ಬೆಂಗಳೂರು: ಕರೊನಾ ಸಂಕಷ್ಟ ಕಾಲದಲ್ಲಿ ‘ಅವಕಾಶ ವಂಚಿತರ’ ಗುಂಪುಗಾರಿಕೆ ಹಾಗೂ ಅಪಸ್ವರವು ರಾಜ್ಯದ ಆಡಳಿತಾರೂಢ ಬಿಜೆಪಿಯಲ್ಲಿ ತಳಮಳ ಹುಟ್ಟಿಹಾಕಿದ್ದು, ಮುನಿಸು ಮುಳುವಾಗುವ ಮುನ್ನವೇ ಚಿವುಟಿ ಹಾಕಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಂತ್ರೋಪಾಯ ಹೂಡಿದ್ದಾರೆ.
ಹಠಾತ್ ಉದ್ಭವಿಸಿದ ಬೆಳವಣಿಗೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ರಾಜ್ಯದ ಅಭಿವೃದ್ಧಿ ಹಾಗೂ ಕರೊನಾ ನಿರ್ವಹಣೆಗೆ ಮೊದಲ ಆದ್ಯತೆ ಎನ್ನುವುದು ಸಿಎಂ ಮೇಲ್ನೋಟದ ಮಾತು. ಆದರೆ ಈ ಬೆಳವಣಿಗೆ ಬಗ್ಗೆ ನಿರ್ಲಿಪ್ತ ನಿಲುವು ತಳೆದರೆ, ‘ಕಡೆಗಣಿಸಿದರು’ ಎಂಬ ತಪು್ಪ ಸಂದೇಶ ರವಾನೆಯಾಗಲಿದೆ ಎಂದು ಅರಿತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಯಡಿಯೂರಪ್ಪ ಮುಂದಡಿ ಇಟ್ಟಿದ್ದಾರೆ.
ಇದನ್ನೂ ಓದಿಲಡಾಖ್​ ಬಿಕ್ಕಟ್ಟಿನ ವಿಷಯದಲ್ಲಿ ಹೊಂದಾಣಿಕೆಯ ಮಾತೇ ಇಲ್ಲ
ವಸ್ತುಸ್ಥಿತಿ ಮನವರಿಕೆ: ಕರೊನಾ ನಿರ್ವಹಣೆಯೇ ವರಿಷ್ಠರ ಪ್ರಾಶಸ್ಱವಾಗಿದ್ದು, ಭಿನ್ನಮತ ಇಲ್ಲವೇ ತೆರೆಮರೆ ಚಟುವಟಿಕೆಗೆ ಹೆಚ್ಚಿನ ಮಹತ್ವ ನೀಡಿಲ್ಲ. ಹೀಗಾಗಿ ಪ್ರತ್ಯೇಕ ಸಭೆ ಸೇರಿ ಕ್ಷೇತ್ರದ ಅಭಿವೃದ್ಧಿ ಹಾಗೂ ಪ್ರಾತಿನಿಧ್ಯದ ಬಗ್ಗೆ ಕೊರಗು ವ್ಯಕ್ತಪಡಿಸಿದವರು ಮೃದುವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ಮನವರಿಕೆಗೆ ಸಕಾಲ ಎಂದು ತಿಳಿದ ಸಿಎಂ, ಅನುದಾನ ಹಂಚಿಕೆ, ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಹಿರಿಯ ಶಾಸಕರ ಜತೆ ರ್ಚಚಿಸಿ ಎಲ್ಲರೊಂದಿಗೆ ನಾನಿದ್ದೇನೆ ಎಂಬ ಸಂದೇಶ ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ, ನಿಗಮ-ಮಂಡಳಿಗಳು ಹಾಗೂ ವಿಧಾನ ಪರಿಷತ್​ಗೆನೇಮಕ ವಿಚಾರದಲ್ಲಿ ವರಿಷ್ಠರ ತೀರ್ವನವೇ ಅಂತಿಮವಾಗಿದೆ. ಆದರೆ, ವರಿಷ್ಠರಿಗೆ ಈ ಪಟ್ಟಿ ಕಳುಹಿಸುವ ಮುನ್ನ ಎಲ್ಲ ನಾಯಕರೊಂದಿಗೆ ರ್ಚಚಿಸಿ ಅಂತಿಮಗೊಳಿಸುವ ಆಶ್ವಾಸನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವರಿಗೆ ಕಿವಿಮಾತು
ಅಸಮಾಧಾನದ ಕಿಡಿ ಹೊತ್ತಿಸಿದವರ ಬಗ್ಗೆ ಬಿಎಸ್​ವೈಗೆ ಸಿಟ್ಟಿದ್ದರೂ ತೋರಗೊಟ್ಟಿಲ್ಲ. ಉರಿಯುವ ಬೆಂಕಿಗೆ ತುಪ್ಪ ಸುರಿದರೆ ಒಳ-ಹೊರಗಿನ ವಿರೋಧಿಗಳಿಗೆ ಅನುಕೂಲವಾಗುತ್ತದೆ ಎನ್ನುವುದು ಗೊತ್ತು. ಹಾಗೆಯೇ ಗುಂಪುಗಾರಿಕೆ, ಬಂಡಾಯದ ಧ್ವನಿಯು ತಮ್ಮ ನಾಯಕತ್ವದ ವಿರುದ್ಧವಲ್ಲ, ಕಾರಣಗಳು ಬೇರೆ ಇವೆ ಎಂಬುದೂ ಸಿಎಂ ಮೌನಕ್ಕೆ ಶರಣಾಗಿದ್ದರ ಗುಟ್ಟು. ಆದರೆ, ಸಚಿವ ಸಂಪುಟದ ಹಿರಿಯ ಸಹೋದ್ಯೋಗಿಗಳಿಗೆ ತಮ್ಮ ಪರವಾಗಿ ನಿಂತು, ಸಮರ್ಥಿಸಿಕೊಳ್ಳುವ ಹೇಳಿಕೆ ನೀಡಬೇಕೆಂಬ ಸಲಹೆ ನೀಡಿದ್ದಾರೆ. ಬಿಜೆಪಿಗೆ ಅಧಿಕಾರ ಕೊಟ್ಟರೆ ಮತ್ತದೇ ಚಾಳಿ ಮುಂದುವರಿಸಿದ್ದಾರೆ ಎಂಬ ಭಾವನೆಯು ಜನ-ಸಾಮಾನ್ಯರಲ್ಲಿ ಮೂಡದಂತೆ ಜಾಗ್ರತೆ ವಹಿಸಬೇಕು ಎಂದು ಸಿಎಂ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.
ಭಾರತದ ಘನತೆಗೆ ಧಕ್ಕೆ ತರುವುದಿಲ್ಲ ಎಂದ ಚೀನಾ ವಿದೇಶಾಂಗ ಸಚಿವಾಲಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + twenty =
Remember me
