ದೆಹಲಿ:ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದ ಬಳಿಕ ಗುರುವಾರ ಕಲಬುರಗಿಯಿಂದಲೇ ದೆಹಲಿಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ತೆರಳಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ದೆಹಲಿ ಭೇಟಿಯ ಉದ್ದೇಶದ ಬಗ್ಗೆ ವಿವರಿಸಿದರು.
ಇದನ್ನೂ ಓದಿರಿಕಲ್ಯಾಣ ಕರ್ನಾಟಕ ಪ್ರಾಂತ್ಯದ ಅಭಿವೃದ್ಧಿಗೆ ಹೊಸ ಆಯಾಮ ಕೊಡ್ತೇವೆ- ಸಿಎಂ ಬಿಎಸ್​ವೈ ಭರವಸೆ
ಇಂದು (ಗುರುವಾರ) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಚಿವೆ ನಿರ್ಮಲಾ ಸೀತಾರಾಮನ್​, ರಾಜನಾಥ್​ಸಿಂಗ್​ ಅವರನ್ನು ಭೇಟಿ ಮಾಡುವೆ. ನಾಳೆ(ಶುಕ್ರವಾರ) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲು ಸಮಯ ನಿಗದಿಯಾಗುತ್ತಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಲಾಗುವುದು. ಸಂಪುಟ ವಿಸ್ತರಣೆಗೆ ಅನುಮತಿ ಕೇಳಲಾಗುವುದು ಎಂದು ತಿಳಿಸಿದರು. ಅಲ್ಲದೆ ಹಲವು ಸಚಿವರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿಗೆ ಪೂರಕವಾಗುವಂತೆ ಚರ್ಚಿಸುವುದಾಗಿ ಹೇಳಿದರು.
ದೆಹಲಿಗೆ ಸಿಎಂ ಭೇಟಿ ನೀಡುತ್ತಿದ್ದಂತೆ ಸಂಪುಟ ವಿಸ್ತರಣೆ ಕುತೂಹಲ ಹೆಚ್ಚಿಸಿದೆ. ಅಲ್ಲದೆ ಆಕಾಂಕ್ಷಿಗಳಲ್ಲೂ ತಳಮಳ ಹೆಚ್ಚಾಗಿದೆ. ಸಂಪುಟ ವಿಸ್ತರಣೆಗೆ ವರಿಷ್ಠರು ಅಸ್ತು ಎಂದರೆ ಶನಿವಾರ ಅಥವಾ ಭಾನುವಾರ ಸಂಪುಟ ವಿಸ್ತರಣೆ ಆಗಲಿದೆ. ಒಂದು ವೇಳೆ ಹೈಕಮಾಂಡ್​ ಒಪ್ಪದಿದ್ದರೆ ಅಧಿವೇಶನ ಮುಗಿಯುವ ತನಕ ಮುಂದೂಡಲ್ಪಡಬಹುದು ಎಂಬ ಮಾತು ಕೇಳಿಬಂದಿದೆ.
ಡಿಜೆ ಹಳ್ಳಿ ಗಲಭೆ: ಮಾಜಿ ಮೇಯರ್​ ಸಂಪತ್​ ರಾಜ್​ ನಾಪತ್ತೆ

‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eight =
Remember me
