ಬೆಂಗಳೂರು:ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಉತ್ತರ ನೀಡಿದ್ದು, ವಿಪಕ್ಷ ಬಿಜೆಪಿಗೆ ಚಾಟಿ ಬೀಸಿದ್ದಾರೆ.
ಬಿಜೆಪಿಯವರ ಹುನ್ನಾರ ಇಷ್ಟೆ. ಒಂದು, ಮುಖ್ಯಮಂತ್ರಿಯ ಹೆಸರಿಗೆ ಮಸಿ ಬಳಿಯುವುದು. ಎರಡನೆಯದು, ಸರ್ಕಾರ ಪರಿಶಿಷ್ಟ ಜಾತಿ/ ಪಂಗಡಗಳ ವಿರುದ್ಧ ಎಂದು ಬಿಂಬಿಸುವುದು. ಈ ಎರಡೂ ಎಂದಾದರೂ ಸಾಧ್ಯವೆ? ಇಡೀ ಬಿಜೆಪಿ, ಬಿಜೆಪಿಯ ನಾಯಕತ್ವ ಸಂವಿಧಾನ ಜಾರಿಗೆ ಬಂದ ದಿನದಿಂದಲೂ ದಮನಿತ ಸಮುದಾಯಗಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರುದ್ಧವಾಗಿದೆ. ಮಹಿಳೆಯರ ವಿರುದ್ಧವಾಗಿದೆ. ದಮನಿತರ ಪರವಾದ ಪ್ರತಿ ನಿಲುವು, ಪ್ರತಿ ಕಾಯ್ದೆ, ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರಗಳೇ. ಇದೇ ಬಿಜೆಪಿ ಆಡಳಿತದಲ್ಲಿದ್ದಾಗ ಯಾವ ಯಾವ ನಿಗಮಗಳಲ್ಲಿ ಏನೇನೆಲ್ಲ ನುಂಗಿದ್ದಾರೆ ಎಂದು ಕೂಡ ಚರ್ಚೆ ನಡೆಯುತ್ತಿದೆ. ನುಂಗುವುದರಲ್ಲಿ ಜಾಣರಾಗಿರುವ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಇದಕ್ಕಿಂತ ದುರಂತ ಬೇರೆ ಇಲ್ಲ. ವಿರೋಧ ಪಕ್ಷದವರು ತಮ್ಮ ಅಜೆಂಡಾ ಸಾಧಿಸಿಕೊಳ್ಳಲು ಯಾವ ಸುಳ್ಳನ್ನು ಬೇಕಾದರೂ ಹೇಳಬಲ್ಲರು ಎಂಬುದು ಇಲ್ಲಿ ಸಾಬೀತಾಗಿದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಈ 89.63 ಕೋಟಿಗಳಷ್ಟು ಹಣ ಅಕ್ರಮವಾಗಿ ಹೈದರಾಬಾದಿನ ಆರ್ ಬಿ ಎಲ್ ಬ್ಯಾಂಕಿಗೆ ವರ್ಗಾವಣೆಯಾಗಿರುತ್ತದೆ. [ಈ 89.63 ಕೋಟಿಗಳಲ್ಲಿ 5 ಕೋಟಿ ರೂ ವಾಪಸ್ಸು ಬಂದಿರುತ್ತದೆ]. 89.63 ಕೋಟಿ ರೂಪಾಯಿಗಳಲ್ಲಿ 45,02,98,000 ರೂಪಾಯಿಗಳು ಉಳಿತಾಯ ಖಾತೆಯಿಂದ ವರ್ಗಾವಣೆಯಾಗಿರುತ್ತವೆ. ಇನ್ನುಳಿದ 44.60 ಕೋಟಿ ರೂಪಾಯಿಗಳನ್ನು ನಿಗಮವು ಇಟ್ಟಿದ್ದ ಫಿಕ್ಸೆಡ್ ಡಿಪಾಸಿಟ್ ಮೇಲೆ ಓವರ್ ಡ್ರಾಫ್ಟ್ ತೆಗೆದಿದ್ದಾರೆ. ಓವರ್ ಡ್ರಾಫ್ಟ್ ಎಂದರೆ ಒಂದು ರೀತಿಯ ಸಾಲವೇ. ಇದು ಅತ್ಯಂತ ಪರಿಣತರಾದ, ಪಳಗಿದ ಖದೀಮರ ಕೆಲಸವೆ. ನಿಗಮವು ದಿನಾಂಕ: 30-3-2024 ರಂದು 50.00 ಕೋಟಿ ರೂಪಾಯಿಗಳನ್ನು ಫಿಕ್ಸೆಡ್ ಡಿಪಾಸಿಟ್ ನಲ್ಲಿಟ್ಟಿದೆ. ಸ್ಟಿçಕ್ಟ್ಲಿ ಸ್ಪೀಕಿಂಗ್, ಈ 50.00 ಕೋಟಿ ಫಿಕ್ಸೆಡ್ ಡಿಪಾಸಿಟ್ ನಮ್ಮ ವಶದಲ್ಲಿಯೆ ಇದೆ. ಯಾಕೆಂದರೆ ಅದು ಫಿಕ್ಸೆಡ್ ಡಿಪಾಸಿಟ್. ವಿರೋಧ ಪಕ್ಷದವರು [ ವಿಜಯೇಂದ್ರ] ಹೇಳಿದ ಎರಡನೆ ಸುಳ್ಳು ರಾಜ್ಯ ಸರ್ಕಾರವು ಸಿಬಿಐನವರು ಎಫ್‌ಐಆರ್ ದಾಖಲಿಸಿದ ಮೇಲೆ ಎಸ್.ಐ.ಟಿ. ರಚಿಸಿದೆ ಎಂದು ಹೇಳಿದ್ದಾರೆ. ವಾಸ್ತವವಾಗಿ ನಮ್ಮಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಿನಾಂಕ 28-5-2024 ರಂದು ಕ್ರೆöÊಂ ನಂ. 118/2024 ರಂತೆ ಏಫ್ ಐ ಆರ್ ದಾಖಲಾಗಿದೆ. ರಾಜ್ಯ ಸರ್ಕಾರವು 31-5-2024 ರಂದು ಆದೇಶ ಹೊರಡಿಸಿ ಎಸ್.ಐ.ಟಿ. ರಚಿಸಿದೆ. ಸಿಬಿಐ ದಿನಾಂಕ 3-6-2024 ರಂದು ಎಫ್‌ಐಆರ್ ದಾಖಲಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನ ದುರ್ಬಳಕೆ ವಿಷಯದ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ@siddaramaiahಅವರ ಉತ್ತರ1/n#ಅಧಿವೇಶನ#AssemblySessionpic.twitter.com/fXaREpY9tF
ಇದನ್ನೂ ಓದಿ:ಶ್ರೀಲಂಕಾ ವಿರುದ್ಧದ ಸರಣಿಗೆ ಯುವ ಆಟಗಾರರ ಕಡೆಗಣನೆ; ಬಿಸಿಸಿಐ ನಡೆಗೆ ಕಿಡಿಕಾರಿದ ಸಂಸದ ಶಶಿ ತರೂರ್
ದಿನಾಂಕ: 03.06.2024 ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ (ಹೆಚ್.ಆರ್.) ಗಿರೀಶ್ ಚಂದ್ರ ಜೋಶಿ ಎನ್ನುವವರು ಎಂ.ಜಿ. ರಸ್ತೆ ಶಾಖೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶ್ರೀಮತಿ ಸುಚಿಸ್ಮಿತಾ ರಾವುಲ್, ಚೀಫ್ ಮ್ಯಾನೇಜರ್ (ಬ್ರಾಂಚ್ ಹೆಡ್) ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಹಾಗೂ Prevention of corruption Acr 17(A)ರಡಿ ತನಿಖೆ ಮಾಡಲು ಅನುಮತಿ ನೀಡಿ ಸಿ.ಬಿ.ಐ. ಗೆ ಪತ್ರ ಬರೆದಿರುತ್ತಾರೆ. ಸಿಬಿಐಗೆ ಬರದಿರುವ ಈ ಪತ್ರದ ಮುಖ್ಯಾಂಶಗಳನ್ನು ನಾನು ಅನುಬಂಧ-1 ರಲ್ಲಿಟ್ಟು ಸದನದಲ್ಲಿ ಮಂಡಿಸುತ್ತಿದ್ದೇನೆ. ಈ ಎರಡರಲ್ಲೂ ಬ್ಯಾಂಕಿನವರೆ ಒಪ್ಪಿಕೊಂಡಿರುವ ಹಾಗೆ ಬ್ಯಾಂಕಿನ ಸಿಬ್ಬಂದಿಗಳೇ ನೇರವಾಗಿ ಈ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂಬುದು ಕಂಡುಬರುತ್ತದೆ.
ದಿನಾಂಕ 28-5-2024 ರಂದು ಮಹರ್ಷಿ ವಾಲ್ಮೀಕಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಎನ್ನವವರು ನಿಗಮದ ಹಣ ಖಾಲಿಯಾಗಿರುವುದರ ಕುರಿತು ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ. ದಿನಾಂಕ: 28.05.2024 ರಂದು ಶ್ರೀ ಎ. ರಾಜಶೇಖರ, ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಇವರು ನಿಗಮದಲ್ಲಿ ನಡೆದ ಅವ್ಯವಹಾರದ ಕುರಿತು ಎ. ಮಣಿಮೇಖಲೈ, ಎಂ.ಡಿ. & ಸಿ.ಇ.ಓ., ಯುಬಿಐ, ಶ್ರೀ ನಿತೇಶ್ ರಂಜನ್, ಶ್ರೀ ರಾಮಸುಬ್ರಮಣ್ಯಂ, ಶ್ರೀ ಸಂಜಯ್ ರುದ್ರ, ಶ್ರೀ ಪಂಕಜ್ ದ್ವಿವೇದಿ, ಕಾರ್ಯನಿರ್ವಾಹಕ ನಿರ್ದೇಶಕರು ಯುಬಿಐನ ಮುಖ್ಯ ವ್ಯವಸ್ಥಾಪಕರಾದ ಶ್ರೀಮತಿ ಶುಚಿಸ್ಮಿತಾ ರವುಲ್, ಎಂ.ಜಿ. ರಸ್ತೆ ಶಾಖೆ ಇವರುಗಳ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಿರುತ್ತಾರೆ. ಅಕ್ರಮ ನಡೆದಿದೆಯೆಂದು ಗೊತ್ತಾದ ಕೂಡಲೆ ಎಫ್.ಐ.ಆರ್ ರಿಜಿಸ್ಟರ್ ಆಗಿದೆ. ಅಕ್ರಮದ ಕುರಿತು ತನಿಖೆ ಮಾಡಲು ಸಮರ್ಥ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ದಿನಾಂಕ: 31-5-2024 ರಂದು ಎಸ್‌ಐಟಿ ರಚಿಸಿದ್ದೇವೆ. ಮೇಲಿನ ಎರಡೂ ಕ್ರಿಮಿನಲ್ ಕೇಸುಗಳನ್ನು ತನಿಖೆ ಮಾಡುವ ಉದ್ದೇಶದಿಂದಲೆ 4 ಜನ ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಎಚ್‌ಡಿ 64 ಸಿಐಡಿ 2024 ರ ಆದೇಶದಂತೆ ಈ ತಂಡ ರಚನೆಯಾಗಿದೆ.
ಎಸ್.ಐ.ಟಿ.ಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡುತ್ತಿದೆ. ಎಸ್.ಐ.ಟಿ. ರಚನೆಯಾದ ಕೂಡಲೆ ಕಾರ್ಯಪ್ರವೃತ್ತವಾದ ಈ ತಂಡವು ಈ ಕೆಳಕಂಡವರುಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ವಿರೋಧ ಪಕ್ಷದವರು ಉದ್ದೇಶಪೂರ್ವಕವಾಗಿಯೆ ಅನೇಕ ವಿಚಾರಗಳನ್ನು ಮರೆಮಾಚುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty + eight =
Remember me
