ಬೆಂಗಳೂರು: ಅಮರಶಿಲ್ಪಿ ಜಕಣಾಚಾರಿ ವಿಶ್ವಕರ್ಮ ಜಾತಿಯಲ್ಲಿ ಜನಿಸಿದವರು. ಅವರ ಚರಿತ್ರೆ ಗೊತ್ತಾಗಬಾರದು ಎಂಬ ಕಾರಣಕ್ಕೆ, ಅವರೊಬ್ಬ ಕಾಲ್ಪನಿಕ ವ್ಯಕ್ತಿ ಎನ್ನುತ್ತಾ ಇತಿಹಾಸವನ್ನು ತಿರುಚಿರುವ ಸಾಧ್ಯತೆ ಇದೆ. ಪ್ರತಿಯೊಬ್ಬ ಚರಿತ್ರೆಕಾರನ ಬಗ್ಗೆ ಎಲ್ಲರಿಗೂ ಗೊತ್ತಿರಬೇಕು. ಈ ನಿಟ್ಟಿನಲ್ಲಿ ಹಂಪಿ ಕನ್ನಡ ವಿ.ವಿ.ಯಲ್ಲಿ ವಿಶ್ವಕರ್ಮ ಅಧ್ಯಯನ ಪೀಠ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಕನ್ನಡ ಮತ್ತು ಸಂಸತಿ ಇಲಾಖೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೆ ಹಾಗೂ ಜಕಣಾಚಾರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚರಿತ್ರೆಕಾರರು ಕಾಲ್ಪನಿಕ ವ್ಯಕ್ತಿ ಎಂದು ವಾದಿಸುತ್ತಾ ಬಂದರೆ ಜನರು ಗೊಂದಲಕ್ಕೆ ಒಳಗಾಗುತ್ತಾರೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಚರಿತ್ರೆಕಾರನ ಬಗ್ಗೆ ಅಧ್ಯಯನ ನಡೆಸಬೇಕು. ಸರ್ಕಾರ ವಿಶ್ವಕರ್ಮ ಸಮಾಜದೊಂದಿಗೆ ಇದೆ. ಮಠದ ಅಭಿವೃದ್ಧಿಗೆ ಬೇಕಾಗಿರುವ ಆರ್ಥಿಕ ಸಹಾಯ ಮಾಡಲಾಗುವುದು. ಪ್ರಸ್ತುತ ಸರ್ಕಾರದ ವತಿಯಿಂದ ಮಾಡಲಾಗುವ ರಾಜ್ಯಮಟ್ಟದ ಜಯಂತಿಗಳನ್ನು ಬೆಂಗಳೂರಿನಲ್ಲೇ ಆಯೋಜಿಸುವಂತೆ ಸೂಚಿಸಿದ್ದೇನೆ. ಅಂತೆಯೇ ಜಯಂತಿ ಕಾರ್ಯಕ್ರಮಗಳನ್ನು ಜಿಲ್ಲಾಮಟ್ಟದಲ್ಲಿ ಪ್ರತ್ಯೇಕವಾಗಿ ಮಾಡಲಾಗುವುದು ಎಂದು ತಿಳಿಸಿದರು.
ಜಾತಿ ರಹಿತ ಸಮಾಜ ನಿರ್ಮಾಣ ಆಗಬೇಕೆಂದು ಸಂವಿಧಾನ ಬಯಸುತ್ತದೆ. ಮನುಷ್ಯನ ಸ್ವಾರ್ಥದಿಂದ ಅಸಮಾನತೆ ಉಂಟಾಗಿದೆ. ಸಮ ಸಮಾಜ ನಿರ್ಮಾಣವಾಗಬೇಕೆಂದರೆ ಮೊದಲು ಜಾತೀಯತೆ ತೊಲಗಬೇಕು. ಆಗ ಪರಿವರ್ತನೆ ಆರಂಭವಾಗುತ್ತದೆ. ಪ್ರತಿಯೊಬ್ಬರಿಗೂ ಶಿಕ್ಷಣ ದೊರಕಿದಾಗ ಎಲ್ಲರೂ ಮುಖ್ಯಭೂಮಿಕೆಗೆ ಬರುತ್ತಾರೆ. ಪ್ರಸ್ತುತ ಸರ್ಕಾರದ ವತಿಯಿಂದ ಹಿಂದುಳಿದ ವರ್ಗಕ್ಕೆ ಆರ್ಥಿಕ ಶಕ್ತಿ ನೀಡುವ ಕೆಲಸ ಆಗುತ್ತಿದೆ ಎಂದರು.
ನರೇಂದ್ರ ಮೋದಿ ದೇಶದ ಪ್ರಧಾನಿ ಆಗಿರುವುದು, ನಾನು ರಾಜ್ಯದ ಮುಖ್ಯಮಂತ್ರಿ ಆಗಿರುವುದು ಸಂವಿಧಾನದ ಶಕ್ತಿಯಿಂದ. ಸಂವಿಧಾನದ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಸಂವಿಧಾನಕ್ಕೆ ಧಕ್ಕೆ ತರುವವರನ್ನು ನಿರ್ದ್ಯಾಣ್ಯವಾಗಿ ಪ್ರತಿಯೊಬ್ಬರೂ ವಿರೋಧ ಮಾಡಬೇಕು ಎಂದು ಹೇಳಿದರು.
ಪ್ರಶಸ್ತಿ ಪುರಸತ ಎಸ್​.ಪಿ.ಜಯಣ್ಣಾಚಾರ್​ ಮಾತನಾಡಿ, ಸರ್ಕಾರ ಶಿಲ್ಪಕಲಾ ತರಬೇತಿ ನೀಡುವ ಕಾಲೇಜಿಗಳನ್ನು ಆರಂಭಿಸಿರುವುದರ ಲವಾಗಿ ಇಂದಗೂ ಜಕಣಾಚಾರಿ ಅವರ ಸಂತತಿ ಉಳಿದುಕೊಂಡಿದೆ. ಪ್ರಸ್ತುತ ಶಿಲ್ಪಿಗಳಿಗೆ ಸುಲಭವಾಗಿ ಕಚ್ಛಾ ವಸ್ತುಗಳು ಲಭಿಸುತ್ತಿಲ್ಲ. ನಮ್ಮ ಅಗತ್ಯಕ್ಕೆ ಬೇಕಾಗಿರುವ ಕಲ್ಲುಗಳು ಮೈಸೂರು, ಚಾಮರಾಜನಗರ, ಹೆಗ್ಗಡದೇವನಕೋಟೆ ಮುಂತಾದ ಭಾಗದಲ್ಲಿರುವ ಕಾಡುಗಳಲ್ಲಿ ಲಭಿಸುತ್ತವೆ. ಅಲ್ಲಿ ಪ್ರಸ್ತುತ ಹುಲಿಗಳಿದ್ದು, ರತಾರಣ್ಯವಾದ್ದರಿಂದ ಅಲ್ಲಿಗೆ ನಮಗೆ ಪ್ರವೇಶ ಇಲ್ಲದಂತಾಗಿದೆ. ಈ ಸಮಸ್ಯೆಯನ್ನು ಸರ್ಕಾರ ಬಗೆಹರಿಸಬೇಕು ಎಂದು ಮನವಿ ಮಾಡಿದರು.
ಜ್ಞಾನಪೀಠ ಪುರಸತ ಡಾ.ಚಂದ್ರಶೇಖರ ಕಂಬಾರ, ಹಂಪಿ ವಿಶ್ವವಿದ್ಯಾಲಯದ ಡಾ.ವಾಸುದೇವ ಬಡಿಗರ್​, ಕನ್ನಡ ಮತ್ತು ಸಂಸತಿ ಇಲಾಖೆ ನಿರ್ದೇಶಕಿ ಡಾ.ಧರಣೀದೇವಿ ಮಾಲಗತ್ತಿ, ಕಾರ್ಯದರ್ಶಿ ಡಾ.ಎನ್​.ಮಂಜುಳಾ, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಪಿ.ಸತ್ಯವತಿ ಮತ್ತಿತರರಿದ್ದರು.
ಜಕಣಾಚಾರಿ ಅವರೊಬ್ಬ ಕಾಲ್ಪನಿಕ ವ್ಯಕ್ತಿ ಎಂದು ಹೇಳಿಕೊಂಡು ಬರಲಾಗುತ್ತಿದೆ. ಅವರೊಬ್ಬ ಕಾಲ್ಪನಿಕ ವ್ಯಕ್ತಿಯಾಗಿರುತ್ತಿದ್ದರೆ, ಸಮಾಜದಲ್ಲಿ ಇಂದು ಅಮರ ಶಿಲ್ಪಿಯಾಗಿ ಗುರುತಿಸಿಕೊಳ್ಳುತ್ತಿರಲಿಲ್ಲ. ಅವರೊಬ್ಬ ಚರಿತ್ರಾರ್ಹ ವ್ಯಕ್ತಿಯಾಗಿದ್ದಾರೆ. ಹೀಗಿರುವಾಗ ಸಂಸ್ಮರಣೆ ಅಗತ್ಯವಾಗಿ ಆಗಬೇಕಿದೆ.-ಶಿವಸುಜ್ಞಾನಮೂರ್ತಿ ಸ್ವಾಮೀಜಿ, ಅರಕಲಗೂಡು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 16 =
Remember me
