ಬೆಂಗಳೂರು:ಜೆಡಿಎಸ್ ಕೂಡ ಕೋಮುವಾದಿ ಪಕ್ಷ, ಇದು ಗೊತ್ತಾದ ಮೇಲೆ ಮಾಜಿ ಶಾಸಕರಾದ ಗೌರಿ ಶಂಕರ್, ಮಂಜುನಾಥ್ ಜಾತ್ಯತೀತ ಪಕ್ಷ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಅನ್ನ ಜಾತ್ಯತೀತ ಪಕ್ಷ ಎಂದು ಹೇಳೋದಿಲ್ಲ. ಜೆಡಿಎಸ್ ಈಗ ಬಿಜೆಪಿ ಜತೆ ಹೋಗಿದ್ದಾರೆ. ಹಾಗಾಗಿ ಸೆಕ್ಯುಲರ್ ಪದವನ್ನ ತೆಗೆದು ಹಾಕಬೇಕು ಎಂದು ಕುಟುಕಿದರು.
ಅವರಾಗಿಯೇ ಇದನ್ನ ತೆಗೆದು ಹಾಕಿದರೆ ಒಳ್ಳೆಯದು, ಇಲ್ಲದಿದ್ದರೆ ಜನರೇ ಅದನ್ನ ತೆಗೆದು ಹಾಕುತ್ತಾರೆ ಎಂದ ಅವರು, ನಾವಿದ್ದಾಗ ಮಾತ್ರ ಜೆಡಿಎಸ್ ಜಾತ್ಯತೀತ ಪಕ್ಷವಾಗಿತ್ತು ಎಂದರು.
ಜೆಡಿಎಸ್ ಬಿಜೆಪಿಯ ಬಿಟೀಂ ಎಂದು ಹಿಂದೆ ಹೇಳಿದ್ದೆ.ಬಆಗ ಕುಮಾರಸ್ವಾಮಿ, ದೇವೇಗೌಡರು ಕೆರಳಿ ಕೆಂಡಾಮಂಡಲರಾಗಿದ್ದರು. ಆದರೆ, ಈಗ ಬಿಜೆಪಿ ಜತೆಗೆ ಹೋಗಿ ಕೋಮುವಾದಿ ಪಕ್ಷವಾಗಿದೆ ಎಂದು ಟೀಕಿಸಿದರು.
ಇದನ್ನೂ ಓದಿ:ರಾಜಸ್ಥಾನ ಚುನಾವಣೆ; ಕಾಂಗ್ರೆಸ್​ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನರ್ ನಿಧನ
ನನ್ನನ್ನ ಪಕ್ಷದಿಂದಲೇ ತೆಗೆದು ಹಾಕಿದ್ದರು, ನನ್ನನ್ನು ತೆಗೆದುಹಾಕಿ ಬಿಜೆಪಿ, ಜೆಡಿಎಸ್ ಸರ್ಕಾರ ರಚಿಸಿದರು. ಯಡಿಯೂರಪ್ಪಗೆ ಅಧಿಕಾರ ಕೊಡದೆ ಕುಮಾರಸ್ವಾಮಿ ಮಾತು ತಪ್ಪಿದ್ದರು. ಪಾಪ ಯಡಿಯೂರಪ್ಪ ಜತೆ ಈಗ ಇವರು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಏನು ರಾಜಕೀಯ ಪಕ್ಷವಾ? ಅದು ದೇವೇಗೌಡರ ಕುಟುಂಬದ ಪಕ್ಷವಷ್ಟೇ. ಮುಂದಿನ ದಿನಗಳಲ್ಲಿ ಜೆಡಿಎಸ್, ಬಿಜೆಪಿ ಜತೆ ವಿಲೀನ ಆಗಲಿದೆ. ರಾಜಕೀಯ ಕಾರಣಕ್ಕೆ ಈಗ ವಿಲೀನವಾಗದೇ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ವಿಲೀನ ಆಗಬಹುದು ಎಂದರು.
ಈಗ ಬಿಜೆಪಿಯವರಿಗಿಂತ ಕುಮಾರಸ್ವಾಮಿಯೇ ಹೆಚ್ಚು ಮಾತನಾಡುತ್ತಿದ್ದಾರೆ. ಬಿಜೆಪಿಯವರು ಕುಮಾರಸ್ವಾಮಿಯನ್ನು ಛೂ ಬಿಟ್ಟಿದ್ದಾರೆ. ಅದಕ್ಕೆ ಕುಮಾರಸ್ವಾಮಿ ತುಂಬಾ ಮಾತನಾಡುತ್ತಿದ್ದಾರೆ ಎಂದು ಆಪಾದಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − seven =
Remember me
