ಬೆಂಗಳೂರು:ಸಿಎಂ ಸಿದ್ದರಾಮಯ್ಯ ಇಂದು 14ನೇ ಬಾರಿಗೆ ಬಜೆಟ್​ ಮಂಡನೆ ಮಾಡಲಿದ್ದಾರೆ.
ಹಿಂದೆ ಹಣಕಾಸು ಸಚಿವರಾಗಿದ್ದಾಗ ಸೇರಿದಂತೆ ಸಿಎಂ ಆಗಿದ್ದಾಗಿನ ಅವಧಿಯಿಂದ ಇಲ್ಲಿಯವರೆಗೆ ಒಟ್ಟು 13 ಬಾರಿ ಬಜೆ ಮಂಡನೆ ಮಾಡಿದ್ದರು. ಇದೀಗ ಇಂದು 14ನೇ ಬಾರಿ ಬಜೆಟ್​ ಮಂಡನೆ ಮಾಡಲಿದ್ದಾರೆ. ಈ ವರೆಗೆ ಕರ್ನಾಟಕದ ಯಾವುದೇ ನಾಯಕರು ಇಷ್ಟೊಂದು ಬಾರಿ ಬಜೆಟ್​ ಮಂಡನೆ ಮಾಡಿರುವ ಉದಾಹರಣೆ ಇಲ್ಲ.
ಈ ಹಿನ್ನೆಲೆಯಲ್ಲಿ ಡಾ.ಯತೀಂದ್ರ ಯುವ ಬ್ರಿಗೇಡ್​ ವತಿಯಿಂದ ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಚಿನ್ನದ ಬಣ್ಣದ ಕೊಂಬು ಹಾಗೂ ಗೊರಸು ಇರುವ ಟಗರನ್ನು ಉಡುಗೊರೆ ನೀಡಲಾಗಿದೆ. ಡಾ.ಯತೀಂದ್ರ ಯುವ ಬಿರ್ಗೆಡ್ ರಾಜ್ಯಾಧ್ಯಕ್ಷ ಬಸುರಾಜ್ ಕಂಸಾಳೆ ರವಿ ಸಂಘದ ವತಿಯಿಂದ ಸಿದ್ದರಾಮಯ್ಯಗೆ ಟಗರು ಉಡುಗೊರೆ ನೀಡಿದ್ದಾರೆ. ಅದಲ್ಲದೇ ಈ ಟಗರಿನ ಕೊಂಬು ಹಾಗೂ ಗೊರಸಿಗೆ ಚಿನ್ನದ ಬಣ್ಣವನ್ನು ಬಳಿದು ಅಲಂಕರಿಸಲಾಗಿದೆ.
ಹಣಕಾಸು ಸಚಿವರು ಯಾರಾಗಿರುತ್ತಾರೋ ಅವರೇ ಬಜೆಟ್​ ಮಂಡಿಸುವುದು. ಇತ್ತೀಚಿನ ಕೆಲ ವರ್ಷಗಳಿಂದ ಮುಖ್ಯಮಂತ್ರಿಗಳಾದವರು ಹಣಕಾಸು ಖಾತೆಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಪದ್ಧತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳೇ ಬಜೆಟ್​ ಮಂಡಿಸುತ್ತಿದ್ದಾರೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:18 − five =
Remember me
