ಬೆಂಗಳೂರು:  ನಿರೀಕ್ಷೆಯಂತೆ ರಾಜ್ಯಮಟ್ಟದ ಎರಡನೇ ಜನಸ್ಪಂದನ ಕಾರ್ಯಕ್ರಮಕ್ಕೆ ಹರಿದುಬಂದಿದೆ. ಬಂದವರೆಲ್ಲರಿಗೂ ಸಿಎಂ ಮುಂದೆ ಅಹವಾಲು ಹೇಳಿಕೊಳ್ಳುವ ಧಾವಂತ ಎದ್ದು ಕಂಡಿತು. ವಿಧಾನಸೌಧ ಮಹಾದ್ವಾರದ ಮೆಟ್ಟಿಲು ಮುಂಭಾಗದ ವ್ಯವಸ್ಥೆಯು ಚೆನ್ನಾಗಿತ್ತು. ಆದರೆ‌ ಸಿಎಂ ಸಿದ್ದರಾಮಯ್ಯ ಜನರ ಬಳಿಗೆ ಅಹವಾಕು ಆಲಿಸಲು ಬಂದಾಗ ಜನ ಜಾತ್ರೆಯಾಗಿ, ನೂಕು- ನುಗ್ಗಲು ಉಂಟಾಯಿತು
ಇಸಕ್ಕೂ ಮುನ್ನ ಕಾರ್ಯಕ್ರಮ ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಗ್ಯಾರಂಟಿಯೋಜನೆಗಳ ಬಗ್ಗೆ ಮೊದಲಿಗ ಪ್ರತಿಪಕ್ಷಗಳು ಅಪಪ್ರಚಾರ ಮಾಡಿದವರು. ಎಂಟು ತಿಂಗಳಲ್ಲೇ ಐದು ಗ್ಯಾರಂಟಿಗಳು ಜಾರಿಯಾದ ಬಳಿಕ ಕೆಲವೇ ತಿಂಗಳ ನಂತರ ನಿಲ್ಲಿಸುತ್ತಾರೆ ಎಂಬ ಸುಳ್ಳು ಮಾಹಿತಿ ಹರಡುತ್ತಿವೆ. ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ‌ಸ್ಥಗಿತವಾಗಿದೆ ಎಂಬ ಸುಳ್ಳು ಆಪಾದನೆ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ವಿಧಾನಸೌಧ ಮಹಾದ್ವಾರದ ಬಳಿ ಗುರುವಾರ ಏರ್ಪಡಿಸಿರುವ ರಾಜ್ಯಮಟ್ಟದ ಎರಡನೇ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲುವುದಿಲ್ಲ. ಅಭಿವೃದ್ಧಿ ಅರ್ಥವೇ ರಾಜ್ಯದ ವಿರೋಧ ಪಕ್ಷಗಳಿಗೆ ಗೊತ್ತಿಲ್ಲವೆಂದು ಕಿಡಿಕಾರಿದರು.
ಸಾಮಾಜಿಕ, ಆರ್ಥಿಕ ಬದಲಾವಣೆ ಹಾಗೂ ಸಮ ಸಮಾಜ ನಿರ್ಮಾಣವೂ ಅಭಿವೃದ್ಧಿ ಭಾಗವಾಗಿದೆ. ಐದು ಗ್ಯಾರಂಟಿ ಯೋಜನೆಗಳ ಪ್ರಧಾನ ಉದ್ದೇಶವೂ ಇದೇ ಆಗಿದೆ. ಸಮಾನತೆ, ಭ್ರಾತೃತ್ವ ನೆಲೆಗೊಳಿಸಿ, ಏಳು ಕೋಟಿ ಕನ್ನಡಿಗರ ಹಿತರಕ್ಷಿಸುವುದು ಕಾಂಗ್ರೆಸ್ ಸರ್ಕಾರದ ಬದ್ಧತೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಆಡಳಿತ ಚುರುಕುಗೊಳ್ಳಬೇಕು, ಜನರ ಬಳಿಗೆ ಸರ್ಕಾರವನ್ನು ಕೊಂಡೊಯ್ಯಬೇಕು ಎಂಬ ಕಾರಣಕ್ಕೆ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುತ್ತಿದೆ. ರಾಜ್ಯಮಟ್ಟದ ಮೊದಲ
ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ಐದು ಸಾವಿರ ಅರ್ಜಿಗಳಲ್ಲಿ ಶೇಕಡ 98ರಷ್ಟು ವಿಲೇವಾರಿಯಾಗಿವೆ. ಉಳಿದ 200 ಅರ್ಜಿಗಳು ಆದಷ್ಟು ಬೇಗ ಇತ್ಯರ್ಥವಾಗಲಿವೆ ಎಂಬ ಭರವಸೆ ನೀಡಿದರು.
ಸಣ್ಣಪುಟ್ಟ ಸಮಸ್ಯೆ ಹೊತ್ತು ಬೆಂಗಳೂರಿಗೆ ಬರಬಾರದು..ಜಿಲ್ಲಾ ಮತ್ತು ತಾಲ್ಲೂಕು ಮಟ್ಟಲ್ಲೇ ಜನರ ಸಮಸ್ಯೆ ಬಗೆಹರಿಯಬೇಕು. ಜಿಲ್ಲಾ ಮಟ್ಟದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ರಾಜ್ಯಮಟ್ಟದಲ್ಲಿ ನಾವು ಬಗೆಹರಿಸುತ್ತೇವೆ. ಮೂರು ತಿಂಗಳಲ್ಲಿ ಅರ್ಜಿಗಳಿಗೆ ಉತ್ತರಿಸಬೇಕು ನನ್ನ ಸ್ಪಷ್ಟ ಸೂಚನೆಯನ್ನ ಅಧಿಕಾರಿಗಳಿಗೆ ಸೂಚನೆ ನೀಡಿರುವೆ. ಪರಿಹಾರ ಮಾಡಲಾಗಿಲ್ಲವೆಂದರೆ ಹಿಂಬರಹ ಕೊಡುವುದಕ್ಕೆ ತಿಳಿಸಿದ್ದೇನೆ.
ಜಿಲ್ಲಾ ಉಸ್ತುವಾರಿ ಆಯಾ ಜಿಲ್ಲೆಯಲ್ಲಿ‌ ಜನಸ್ಪಂದನ ಕಾರ್ಯಕ್ರಮ ಮಾಡಿದ್ದಾರೆ. ಈವರೆಗೆ‌ 108 ಜಿಲ್ಲಾಮಟ್ಟದ ಜನಸ್ಪಂದನ ಕಾರ್ಯಕ್ರಮಗಳಾಗಿವೆ. ರಾಜ್ಯ, ಜಿಲ್ಲಾಮಟ್ಟದಕಾ ರ್ಯಕ್ರಮದಲ್ಲಿ ಸಲ್ಲಿಕೆಯಾಗುವ  ಅಹವಾಲುಗಳಿಗೆ ಸ್ವೀಕೃತಿಪತ್ರ ನೀಡಲಾಗುತ್ತದೆ. ಮನವಿ ಕಾನೂನು ಬದ್ಧವಾಗಿದ್ದರೆ ಪರಿಹಾರ ದೊರೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಖಚಿತಪಡಿಸಿದರು.
ಜನರ ಅಹವಾಲು ಸ್ವೀಕಾರಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಯಿತ್ತು. ಇಲಾಖೆವಾರು ಕೌಂಟರ್ ಗಳಿದ್ದವು. ಆದರೆ ಕುಂದುಕೊರತೆ ಆಲಿಸಲು ಸಿಎಂ ಸಿದ್ದರಾಮಯ್ಯ ಜನರ ಬಳಿಗೆ ಬಂದಾಗ ನೂಕು- ನುಗ್ಗಲು. ಸಾರ್ವಜನಿಕರು ಒಂದೇ ಬಾರಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಮುಗಿಬಿದ್ದರೆ, ಸಿಎಂ ಅರ್ಜಿಗಳನ್ನು ಸ್ವೀಕರಿಸುತ್ತಾ ಮುನ್ನಡೆದರು. ನೂಕಾಟ, ತಳ್ಳಾಟದಲ್ಲಿ ಜನರು ಹೊತ್ತು ತಂದ ಸಮಸ್ಯೆ ಏನೆಂಬುದು ತಿಳಿಯಲಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
