ಬೆಂಗಳೂರು:ಗ್ಯಾರಂಟಿಗಳ ಮೂಲಕ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿ ನಿಗಮಗಳ ಕತ್ತು ಹಿಸುಕಲಾಗಿದೆ. ದಲಿತರ ಹಣದಿಂದಲೇ‌ ಸರ್ಕಾರ ನಡೆಸಬೇಕು ಎಂದಾದರೆ ಸಿದ್ದರಾಮಯ್ಯ ಕೂಡಲೇ ಮುಖ್ಯಮಂತ್ರಿ ಕುರ್ಚಿ ಬಿಟ್ಟು ಕೆಳಗಿಳಿಯಬೇಕು ಎಂದು ಕೇಂದ್ರದ ಮಾಜಿ ಸಚುವ ಎ.ನಾರಾಯಣಸ್ವಾಮಿ ಆಗ್ರಹಿಸಿದರು.
ರಾಜ್ಯ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕೋಟ್ಯಂತರ ರೂ. ಬೇರೆ ಖಾತೆಗಳಿಗೆ ಅಕ್ರಮ ವರ್ಗಾವಣೆ 45 ದಿನಗಳು ಕಳೆದರೂ ಸಿಎಂ ಗಮನಕ್ಕೆ ಬಂದಿಲ್ಲ.
ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡ ನಂತರ ಅಕ್ರಮ ಹೊರಬಿತ್ತು. ನಂತರವೂ ಸಚಿವರಾಗಿದ್ದ ಬಿ.ನಾಗೇಂದ್ರ ಪಾತ್ರವಿಲ್ಲ ಎಂಬ ಸಮರ್ಥನೆ. ಎಸ್ ಐಟಿ ರಚನೆಯಾದ ನಂತರ ಸಿಎಂ ಸಿದ್ದರಾಮಯ್ಯ ಮತ್ತದೆ ಮಾತು ಪುನರುಚ್ಚರಿಸಿದರು. ಎಸ್ ಸಿ, ಎಸ್ ಟಿ ಹಣವನ್ನು ಬೇರೆ ಕಾರ್ಯಕ್ರಮಗಳಿಗೆ ಬಳಕೆಗೆ ಸೆಕ್ಷನ್‌ 7ಸಿ ಪ್ರಸ್ತಾಪಿಸಿದ್ದಾರೆ.
ಸಾಮಾಜಿಕ ನ್ಯಾಯದ ಬಗ್ಗೆ ದೊಡ್ಡ ಮಾತು, ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರಲ್ಲಿ ಏನೂ ಉಳಿದಿಲ್ಲ. ದಲಿತರ ಹಣ ಅನ್ಯ ಕಾರ್ಯಗಳಿಗೆ ಬಳಸಿದರೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ಗುಡುಗಿದ್ದ ದಲಿತ ಸಂಘಟನೆಗಳು ಹಾಗೂ ನಾಯಕರು ಮೌನವಹಿಸಿದ್ದೇಕೆ ? ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಎ.ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.
ವಾಲ್ಮೀಕಿ ನಿಗಮದ ಹಗರಣ, ಪರಿಶಿಷ್ಟ ಜಾತಿ, ಪಂಗಡಗಳ ಹಣ ಗ್ಯಾರಂಟಿಗಳಿಗೆ ಬಳಕೆ ಬಗ್ಗೆ ಮಾಧ್ಯಮಗಳು ಧ್ವನಿ ಎತ್ತಿವೆ. ದಲಿತ ಸಂಘಟನೆಗಳು ಹಾಗೂ ಮುಖಂಡರು ಧ್ವನಿ ಎತ್ತಬೇಕು. ಪಕ್ಷ ರಾಜಕಾರಣ ಬದಿಗಿಟ್ಟು ಸಮುದಾಯದ‌ ಜನರ ಪರವಾಗಿ ಧ್ವನಿ ಎತ್ತಿ,‌ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುವ ತನಕ ಎಂದು ಹೇಳಿದಾಗ ಸುದ್ದಿಗೋಷ್ಠಿಯಲ್ಲಿದ್ಸ ಮಾಜಿ ಸಚಿವ ಎನ್.ಮಹೇಶ್ ಸಹಮತ ವ್ಯಕ್ತಪಡಿಸಿದರು.
ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಸಿಎಂ ಸಿದ್ದರಾಮಯ್ಯ ಜಾತಿಯನ್ನು ಮುಂದೆ ಮಾಡಿದ್ದಾರೆ. ಹಿಂದುಳಿದ ವರ್ಗದ ನಾಯಕ ಎರಡನೇ ಬಾರಿ ಸಿಎಂ ಆಗಿರುವುದು ಸಹಿಸದೆ ಮುಡಾ ವಿವಾದ ಹುಟ್ಟಿ ಹಾಕುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಹಿಂದುಳಿದ ವರ್ಗಕ್ಕೆ ಸೇರಿದವರು. ಕಾಂಗ್ರೆಸ್ ನಾಯಕರು ಅದರಲ್ಲೂ ಸಿಎಂ ಸಿದ್ದರಾಮಯ್ಯ ಟಾರ್ಗೆಟ್ ಮಾಡಿದರು. ಮೋದಿಯವರನ್ನು ಏಕವಚನದಲ್ಲಿ ನಿಂದನೆ ಮಾಡಿದ್ದನ್ನು ಮರೆತು ಬಿಟ್ಟಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.
ಎಸ್ ಸಿ ಎಸ್ ಟಿ ಹಣ ದುರ್ಬಳಕೆ ಪ್ರಕರಣ: 11,114 ಕೋಟಿ ರೂ ಕಳೆದ ಬಾರಿ ಬಳಕೆ. ಕಾಯ್ದೆಯ‌ 7ಡಿ ರದ್ದು, ಫೆಬ್ರವರಿ ಆದೇಶ. ಮತ್ತೆ 14,282 ಕೋಟಿ ರೂ ಗ್ಯಾರಂಟಿಗೆ ಬಳಕೆ. ಕಾಯ್ದೆಯ ಸೆಕ್ಷನ್ 7ಸಿ ಕಾರಣ. ದಲಿತರ ಏಳಿಗೆ ಸಹಿಸದ ಕಾಂಗ್ರೆಸ್ ಸರ್ಕಾರ, ಲೂಟಿ ಮಾಡಿದ ಸಿದ್ದರಾಮಯ್ಯ.
ಸಾಮಾನ್ಯ ಸಾಮಾಜಿಕ ವಲಯದ ಯೋಜನೆ ( ಶಿಕ್ಷಣ, ಆರೋಗ್ಯ, ಅಂಗವಿಕಲರು) ಗಳಿಗೆ ಅವಕಾಶವಿದೆ. ಮೂಗಿಗೆ ತುಪ್ಪ ಸವರುವ ಕಾರ್ಯಕ್ರಮ ಬೇಕಾಗಿಲ್ಲ. ಸ್ಕಾಲರ್ ಶಿಪ್ ವಿದೇಶಿ ವ್ಯಾಸಂಗ 400 ರಿಂದ 10-15ಕ್ಕೆ ಇಳಿದಿದೆ. ಹೆಚ್ಚು‌ ಹಣವೆಂದು ಹೇಳಿ ಬೇರೆ ಸಮುದಾಯದ ಕೆಂಗಣ್ಣಿಗೆ‌ ಗುರಿ.
ಉಚಿತ ವಿದ್ಯುತ್ ವ್ಯವಸ್ಥೆಯಿತ್ತು. ಕೂಲಿಕಾರರು ಬಸ್ ಪ್ರಯಾಣ ಮಾಡುವುದಿಲ್ಲ. ಶಕ್ತಿ ಯೋಜನೆ ಬಳಸುವುದಿಲ್ಲ. ಹಗರಣಗಳ ಪಿತೃ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ವಾಲ್ಮೀಕಿ ನಿಗಮದ ಹಣ 700 ಖಾತೆಗಳಿಗೆ‌ ವರ್ಗಾವಣೆ. ಖಾತೆ ದಲಿತರ ಕೈಗೆ ಕೊಟ್ಟು ಹಣ ವರ್ಗಾವಣೆ‌ ಅವರಿಂದ ಮಾಡಿಸಿದ್ದೀರಿ. ಸಿದ್ದರಾಮಯ್ಯ ಕೈವಾಡವಿಲ್ಲದೆ ಸಾಧ್ಯವಿಲ್ಲ. ನಿಮಗೆ ಗೊತ್ತಿಲ್ಲವೆಂದರೆ ನಡೆಯದು, ಸಿಎಂ ಅರೆಸ್ಟ್ ಆಗುವ ಕಾಲ ಸಮೀಪಿಸಿದೆ‌.
ದಲಿತರ ಹಣ ಲೂಟಿ, ಇದೊಂದು ಲೂಟಿ ಸರ್ಕಾರ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭ್ರಷ್ಟಾಚಾರದಲ್ಲಿ ಝೀರೋ ಟಾಲರೆನ್ಸ್ ಬಗ್ಗೆ ಸಾರುತ್ತಿದ್ದಾರೆ. ತಮ್ಮದೇ ಪಕ್ಷದ ಕಾಂಗ್ರೆಸ್ ಸರ್ಕಾರದ ಹಗರಣಗಳ ಬಗ್ಗೆ ಉತ್ತರಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ‌ ಒತ್ತಾಯಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
