ವಿಜಯಪುರ:ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾತ್ಮ ಬಸವಣ್ಣನವರ ಆಶಯಗಳೇ ಕಾಂಗ್ರೆಸ್ ಪಕ್ಷದ ಧ್ಯೇಯ. ಬಸವಣ್ಣನವರ ಆಶಯಗಳ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದು, ಈ ಕಾರ್ಯಕ್ಕೆ ನಾಡಿನ ಜನರ ಪ್ರೋತ್ಸಾಹ ಹಾಗೂ ಬೆಂಬಲ ಅಗತ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ:‘ಯಾರಾದ್ರೂ ಒಬ್ಬರು ಪ್ರೂವ್​ ಮಾಡ್ಲಿ ನೋಡೋಣ’! ಯಾವ ವಿಚಾರಕ್ಕೆ ಹೀಗಂದ್ರು ಸಂಗೀತಾ? ಇಲ್ಲಿದೆ ವಿಡಿಯೋ
“ಮುದ್ದೇಬಿಹಾಳ ಪಟ್ಟಣದ ವಿಬಿಸಿ ಪ್ರೌಢ ಶಾಲೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮತ್ತು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ, ಬಸವಣ್ಣನವರು ನುಡಿದಂತೆ ನಡೆಯಬೇಕು ಎಂದು ಹೇಳಿದ್ದರು. ನಾವು ಬಸವಣ್ಣನವರ ಅನುಯಾಯಿ. ಹೀಗಾಗಿ ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದೇವೆ. ಆ ಮೂಲಕ ನುಡಿದಂತೆ ನಡೆದ ಖ್ಯಾತಿಗೆ ಭಾಜನರಾಗಿದ್ದೇವೆ” ಎಂದರು.
“ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿಯೇ ಚುನಾವಣೆ ಪೂರ್ವದಲ್ಲಿ ನೀಡಿದ ಶಕ್ತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ, ಯುವ ನಿಧಿ ಹಾಗೂ ಗೃಹ ಜ್ಯೋತಿ ಎಂಬ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ‌. ಆ ಮೂಲಕ ನುಡಿದಂತೆ ನಡೆದಿದ್ದೇವೆ. ಈ ಹಿಂದೆ 2013-18ರ ಆಡಳಿತಾವಧಿಯಲ್ಲಿ 165 ಭರವಸೆ ಪೈಕಿ 158 ಭರವಸೆ ಈಡೇರಿಸಿದ್ದೆವು. ಅದರ ಜತೆಗೆ ಸುಮಾರು 30 ಕಾರ್ಯಕ್ರಮ ಕೂಡ ಕೊಟ್ಟಿದ್ದೆವು. ಶೇ. 98 ರಷ್ಟು ಕಾರ್ಯಕ್ರಮ ಜಾರಿಗೊಳಿಸಿದ್ದೆವು. ಆಗಲೂ ನುಡಿದಂತೆ ನಡೆದಿದ್ದೆವು. ಈ ಬಾರಿಯೂ ನುಡಿದಂತೆ ನಡೆದಿದ್ದೇವೆ” ಎಂದರು.
ಇದನ್ನೂ ಓದಿ:ಆಂಗ್ಲರ ವಿರುದ್ಧ ಶತಕ ಸಿಡಿಸಿ ಹೊಸ ದಾಖಲೆ ಬರೆದ ಯಶಸ್ವಿ ಜೈಸ್ವಾಲ್​
“ಹಿಂದುಳಿದ ಜಾತಿಯಿಂದ ಬಂದವನು ನಾನು. ಮೇಲ್ವರ್ಗ, ಕೆಳವರ್ಗ ಎಂದ ಬೇಧ ನಿರ್ಮಾಣವಾಗಬೇಕಾದರೆ, ಅಸಮಾನತೆ ನಿರ್ಮಾಣವಾಗಬೇಕಾದರೆ ಜಾತಿ ವ್ಯವಸ್ಥೆಯೇ ಕಾರಣ. ಹೀಗಾಗಿ ಸಾಮಾಜಿಕ, ಆರ್ಥಿಕವಾಗಿ ಅಸಮಾನತೆ ಉಂಟಾಗಿದ್ದು ಅನೇಕರು ಅಕ್ಷರ ವಂಚಿತರಾದರು. ಅವಕಾಶದಿಂದ ವಂಚಿತರಾದವರು. ಮೇಲ್ವರ್ಗದವರು ಎಲ್ಲ ಸವಲತ್ತು ಅನುಭವಿಸಿದರು‌. ಕಾಯಕ ಸಮಾಜದವರು ಸಮಸ್ಯೆ ಎದುರಿಸಬೇಕಾಯಿತು” ಎಂದರು.
“ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿದರು‌.‌ ಕಾಯಕ ಮಾಡಿಯೇ ಬದುಕಬೇಕೆಂದರು. ಆದರೆ ಕಾಯಕ ಮಾಡುವವರು ಕಾಯಕ ಮಾಡಿಕೊಂಡೇ ಇದ್ದರೆ, ಅನುಭವಿಸುವವರು ಇನ್ನಾರೋ ಆದರು. ಹೀಗಾಗಿ ಈ ಅಸಮಾನತೆ ಅಳಿಯಲು ಬಸವಣ್ಣನವರು ಚಳುವಳಿ ಆರಂಭಿಸಿದರು. ಆ ಚಳುವಳಿ ತೀವ್ರವಾಗಿದ್ದ ಸಂದರ್ಭ ಅಡ್ಡಗಾಲು ಹಾಕಿದರು. ಹೀಗಾಗಿ ಬದಲಾವಣೆ ಆಗಲಿಲ್ಲ” ಎಂದು ಹೇಳಿದರು.
ಇದನ್ನೂ ಓದಿ:ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸದಿದ್ದರೆ ರಸ್ತೆ ಸಂಚಾರ ತಡೆ
“ಬಸವಣ್ಣನವರು ಕಂದಾಚಾರ ಒಪ್ಪಿರಲಿಲ್ಲ. ಅವರ ವಚನ ಪಾಲಿಸಬೇಕು. ಇಲ್ಲವಾದರೆ ಸಮಾಜ ಬದಲಾಗಲು ಸಾಧ್ಯವಿಲ್ಲ. ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಬಸವಣ್ಣನವರು ಅನುಭವ ಮಂಟಪ ನಿರ್ಮಾಣ ಮಾಡಿ ಎಲ್ಲ‌ ಸಮುದಾಯದವರಿಗೆ ಅಲ್ಲಿ ಆಶ್ರಯವನ್ನಿತ್ತಿದ್ದರು. ಹೀಗಾಗಿ ನಾನು ಬಸವಣ್ಣನವರ ಅನುಯಾಯಿ. ಬಸವಜಯಂತಿ‌ ದಿನವೇ 2013 ರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೆ. ಸರ್ಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿದೆ. ಇದೀಗ ಬಸವಣ್ಣನವರ ನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ” ಎಂದರು.
“ಎಲ್ಲ ಜಾತಿ, ಧರ್ಮ, ಎಲ್ಲ ಪಕ್ಷದವರಿಗೆ ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡಿದ147 ಕೋಟಿ ಮಹಿಳೆಯರು ಒಂದೇ ಜಾತಿ, ಪಕ್ಷಕ್ಕೆ ಸೇರಿದವರಾ? ಗೃಹ ಲಕ್ಷ್ಮಿಯಡಿ 1.17 ಕೋಟಿ ಮಹಿಳೆಯರಿಗೆ ತಿಂಗಳಿಗೆ 2000 ರೂಪಾಯಿ ಕೊಟ್ಟಿದ್ದೇವೆ, ಈ ಹಿಂದೆ ಯಾವುದಾದರೂ ಸರ್ಕಾರ ಈ ಯೋಜನೆ ಮಾಡಿತ್ತಾ? ಎಲ್ಲ ಸಮಾಜದ 1.61 ಕೋಟಿ ಬಡವರಿಗೆ ಗೃಹ ಜ್ಯೋತಿ ಯೋಜನೆಯಡಿ ಉಚಿತವಾಗಿ ವಿದ್ಯುತ್‌ ನೀಡಲಾಗುತ್ತಿದೆ. ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಹತ್ತು ಕೆಜಿ ಅಕ್ಕಿ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರ ಅಕ್ಕಿ ಕೊಡಲ್ಲ ಎಂದಾಗ 175 ರೂಪಾಯಿ ಕೊಡುತ್ತಿದ್ದೇವೆ. 1.28 ಕೋಟಿ ಕುಟುಂಬಗಳು ಇದರ ಪ್ರಯೋಜನ ಪಡೆಯುತ್ತಿವೆ” ಎಂದರು.
ಇದನ್ನೂ ಓದಿ:ಕಾರ್ತಿಕ್​ಗೆ ತಂಗಿ ವಿಡಿಯೋ ಕಾಲ್​ ಮಾಡಿದ್ದೇ ವಿನ್​ ಆಗೋಕೇ ಹೆಲ್ಪ್​ ಆಯ್ತಾ?ಸಂಗೀತಾ ಹೇಳಿದ್ದೇನು ಗೊತ್ತಾ?
“ಯುವ ನಿಧಿ ಯೋಜನೆಯಡಿ 4.50 ಕೋಟಿ ಜನರಿಗೆ ಸಹಾಯಧನ ನೀಡಲಾಗುತ್ತಿದೆ. ಇಷ್ಟೆಲ್ಲಾ ಯೋಜನೆ ಈ ಹಿಂದೆ ಯಾವುದಾದರೂ ಸರ್ಕಾರ ಮಾಡಿತ್ತಾ? ಎಂದ ಸಿಎಂ, 38 ಸಾವಿರ ಕೋಟಿ ರೂಪಾಯಿ ಕೇವಲ ಈ ಗ್ಯಾರಂಟಿ ಯೋಜನೆಗಾಗಿ ಖರ್ಚು ಮಾಡುತ್ತಿದ್ದೇವೆ. ಪ್ರಧಾನಿ ಮೋದಿ ಈ ಗ್ಯಾರಂಟಿ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ, ಇದರಿಂದ ಕರ್ನಾಟಕ ದಿವಾಳಿ ಆಗಲಿದೆ ಎನ್ನುತ್ತಿದ್ದರು. ಈಗ ದಿವಾಳಿ ಆಗಿದೆಯಾ? ಸುಭದ್ರ ಆಡಳಿತ ನೀಡುತ್ತಿದ್ದೇವಲ್ವಾ?” ಎಂದು ಸಿಎಂ ಹೇಳಿದರು.
ತಾಳಿ ಕಟ್ಟುವ ಶುಭ ವೇಳೆಗೆ ನಡೆದೇ ಹೋಯ್ತು ಅಚಾತುರ್ಯ! ಕುಟುಂಬಸ್ಥರು ಕಂಗಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − two =
Remember me
