ಬೆಂಗಳೂರು:ಮುಂದಿನ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ, ಜನರು ಬಹಳ ಸಂತೋಷದಿಂದ ಇದ್ದಾರೆ. ನಮ್ಮ ಗ್ಯಾರಂಟಿಗಳಿಂದ ಖುಷಿಯಾಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುತ್ತೇವೆ. ವಿರೋಧ ಪಕ್ಷಗಳು ಮೀಟಿಂಗ್ ಮಾಡಿ I.N.D.I.A. ಹೆಸರಿನಲ್ಲಿ ಒಂದಾಗಿದ್ದು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.ಇದನ್ನೂ ಓದಿ:ಕಸದ ತೊಟ್ಟಿಯಿಂದ ಗ್ರಾಹಕರಿಗೆ ಸ್ನಾಕ್ಸ್​​ ನೀಡಿದ ಮಹಿಳೆ: ಘಟನೆ ಬೆಳಕಿಗೆ ಬಂದಿದ್ದು ಹೀಗೆ..2015ರಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ನಡೆದಿತ್ತು. ಅವತ್ತು ಅನಂತ್ ಕುಮಾರ್ ಮನವಿ ಮಾಡಿದ್ದಕ್ಕೆ ನಿರ್ಮಾಲಾ ಸೀತಾರಾಮನ್ ಮತ್ತು ಗೆಹ್ಲೋಟ್​ ಸೇರಿದಂತೆ ಬಿಜೆಪಿ ನಾಯಕರನ್ನು ರಾಜ್ಯದ ಅತಿಥಿಯಾಗಿ ಮಾಡಿಕೊಟ್ಟಿದ್ದೆ. ಅವರೇನು ದೇಶದ ವಿಚಾರ ಚರ್ಚೆ ಮಾಡಲು ಇಲ್ಲಿಗೆ ಬಂದಿದ್ದರೇ? ಎಂದು ಹೇಳಿದ್ದಾರೆ.ಈ ಹಿಂದೆ ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿ, ಅವತ್ತು ವಿರೋಧ ಪಕ್ಷದ ‌ನಾಯಕರಿಗೆ ಆಹ್ವಾನ ನೀಡಿದ್ದರು. ಬಹಳ ವಿರೋಧ ಪಕ್ಷದ ನಾಯಕರು ಅವತ್ತು ಬಂದಿದ್ದರು. ಆಗ ಐಎಎಸ್ ಅಧಿಕಾರಿಗಳನ್ನು ಕುಮಾರಸ್ವಾಮಿ ನೇಮಕ ಮಾಡಿದ್ದರು. ಆದರೂ ಕೂಡ ನಿನ್ನೆ ಕುಮಾರಸ್ವಾಮಿ ಧರಣಿ ಮಾಡಿದ್ದಾರೆ. ಡ್ಯಾನಿಶ್ ಅಲಿ ಎನ್ನುವವರ ಜತೆಗೆ ಜೆಡಿಎಸ್​​ನ ಜನರಲ್ ಸೆಕ್ಯುರಿಟಿಗೆ ಐಎಎಸ್ ಅಧಿಕಾರಿ ನೇಮಿಸಿದ್ದರು ಎಂದು ಬಿಜೆಪಿ ಹಾಗೂ ಜೆಡಿಎಸ್ ಶಿಷ್ಟಾಚಾರ ಉಲ್ಲಂಘನೆ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 + 4 =
Remember me
