ಬೆಂಗಳೂರು :ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಚಿವರುಗಳೊಂದಿಗೆ ಸಿಟಿ ರೌಂಡ್ಸ್​ ನಡೆಸಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ್ದಾರೆ. ಸಚಿವರು ಮತ್ತು ಶಾಸಕರೊಂದಿಗೆ ವೋಲ್ವೊ ಬಸ್ಸಿನಲ್ಲಿ, ಬೆಂಗಳೂರಿನ ವಿವಿಧೆಡೆಗೆ ಭೇಟಿ ನೀಡುತ್ತಿದ್ದಾರೆ.
ಮೊದಲಿಗೆ ಆನಂದ್​ ರಾವ್ ವೃತ್ತದಲ್ಲಿ ನಡೆಯುತ್ತಿರುವ ರೋಡ್ ಟ್ಯಾಪಿಂಗ್ ಕಾಮಗಾರಿಯನ್ನು ಅವರು ವೀಕ್ಷಿಸಿದರು. ನಂತರ ನಾಯಂಡಹಳ್ಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ಆರ್.ಅಶೋಕ, ಅರವಿಂದ ಲಿಂಬಾವಳಿ, ಭೈರತಿ ಬಸವರಾಜ್, ಕೆ.ಗೋಪಾಲಯ್ಯ ಹಾಗೂ ಬಿಬಿಎಂಪಿ ಅಧಿಕಾರಿಗಳು ಸಿಎಂಗೆ ಸಾಥ್ ನೀಡುತ್ತಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ಹಾಗೂ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿರುವ ಸಿಎಂ ಬಿಎಸ್​ವೈ ಅವರ ಬೆಂಗಳೂರು ರೌಂಡ್ಸ್​ನ ರೂಟ್ ಮ್ಯಾಪ್ ಹೀಗಿದೆ:-
* ಕೃಷ್ಣದಿಂದ ಆನಂದ್ ರಾವ್ ಸರ್ಕಲ್ – ಆನಂದ್ ರಾವ್ ಸರ್ಕಲ್​ನಲ್ಲಿ ನಿರ್ಮಾಣ ಹಂತದಲ್ಲಿರುವ ಸ್ಟೀಲ್ ಬ್ರಿಡ್ಜ್ ವೀಕ್ಷಣೆ* ಆನಂದ್ ರಾವ್ ಸರ್ಕಲ್​​ನಿಂದ ಗಾಂಧಿನಗರ – ಗಾಂಧಿನಗರದಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ವೀಕ್ಷಣೆ* ಗಾಂಧಿನಗರದಿಂದ ಕೆ.ಜಿ.ರೋಡ್, ಗುಬ್ಬಿ ತೋಟದಪ್ಪ ರೋಡ್ ಮ‌ೂಲಕ ನಾಯಂಡಹಳ್ಳಿ ಜಂಕ್ಷನ್ – ನಾಯಂಡಹಳ್ಳಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ವೀಕ್ಷಣೆ* ನಾಯಂಡಹಳ್ಳಿಯಿಂದ ಔಟರ್ ರಿಂಗ್ ರೋಡ್, ರಾಜಕುಮಾರ್ ಮೆಮೋರಿಯಲ್, ಯಶವಂತಪುರ, ಮೇಕ್ರಿ ಸರ್ಕಲ್, ಹೈಗ್ರೌಂಡ್ಸ್ ಮೂಲಕ ಪ್ಲಾನಟೋರಿಯಂ ರಸ್ತೆ – ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ಲಾನಟೋರಿಯಂ ಹಾಗೂ ಇನ್ಫಾಟ್ರಿ ರಸ್ತೆ ವೀಕ್ಷಣೆ* ಇನ್ಫಾಂಟ್ರಿ ರಸ್ತೆಯಿಂದ ಕಮರ್ಷಿಯಲ್ ಸ್ಟ್ರೀಟ್​ – ಕಮರ್ಶಿಯಲ್ ಸ್ಟ್ರೀಟ್ ಸ್ಟಾರ್ಟ್ ಸಿಟಿ ಯೋಜನೆ ವೀಕ್ಷಣೆ* ಕಮರ್ಷಿಯಲ್ ಸ್ಟ್ರೀಟಿನಿಂದ ಸರ್ ಸಿ.ವಿ.‌ರಾಮನ್ ಹಾಸ್ಪಿಟಲ್ ರೋಡ್ – 1.90 ಕಿಲೋ ಮೀಟರ್ ಸಿವಿ ರಾಮನ್ ಹಾಸ್ಪಿಟಲ್ ರಸ್ತೆಯ ವೈಟ್ ಟಾಪಿಂಗ್ ವರ್ಕ್ ವೀಕ್ಷಣೆ* ಸರ್ ಸಿ.ವಿ.ರಾಮನ್ ಹಾಸ್ಪಿಟಲ್ ರಸ್ತೆಯಿಂದ ಬ್ರಿಗೇಡ್ ರಸ್ತೆ – ಸ್ಟಾರ್ಟ್ ಸಿಟಿ ಯೋಜನೆಯಡಿಯ ಬ್ರಿಗೇಡ್ ರಸ್ತೆ ಕಾಮಗಾರಿ ವೀಕ್ಷಣೆ* ಬ್ರಿಗೇಡ್ ರಸ್ತೆಯಿಂದ ಶಾಂತಿನಗರ ಬಿಎಂಟಿಸಿ ಬಸ್ ಸ್ಟಾಪ್ – ಶಾಂತಿನಗರದಲ್ಲಿ ನಡೆಯುತ್ತಿರುವ ವಾಟರ್ ವೇ ಪ್ರಾಜೆಕ್ಟ್ ವೀಕ್ಷಣೆ* ಶಾಂತಿನಗರದಿಂದ ರಾಜಾರಾಂ ಮೋಹನ್ ರಾಯ್ ರಸ್ತೆ ಮೂಲಕ ಕಸ್ತೂರ್ಬಾ ರಸ್ತೆ – ಕಸ್ತೂರ್ಬಾ ರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ವರ್ಕ್ ವೀಕ್ಷಣೆ* ಕಸ್ತೂರ್ಬಾ ರಸ್ತೆಯಿಂದ ರಾಜಭವನ ರೋಡ್, ಪ್ಯಾಲೇಸ್ ರಸ್ತೆ, ಕಾರ್ಮಲ್ ಕಾಲೇಜ್ ಮಾರ್ಗದ ಮೂಲಕ ಕೃಷ್ಣ ಗೆ ವಾಪಸ್.
2 ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ : ಬಿಎಸ್​ವೈ

ಮಹಿಳೆಯರನ್ನು ಪುಸಲಾಯಿಸಿ ಬೆತ್ತಲೆ ಚಿತ್ರ ತರಿಸಿಕೊಳ್ಳುತ್ತಿದ್ದ ಖದೀಮ! ಕೃತ್ಯಕ್ಕೆ ಮೊಬೈಲ್ ಆ್ಯಪ್​ ಬಳಕೆ

ಮಹಿಳೆಯರಿಗೆ ವರದಾನ, ಈ ಸುಲಭ ಯೋಗಾಸನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 12 =
Remember me
