ಬೆಂಗಳೂರು:ಚುನಾವಣೆಗಳ ಸರಣಿ ವರ್ಷವಾಗಲಿರುವ ಕಾರಣಕ್ಕೆ ತೈಲ ಮಾರಾಟದ ಕರ ಇಳಿಸಿ, ಜನರ ಮೇಲಿನ ಹೊರೆ ಸ್ವಲ್ಪಮಟ್ಟಿಗೆ ಇಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಲವು ಹೊಂದಿದ್ದಾರೆ. ಕಳೆದ ಬಾರಿ ತೆರಿಗೆ ಕಡಿತದಿಂದ ಐದು ಸಾವಿರ ಕೋಟಿ ರೂ. ಆದಾಯ ಖೋತಾ ಆಗಿದೆ. ಇದೇ ರೀತಿ ಮುಂದುವರಿದರೆ ಆದಾಯ ಕುಸಿತವಾಗಲಿದೆ ಎನ್ನುವುದು ಆರ್ಥಿಕ ಇಲಾಖೆ ಆತಂಕವಾಗಿದೆ.
ಇಲಾಖೆ ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆದಿರುವ ಬೊಮ್ಮಾಯಿ ಮುಂದಿನ ಹೆಜ್ಜೆಯಿಡಲು ಮೀನಮೇಷ ಎಣಿಸುತ್ತಿದ್ದು, ಆರ್ಥಿಕ ತಜ್ಞರೊಂದಿಗೆ ರ್ಚಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ನವೆಂಬರ್​ನಲ್ಲಿ ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ. 35 ರಿಂದ 25.9 ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಶೇ.24 ರಿಂದ 14.34ಕ್ಕೆ ರಾಜ್ಯ ಸರ್ಕಾರ ಇಳಿಸಿತ್ತು. ಕೇಂದ್ರ ಸರ್ಕಾರ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಸಲಹೆ ಪಾಲನೆ ಸಿಎಂ ಬೊಮ್ಮಾಯಿಗೆ ಅನಿವಾರ್ಯವಾಗಿತ್ತು. ಕರ್ನಾಟಕ ಮಾತ್ರವಲ್ಲ ಬಿಜೆಪಿ ಆಡಳಿತದ ರಾಜ್ಯಗಳು ಇದೇ ನಿರ್ಧಾರ ಕೈಗೊಂಡಿದ್ದವು. ಸುಂಕ ಕಡಿತ ತೀರ್ವನಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ, ಪ್ರತಿಪಕ್ಷಗಳು ಆಡಳಿತದ ಚುಕ್ಕಾಣಿ ಹಿಡಿದ ರಾಜ್ಯಗಳು ಸುಂಕ ಹೊರೆ ಇಳಿಸಲಿಲ್ಲವೆಂದು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದರು. ಮೋದಿ ಹೇಳಿಕೆಗೆ ಈ ರಾಜ್ಯಗಳ ಮುಖ್ಯಮಂತ್ರಿಗಳು ಪ್ರತ್ಯುತ್ತರಿಸಿದರು. ಆದರೆ ಜನರ ಭಾವನೆಗೆ ಸರಿಯಾಗಿ ಸ್ಪಂದಿಸಲಿಲ್ಲವೆಂಬ ಅಳುಕು ಆಂತರಿಕವಾಗಿ ಚುಚ್ಚುತ್ತಿತ್ತು. ಇದರಿಂದಾಗಿ ಈ ಬಾರಿ ಕೇಂದ್ರ ಸರ್ಕಾರ ಮುಂದಾಗಿ ಪೆಟ್ರೋಲ್, ಡೀಸೆಲ್ ತೆರಿಗೆ ಇಳಿಸಿದ ಬೆನ್ನಲ್ಲೇ ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಪಶ್ಚಿಮಬಂಗಾಳ ಸರ್ಕಾರಗಳು ತೈಲ ಸುಂಕ ಸ್ವಲ್ಪ ಪ್ರಮಾಣದಲ್ಲಿ ತಗ್ಗಿಸಿ ಜನರ ವಿರೋಧದಿಂದ ಪಾರಾಗಿವೆ.
ಹೆಚ್ಚಿದ ಆಂತರಿಕ ಒತ್ತಡ:ಪ್ರತಿಪಕ್ಷಗಳು ಆಳ್ವಿಕೆಯ ರಾಜ್ಯಗಳಲ್ಲಿ ತೈಲ ಮಾರಾಟ ತೆರಿಗೆ ತಗ್ಗಿಸಲಾಗಿದೆ. ಹಣದುಬ್ಬರಕ್ಕೂ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ರಾಜ್ಯದಲ್ಲೂ ತೈಲ ಸುಂಕ ಕಡಿತ ಮಾಡಬೇಕು ಎಂದು ಬಿಜೆಪಿ ಆಂತರಿಕವಾಗಿ ಸರ್ಕಾರದ ಮೇಲೆ ಒತ್ತಡ ಹೇರತೊಡಗಿದೆ. ಸದ್ಯಕ್ಕೆ ವಿಧಾನ ಪರಿಷತ್​ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಕೋರ್ಟ್ ಆದೇಶದ ಪ್ರಕಾರ ಬಿಬಿಎಂಪಿ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಹತ್ತಿರವಾಗಿವೆ. ಪೆಟ್ರೋಲ್, ಡೀಸೆಲ್ ದರ ಕಡಿತದಿಂದ ಜನಾಕ್ರೋಶ ಕಡಿಮೆಯಾಗಲಿದ್ದು, ರಾಜಕೀಯವಾಗಿ ಲಾಭ ಮಾಡಿಕೊಳ್ಳಬಹುದಾಗಿದೆ ಎಂಬ ಸುಲಭೋಪಾಯ ಪ್ರಸ್ತಾಪವಾಗಿದೆ. ಆದಾಯ ಹೆಚ್ಚಳವೋ? ರಾಜಕೀಯ ಲಾಭವೋ? ಎಂಬ ದ್ವಂದ್ವಕ್ಕೆ ಸಿಲುಕಿದ್ದಾರೆ. ಜೂನ್​ನಲ್ಲಿ ಸ್ಪಷ್ಟ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಬಿಜೆಪಿ ಆಡಳಿತದ ರಾಜ್ಯಗಳತ್ತ ಗಮನ:ರಾಜ್ಯದ ಬೊಕ್ಕಸಕ್ಕೆ ತರುವ ಪ್ರಮುಖ ಆದಾಯ ಮೂಲಗಳ ಪೈಕಿ ತೈಲ ತೆರಿಗೆ ಒಂದಾಗಿದ್ದು, ಪ್ರಸಕ್ತ ಆರ್ಥಿಕ ವರ್ಷ (2022-23)ದ ಏಪ್ರಿಲ್​ನಲ್ಲಿ 1,602.64 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ. ಕಳೆದ ಆರ್ಥಿಕ ವರ್ಷದ ಕೊನೆಯ ತಿಂಗಳಾದ ಮಾರ್ಚ್​ನಲ್ಲಿ 1,414.58 ಕೋಟಿ ರೂ.ಗಳಿಗೆ ತುಲನೆ ಮಾಡಿದರೆ, ಪ್ರಸ್ತುತ ಆರ್ಥಿಕ ವರ್ಷದ ಮೊದಲ ತಿಂಗಳು ಭರ್ಜರಿ ಆರಂಭ ಕಂಡಿದೆ.
ಔದ್ಯಮಿಕ-ವಾಣಿಜ್ಯ-ವಹಿವಾಟು ಚಟುವಟಿಕೆಗಳು ಏರುಮುಖವಾಗಿದ್ದು, ವರಮಾನ ವೃದ್ಧಿಸಿದಷ್ಟು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ನೆರವಾಗಲಿದೆ ಎಂದು ಇಲಾಖೆ ಮೂಲಗಳು ಹೇಳುತ್ತವೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರವೆಂದು ಬೊಮ್ಮಾಯಿ ಹೇಳುವ ಮೂಲಕ ಕಾಲಯಾಪನೆ ತಂತ್ರಕ್ಕೆ ಮೊರೆ ಹೋಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳ ನಡೆಯತ್ತ ಗಮನಹರಿಸಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರ ಇಲ್ಲವೇ ಪಕ್ಷದ ವರಿಷ್ಠರ ಸೂಚನೆಯ ನಿರೀಕ್ಷೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋರಿಕೆ ಪತ್ತೆಹಚ್ಚಿ ಕ್ರಮ:ವಿವಿಧ ಮೂಲಗಳಲ್ಲಿ ತೆರಿಗೆ ಸೋರಿಕೆಯನ್ನು ಬೊಮ್ಮಾಯಿ ಪತ್ತೆ ಹಚ್ಚಿ, ಕಟ್ಟುನಿಟ್ಟಿನ ವಸೂಲಿಗೆ ಜವಾಬ್ದಾರಿ ಒಪ್ಪಿಸಿದರು. ಪರ್ಯಾಯ ಪರಿಹಾರೋ ಪಾಯ ಕ್ರಮಗಳಿಂದ ಆದಾಯ ಹೆಚ್ಚುವ ಜತೆಗೆ ತೈಲ ಸುಂಕ ಕಡಿತವೂ ಬೊಕ್ಕಸಕ್ಕೆ ಬಾಧಿಸಲಿಲ್ಲ. ಈ ಸಲವೂ ಎಲ್ಲೆಲ್ಲಿ ಸೋರಿಕೆಯಾಗುತ್ತಿದೆ ಎಂದು ಜಾಲಾಡಿ ನಿಯಂತ್ರಣ ಕ್ರಮಗಳಿಗೆ ಬೊಮ್ಮಾಯಿ ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪತಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್​ಗೆ ಸಿಲುಕಿ ಪತ್ನಿ ಸಾವು; ಛಿದ್ರಗೊಂಡ ದೇಹ, ತುಂಡಾಗಿ ಬಿದ್ದ ಕೈ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 19 =
Remember me
