ಬೆಂಗಳೂರು:ದೇವರಾಜು ಅರಸು ನಂತರ ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಬಾರಿ ಬಜೆಟ್​ ಮಂಡಿಸಿದವರು ಎಂಬ ಖ್ಯಾತಿ ಪಡೆದಿರುವ ಸಿಎಂ ಸಿದ್ದರಾಮಯ್ಯ ದ ಮೋಸ್ಟ್​ ಬ್ಯುಸಿಯೆಸ್ಸ್​ ಪರ್ಸನ್​ ಎಂದೇ ಹೇಳಬಹುದಾಗಿದೆ. ತಮ್ಮ ಬಿಡುವಿಲ್ಲದ ವೇಳೆಯಲ್ಲೂ ಸಿಎಂ ಕುಟುಂಬದವರಿಗಾಗಿ ಸಮಯ ಮೀಡಲಿಡುತ್ತಾರ ಹೇಗೆ ಎಂಬುದರ ಬಗ್ಗೆ ಕುತೂಹಲಕಾರಿ ಮಾಹಿತಿಯೊಂದು ಹೊರಬಿದ್ದಿದೆ.
ಕರ್ನಾಟಕ ಕಾಂಗ್ರೆಸ್​ ಸಾಮಾಜಿಕ ಜಾಲತಾಣ ಖಾತೆ ಎಕ್ಸ್​ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಸಚಿವರು ಸಿಎಂ ಸಿದ್ದರಾಮಯ್ಯ ಅವರ ವೈಯಕ್ತಿಕ ಜೀವನದ ಕುರಿತು ಸಂದರ್ಶನ ಮಾಡಿದ್ದು, ಮುಖ್ಯಮಂತ್ರಿಗಳು ಇಲ್ಲಿ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವೈರಲ್​ ಆಗಿರುವ ವಿಡಿಯೋದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಸಿದ್ದರಾಮಯ್ಯಗೆ ಪ್ರಶ್ನೆ ಕೇಳುವುದನ್ನು ನೋಡಬಹುದಾಗಿದೆ. ಇದಕ್ಕೆ ಉತ್ತರಿಸುವ ಸಿಎಂ, ನಾನು ಕುಟುಂಬದವರಿಗೆ ಸಮಯ ಕೊಟ್ಟಿರುವುದು ತೀರಾ ಕಡಿಮೆ. ಯಾಕೆಂದರೆ ಸಾರ್ವಜನಿಕ ಜೀವನದಲ್ಲಿ ಸಮಾಜವೇ ನಮ್ಮ ಕುಟುಂಬವಾಗಿರುತ್ತದೆ. ಅವರ ಜೊತೆ ಇರಲು ನನಗೆ ಸಮಯ ಸಿಗುವುದು ತುಂಬಾ ಕಡಿಮೆ. ಲೋಹಿಯಾ ಅವರು ಏನು ಹೇಳಿದ್ದರು ಎಂದರೆ ಒಳ್ಳೆಯ ವ್ಯಕ್ತಿ ಆಗಬೇಕೆಂದರೆ ನೀವು ರಾಜಕಾರಣಕ್ಕೆ ಬನ್ನಿ ಆದರೆ, ಮದುವೆಯಾಗಬೇಡಿ ಎಂದಿದ್ದರು. ರಾಜಕೀಯಕ್ಕೆ ಬರುವ ವ್ಯಕ್ತಿಗಳು ಸಮಾಜಕ್ಕೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಸಿಎಂ@siddaramaiahಅವರ ಕೌಟುಂಬಿಕ ಬದುಕಿನ ಬಗ್ಗೆ ಲೋಕಾಭಿರಾಮದ ಮಾತುಗಳು….pic.twitter.com/bJQZjR8Im5
ನಿಮ್ಮ ಮನೆಯ ಹೋಂ ಮಿನಿಸ್ಟರ್​ ಅನ್ನು ಯಾಕೆ ಗೃಹ ಬಂಧನದಲ್ಲಿ ಇರಿಸಿದ್ದೀರಾ ಎಂದು ಸಚಿವ ಸುಧಾಕರ್​ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಾನು ಆಕೆಗೆ ಸ್ವಾತಂತ್ರ್ಯ ಕೊಟ್ಟಿದ್ದು, ಎಲ್ಲಿ ಬೇಕಾದರೂ ಒಡಾಡಬಹುದಾಗಿದೆ. ಪ್ರಮಾಣ ವಸನ ಕಾರ್ಯಕ್ರಮಕ್ಕೂ ಆಕೆಯನ್ನು ಆಹ್ವಾನಿಸಿದ್ದೆ ಆದರೆ, ಆಕೆ ಬರಲಿಲ್ಲ. ನಾನು 1977ರಲ್ಲಿ ವಿವಾಹವಾದೆ ಆ ನಂತರ ತಾಲ್ಲೂಕು ಪಂಚಾಯಿತಿ ಸದಸ್ಯನಾದೆ ಸಾರ್ವಜನಿಕ ಜೀವನದಲ್ಲಿ ಇದುದ್ದರಿಂದ ಕುಟುಂಬದವರಿಗೆ ಸಮಯ ಕೊಟ್ಟಿರುವುದು ತೀರಾ ಕಡಿಮೆ. ಇದು ರೂಢಿಯಾಗಿಬಿಟ್ಟಿದೆ ಎಂದು ಹೇಳಿದ್ದಾರೆ.
ಈ ವೇಳೆ ಸಚಿವರು ಸಿಎಂಗೆ ತಮ್ಮ ಪತ್ನಿಯನ್ನು ಪರಿಚಯ ಮಾಡಿಸಿಕೊಡುವಂತೆ ಕೇಳುವುದನ್ನು ನೋಡಬಹುದಾಗಿದೆ. ಇದಕ್ಕೆ ಒಪ್ಪಿದ ಸಿಎಂ ಒಮ್ಮೆ ಅವರನ್ನು ಕೇಳಿ ನೋಡುತ್ತೇನೆ ಎಂದು ಹೇಳುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಜಮೀರ್​ ಅಹ್ಮದ್, ಪ್ರಿಯಾಂಕ್ ಖರ್ಗೆ, ಡಾ. ಜಿ. ಪರಮೇಶ್ವರ್, ಡಾ. ಎಂ. ಸಿ ಸುಧಾಕರ್, ಶಿವರಾಜ್​ ತಂಗಡಗಿ ಹಾಗೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿ ಅತೀಕ್​ ಅವರನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:16 − five =
Remember me
