ್ಟಿ…
ನಾವು ಕೊಟ್ಟಿರುವ ಭರವಸೆ ಈಡೇರಿಸಿ, ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ವಿಪಕ್ಷಗಳು ಜನತೆಗೆ ಕೊಟ್ಟ ಭರವಸೆ ಈಡೇರಿಸಿಲ್ಲ. ಆದರೆ ನಾವು ಎಲ್ಲ ಭರವಸೆ ಈಡೇಸುತ್ತೇವೆ. ಇದಕ್ಕಾಗಿ ಎಲ್ಲ ಅಂಕಿ-ಅಂಶ ಪಡೆಯುತ್ತಿದ್ದೇವೆ. ಮುಂದಿನ ಕ್ಯಾಬಿನೆಟ್​ನಲ್ಲಿ ಐದು ಭರವಸೆ ಈಡೇರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಸಚಿವರ ಪ್ರಮಾಣವಚನ ಸ್ವೀಕಾರದ ಬಳಿಕ ಕ್ಯಾಬಿನೆಟ್ ಮಿಟಿಂಗ್ ನಡೆದಿದೆ. ಬಳಿಕ ಅನೌಪಚಾರಿಕ ಸಭೆ ನಡೆದಿದೆ. ಈ ವೇಳೆ ಕೆಲ ಸಚಿವರ ಜನಪರ ಕೆಲಸ ಮಾಡಲು ಉತ್ತಮ ಖಾತೆ ಕೊಡಿ ಎಂದು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ವೇಳೆ ಆದಷ್ಟು ಬೇಗ ಖಾತೆ ಹಂಚಿಕೆ ಆಗುತ್ತದೆ. ಇಂತಹದ್ದು, ಅಂತಹದ್ದು ಎನ್ನದೇ ಕೊಟ್ಟದ್ದನ್ನು ನಿಭಾಯಿಸಿ ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.
ಕಳೆದ ಶನಿವಾರ (ಮೇ 20) ಕಂಠೀರವ ಸ್ಟೇಡಿಯಂನಲ್ಲಿ 8 ಮಂದಿ ಸಚಿವರೊಂದಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ.ಶಿವಕುಮಾರ್​ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಇದಾದ ಒಂದು ವಾರದ ಬಳಿಕ ಸಂಪುಟ ವಿಸ್ತರಣೆಯಾಗಿದ್ದು, ಇಂದು (ಮೇ 27) ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ 24 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದರು.
ಇದನ್ನೂ ಓದಿ:ಪ್ರವೀಣ್ ನೆಟ್ಟಾರ್ ಪತ್ನಿ ಉದ್ಯೋಗಕ್ಕೆ ಕೊಕ್ | ಸರ್ಕಾರ ಬದಲಾದಾಗ ನಿಯಮದಂತೆ ತಾತ್ಕಾಲಿಕ ನೇಮಕಾತಿ ರದ್ದಾಗುತ್ತವೆ; ಕಾಂಗ್ರೆಸ್ ಸ್ಪಷ್ಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಲಿಂಗಾಯತ 8, ಒಕ್ಕಲಿಗ 6, ಕುರುಬ 2, ನಾಯಕ 3, ಮುಸ್ಲಿಮ್ 2, ಕ್ರಿಶ್ಚಿಯನ್, ಜೈನ್, ಭೋವಿ, ಮರಾಠಾ, ಬ್ರಾಹ್ಮಣ ತಲಾ ಒಂದು, ಪರಿಶಿಷ್ಟ ಜಾತಿ 5 (ಬಲಗೈ 3, ಎಡಗೈ 2), ಇತರೆ ಹಿಂದುಳಿದ ಮೊಗವೀರ, ಕ್ಷತ್ರಿಯ ಹಾಗೂ ಈಡಿಗ ವರ್ಗಗಳಲ್ಲಿ ಮೂವರಿಗೆ ಅವಕಾಶ ದೊರೆತಿದೆ.
ಸಚಿವ ಸಂಪುಟದಲ್ಲಿ ಒಟ್ಟು 22 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿದ್ದು, ಒಂಬತ್ತು ಜಿಲ್ಲೆಗಳು ಸಚಿವ ಸ್ಥಾನದಿಂದ ವಂಚಿತವಾಗಿವೆ. ವಿಜಯನಗರ, ಚಾಮರಾಜನಗರ, ಹಾವೇರಿ, ಕೋಲಾರ, ಚಿಕ್ಕಮಗಳೂರು, ಕೊಡಗು, ದಕ್ಷಿಣಕನ್ನಡ, ಉಡುಪಿ ಹಾಗೂ ಹಾಸನದಿಂದ ಸಚಿವರಿಲ್ಲದಂತಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four + four =
Remember me
