ಬೆಂಗಳೂರು:ಅಕ್ಕಿ ವಿಚಾರದಲ್ಲಿ ಸೃಷ್ಟಿಯಾಗಿರುವ ಗೊಂದಲದ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧ ಸುಖಾಸುಮ್ಮನೆ ನಾವು ಆರೋಪ ಮಾಡುವುದಿಲ್ಲ. ಮೊದಲು ಕೊಡುತ್ತೇವೆ ಎಂದು ಬಳಿಕ ಆಗುವುದಿಲ್ಲ ಎಂದರೆ ಇವರಿಗೆ ಮಾನ ಮರ್ಯಾದೆ ಇಲ್ಲ ಎಂದು ಹೇಳುವ ಮೂಲಕ ಕೇಂದ್ರದ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ:ಒಂದು ವರ್ಷದ ಅಂತರ.. ಅದೇ ಜಾಗ.. ಒಂದೇ ಥರದಲ್ಲಿ ಸಂಬಂಧಿಕರಿಬ್ಬರ ಸಾವು!
ಈ ಹಿಂದೆ ನಾನು ಅಧಿಕಾರದಲ್ಲಿದ್ದಾಗ 7 ಕೆ.ಜಿ ಅಕ್ಕಿಯನ್ನು ಕೊಡುತ್ತಿದ್ದೆ, ಬಳಿಕ ಬಿಜೆಪಿಯವರು 5 ಕೆ.ಜಿಗೆ ಇಳಿಕೆ ಮಾಡಿದರು. ಹಸಿವು ಮುಕ್ತ ಕರ್ನಾಟಕ ಮಾಡಬೇಕು ಎಂಬುದು ನಮ್ಮ ಗುರಿ, ಯಾರು ಹಸಿವಿನಿಂದ ಮಲಗಬಾರದು. ಹಾಗಾಗಿ ಇನ್ನು 5 ಕೆಜಿ ಅಕ್ಕಿ ಹೆಚ್ಚಿಗೆ ಕೊಡುತ್ತೇವೆ ಎಂದು ಚುನಾವಣಾ ಪೂರ್ವದಲ್ಲಿ ಹೇಳಿದ್ದೆವು ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಿಂದ 4 ಕೋಟಿ 42 ಲಕ್ಷ ಜನರಿಗೆ ಇದರ ಉಪಯೋಗ ದೊರೆಯಲಿದೆ. ಇದಕ್ಕೆ ಸುಮಾರು 10, 275 ಕೋಟಿ ರೂ. ಅಗತ್ಯವಿದೆ. ನಾವು ಎಫ್​​ಸಿಐ ಬಳಿ 2 ಲಕ್ಷ 28 ಸಾವಿರದ ಮೆಟ್ರಿಕ್ ಟನ್ ಅಕ್ಕಿ ಬೇಕು ಎಂದು ಮನವಿ ಮಾಡಿದ್ದೆವು. ಆರಂಭದಲ್ಲಿ ಒಪ್ಪಿ ಪತ್ರ ಬರೆದಿದ್ದರು, ನಂತರದಲ್ಲಿ ನಾವು ರಾಜ್ಯಕ್ಕೆ ಅಕ್ಕಿ ಕೊಡುವುದನ್ನು ನಿಲ್ಲಿಸಿದ್ದೇವೆ ಎಂದು ಪತ್ರ ಬರೆಯುವ ಮೂಲಕ ನಾವು ಪೂರೈಕೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬಜೆಟ್​ನಲ್ಲಿ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡಿಲ್ಲ: ವಾಣಿಜ್ಯೋದ್ಯಮ ಸಂಸ್ಥೆ ಕಳವಳ
ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು, ಬಡವರ ವಿರೋಧಿ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸುಖಾಸುಮ್ಮನೆ ನಾವು ಆರೋಪ ಮಾಡುವುದಿಲ್ಲ. ಮೊದಲು ಕೊಡುತ್ತೇವೆ ಎಂದು ಹೇಳಿ ತದನಂತರ ಆಗುವುದಿಲ್ಲ ಎಂದು ಹೇಳುತ್ತಾರೆ. ಇವರಿಗೆ ಮಾನಮರ್ಯಾದೆ ಇಲ್ಲ ಎಂದು ಹೇಳಿದರು.
ಬಡವರಿಗೆ ಊಟ ಕೊಡುವುದಕ್ಕೆ ಅಕ್ಕಿ ಇಟ್ಟುಕೊಂಡು ಇಲ್ಲ ಎಂದು ಹೇಳಿದರು. ಅದಕ್ಕಾಗಿ ಅಕ್ಕಿ ಲಭ್ಯವಾಗುವವರೆಗೂ ಈ ತಿಂಗಳ 10ನೇ ತಾರೀಖಿನಿಂದ 5 ಕೆಜಿಗೆ 170 ರೂ. ಹಣ ಹಣ ಕೊಡಲು ನಿರ್ಧರಿಸಿದ್ದೇವೆ. ಓಪನ್ ಮಾರುಕಟ್ಟೆಯಿಂದ ಅಕ್ಕಿ ಪಡೆಯಲು ಟೆಂಡರ್ ಕರೆದಿದ್ದೇವೆ. ಅಕ್ಕಿ ದೊರೆತ ಕೂಡಲೇ ಹಣ ಬದಲಿಗೆ ಅಕ್ಕಿ ಕೊಡುತ್ತೇವೆ ಎಂದು ಸಿಎಂ ಹೇಳಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 7 =
Remember me
