ಕೊಪ್ಪಳ:ಸಾಮಾನ್ಯರಿಗೆ ಮುಖ್ಯಮಂತ್ರಿಯನ್ನು ಮಾತನಾಡಿಸುವುದೂ ಕಷ್ಟ ಎಂದೆನಿಸಬಹುದು. ಆದರೆ ಇಲ್ಲೊಬ್ಬ ಬಾಲಕಿ, ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದು ಮಾರುತ್ತರವನ್ನೂ ಪಡೆದಿದ್ದಾಳೆ.
ವಿದ್ಯಾರ್ಥಿನಿ ಬರೆದಿರುವ ಅಭಿನಂದನಾ ಪತ್ರ ಓದಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವು ಬರೆದಿರುವ ಮಾರುತ್ತರದಲ್ಲಿ ಬಾಲಕಿಯ ಸಾಮಾಜಿಕ ಕಾಳಜಿಯನ್ನು ಕೊಂಡಾಡಿದ್ದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಕೊಪ್ಪಳದ ಮಾಸ್ತಿ ಪಬ್ಲಿಕ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಶ್ರೇಯಾಂಕ ವಿ ಮೆಣಸಗಿ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಗ್ಗೆ ಅಭಿನಂದನಾ ಪತ್ರ ಬರೆದಿದ್ದಳು. ತಾನು ಬರೆದ ಪತ್ರದಲ್ಲಿ ಸಿದ್ದರಾಮಯ್ಯ 2013ರಲ್ಲಿ ಜಾರಿಗೆ ತಂದಿದ್ದ ಅನ್ನಭಾಗ್ಯ, ಶೂ ಭಾಗ್ಯ ಸೇರಿದಂತೆ ಇತರ ಅನೇಕ ಯೋಜನೆಗಳನ್ನು ಪ್ರಸ್ತಾಪಿಸಿದ್ದಾಳೆ. ಈ ಬಾರಿಯೂ ಹಿಂದಿನ ರೀತಿಯೇ ಜನಪರ ಯೋಜನೆಗಳನ್ನು ಜಾರಿಗೆ ತಂದು ಉತ್ತಮ ಆಡಳಿತ ನೀಡಬೇಕು ಎಂದು ಕೇಳಿಕೊಂಡಿದ್ದಾಳೆ. ಇದರಿಂದ ಸಂತುಷ್ಟರಾದ ಸಿಎಂ ಸಿದ್ದರಾಮಯ್ಯ ತಮ್ಮ ಮಾರುತ್ತರದ ಪತ್ರದಲ್ಲಿ ಬಾಲಕಿಯ ಸಾಮಾಜಿಕ ಕಾಳಜಿಯನ್ನು ಕೊಂಡಾಡಿದ್ದಾರೆ.

ಬಾಲಕಿಯ ಸಾಮಾಜಿಕ ಕಾಳಜಿಯನ್ನು ಎತ್ತಿ ಹಿಡಿದ ಸಿಎಂ ” ಪ್ರೀತಿಯ ಶ್ರೇಯಾಂಕ, ತಾವು ಬರೆದ ಅಭಿನಂದನಾ ಪತ್ರ ತಲುಪಿದೆ. 8ನೇ ತರಗತಿ ಓದುತ್ತಿರುವ ನಿನಗಿರುವ ಸಾಮಾಜಿಕ ಕಳಕಳಿ ಮೆಚ್ಚುವಂತಹದ್ದು. ಈ ಎಳೆಯ ವಯಸ್ಸಿನಲ್ಲಿ ಬಡವರು, ದೀನ-ದಲಿತರು, ರೈತರ ಬಗೆಗಿನ ನಿನ್ನ ಕಾಳಜಿ ಬೆರಗು ಮೂಡಿಸುವಂತಹದ್ದು. ಜೀವನದಲ್ಲಿ ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯೆ ಕಲಿತು, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗು” ಎಂದು ಹಾರೈಸಿದ್ದಾರೆ. ಸಿಎಂ ಬಾಲಕಿಗೆ ಮರಳಿ ಪತ್ರ ಬರೆದದ್ದು ಎಲ್ಲರ ಗಮನ ಸೆಳೆದಿದೆ.(ಏಜೆನ್ಸೀಸ್)
ಶರವೇಗದ ವಾಹನ ಚಾಲಕರಿಗೆ ದಂಡ ಹಾಕಲು ಇನ್ನು ಡ್ರೋನಾಸ್ತ್ರ ಬಳಕೆ!

VIDEO VIRAL | ಬೆಳಗ್ಗಿನಿಂದ ಕೇವಲ 40 ರೂ. ಸಂಪಾದನೆ ಎಂದು ಅತ್ತ ರಿಕ್ಷಾ ಡ್ರೈವರ್!

ಯುವತಿಗೆ ಗನ್ ತೋರಿಸಿ ದರೋಡೆ ಮಾಡಿ ‘ಡೇಟಿಂಗ್ ಮಾಡೋಣ್ವಾ?’ ಎಂದ ಕಳ್ಳ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 18 =
Remember me
