ಬೆಂಗಳೂರು:ಇಂದು (ಫೆ.26) 2024-25ನೇ ಸಾಲಿನ ರಾಜ್ಯ ಬಜೆಟ್ ಅನ್ನು ಬೆಳಗ್ಗೆ 10:15ಕ್ಕೆ​ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ, ತಮ್ಮ 15ನೇ ಆಯವ್ಯಯವನ್ನು ಮಂಡಿಸುವ ಮುಖೇನ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಇದನ್ನೂ ಓದಿ:ಹಾಲಿ ಋುತುವಿನ ಮೊದಲ ಪಂದ್ಯದಲ್ಲಿ ಕೋಲ್ಕತಾ ಥಂಡರ್‌ ಬೋಲ್ಟ್ಸ್‌ ವಿರುದ್ಧ ಬೆಂಗಳೂರು ಟಾರ್ಪಿಡೊಸ್‌ಗೆ ಗೆಲುವು
ಇಲ್ಲಿಯವರೆಗೆ 14 ಬಾರಿ ಬಜೆಟ್​ ಮಂಡಿಸಿ, ತಮ್ಮದೇ ದಾಖಲೆ ನಿರ್ಮಿಸಿರುವ ಸಿಎಂ ಸಿದ್ದರಾಮಯ್ಯ, ಇಂದು ಮಂಡಿಸುತ್ತಿರುವ 15ನೇ ಬಜೆಟ್​ ಇದಾಗಿದೆ ಎಂಬುದು ವಿಶೇಷ. ಲೋಕಸಭೆ ಚುನಾವಣೆ ಸಮೀಪಿಸುವ ಮುನ್ನ ಬಜೆಟ್​ ಘೋಷಿಸಲು ಮುಂದಾಗಿರುವ ಮುಖ್ಯಮಂತ್ರಿಗಳು, ಈ ಬಾರಿ ಜನರಿಗೆ ಹೊರಯಾಗದಂತೆ, ಲಾಭದಾಯಕವಾಗುವಂತೆ ನಡೆಸಿಕೊಡಬಹುದು ಎಂಬ ನಿರೀಕ್ಷೆ ಹೆಚ್ಚಿದೆ.
ಚುನಾವಣಾ ಸಮೀಪದಲ್ಲಿರುವ ಕಾರಣ ಜನರ ಮೇಲೆ ತೆರಿಗೆ ಭಾರ ಹೇರದ ಬಜೆಟ್​ ಇದಾಗಿರಲಿದೆ ಎಂದು ಹೇಳಲಾಗಿದ್ದು, ಕಳೆದ ಬಾರಿಗಿಂತ ಈ ಬಾರಿಯ ಬಜೆಟ್​ನ ಮೊತ್ತ ಹೆಚ್ಚಿರಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಬಜೆಟ್​ನಲ್ಲಿ ಏನೇನು ಘೋಷಣೆಯಾಗಲಿದೆ? ಯಾವ ಕ್ಷೇತ್ರಗಳಿಗೆ ಏನು ಸಿಗಲಿದೆ? ಎಂಬ ನಿರೀಕ್ಷೆಗಳು ಸದ್ಯ ರಾಜ್ಯದ ಜನರಲ್ಲಿ ಬೆಟ್ಟದಷ್ಟಿದೆ.
ಇದನ್ನೂ ಓದಿ:ಪಂಜಾಬ್​ನಲ್ಲಿ ರೈಲು ತಡೆ, ಅಂತರ್ಜಾಲ ನಿರ್ಬಂಧ; ದೆಹಲಿ ಗಡಿಯಲ್ಲಿ 12 ಸಾವಿರ ರೈತರು
ಬರ ಪರಿಹಾರ, ರೈತರನ್ನು ಮದುವೆಯಾಗುವ ಹೆಣ್ಣಿಗೆ 5 ಲಕ್ಷ ರೂ. ಘೋಷಣೆ, ಕೃಷಿ ಯಂತ್ರೋಪಕರಣ, ರಸಗೊಬ್ಬರದ ಸಬ್ಸಿಡಿ ಹೆಚ್ಚಳ,ರೈತರಿಗೆ 5 ಲಕ್ಷ ಜೀವ-ಆರೋಗ್ಯ ವಿಮೆ, ಬೆಂಬಲ ಬೆಲೆ, ಹಾಲು ಉತ್ಪಾದಕರಿಗೆ 5-10 ರೂ. ಪ್ರೋತ್ಸಾಹ ಧನದ ನಿರೀಕ್ಷೆ ಹೀಗೆಜನರ ಮುಂತಾದ ನಿರೀಕ್ಷೆಗಳಿಗೆ ಸಿಗುವ ಉತ್ತರವೇನು? ಯಾರಿಗೆ ನಿರಾಸೆ? ಎಂಬುದು ಇಂದಿನ ಬಜೆಟ್​ನ ಕಡೆಯಲ್ಲಿ ಸ್ಪಷ್ಟವಾಗಲಿದೆ,(ಏಜೆನ್ಸೀಸ್).
ಈ ನಟ ಯಾರೆಂದು ಗೊತ್ತಿಲ್ಲದಿದ್ದರೂ ಇವರ ಡೈಲಾಗ್ ಮಾತ್ರ ಪಕ್ಕಾ ನೆನಪಿರುತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
