ಬೆಂಗಳೂರು:ಪಂಚಮಸಾಲಿ ಸಮಾಜದ ಮುರುಗೇಶ್​ ನಿರಾಣಿಯವರಿಗೆ ಸಚಿವ ಸ್ಥಾನ ನೀಡಿ. ಇಲ್ಲದಿದ್ದರೆ ಇಡೀ ಸಮಾಜ ನಿಮ್ಮ ಕೈಬಿಡುತ್ತದೆ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಾತ್ರಾ ಮಹೋತ್ಸವದಲ್ಲಿ ವೇದಿಕೆ ಮೇಲೆಯೇ ವಚನಾನಂದ ಶ್ರೀಗಳು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಎಚ್ಚರಿಸುವ ರೀತಿಯಲ್ಲಿ ಹೇಳಿದ್ದರು.
ಅದನ್ನು ಕೇಳುತ್ತಲೇ ಬಿಎಸ್​ವೈ ತಾಳ್ಮೆ ಕಳೆದುಕೊಂಡು ಕುಳಿತಲ್ಲಿಂದ ಎದ್ದಿದ್ದರು. ಹೀಗೆ ಮಂತ್ರಿಗಿರಿಗೆ ಒತ್ತಡ ಹಾಕಿದರೆ ನಾಳೆಯೇ ರಾಜೀನಾಮೆ ಕೊಟ್ಟು ಮನೆಗೆ ಹೋಗುತ್ತೇನೆ. ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು.
ಈ ಘಟನೆಯ ಬಗ್ಗೆ ಕಳೆದ ಎರಡು ದಿನಗಳಿಂದಲೂ ಅಲಲ್ಲಿ ಚರ್ಚೆ ಆಗುತ್ತಲೇ ಇದೆ. ನಿನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಚನಾನಂದ ಶ್ರೀಗಳು, ನಾನೇನಾದರೂ ತಪ್ಪು ಮಾತನಾಡಿದ್ದರೆ, ಅದರಿಂದ ಯಾರಿಗಾದರೂ ಬೇಸರವಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ ಎಂದು ಹೇಳಿದ್ದರು.
ಹಾಗೇ ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಧ್ಯಮ ಪ್ರಕಟಣೆಯೊಂದನ್ನು ಹೊರಡಿಸಿದ್ದು ಈ ಮೂಲಕ ಚರ್ಚೆ, ವಿವಾದಕ್ಕೆ ತೆರೆ ಎಳೆದಿದ್ದಾರೆ.
ವಿವಿಧ ಸಮಾಜಗಳ ಒತ್ತಡ ಸರ್ಕಾರದ ಮೇಲೆ ನಿರಂತರವಾಗಿ ಇರುತ್ತದೆ. ಹೀಗಿರುವಾಗ ವಚನಾನಂದ ಸ್ವಾಮೀಜಿಗಳ ಹೇಳಿಕೆ ಸಹಜ. ಇದರ ಬಗ್ಗೆ ಚರ್ಚೆ ಅನವಶ್ಯಕ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ರಾಜ್ಯದ ಮುಖ್ಯಮಂತ್ರಿಯಾದ ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ.
ಎಲ್ಲ ಸ್ವಾಮೀಜಿಗಳು, ಸಾಧುಗಳು, ಸಂತರು ನನ್ನನ್ನು ಪ್ರೀತಿಯಿಂದ ಕಾಣುತ್ತಾರೆ. ಅವರಿಗೆಲ್ಲ ನನ್ನ ಮೇಲೆ ವಿಶ್ವಾಸವಿದೆ. ನನ್ನ ಮೇಲಿನ ಸಲುಗೆ, ಪ್ರೀತಿಯಿಂದ ಇಂತಹ ಪ್ರತಿಕ್ರಿಯೆಗಳು ಸಹಜ. ಎಲ್ಲರೂ ನಮ್ಮವರೇ. ಬೈದವರೆನ್ನ ಬಂಧುಗಳು ಎಂಬ ಬಸವಣ್ಣನ ಉಕ್ತಿಯಲ್ಲಿ ನಂಬಿಕೆ ಇಟ್ಟವನು ನಾನು. ಅಂದು ನಾನು ಆಡಿದ ಮಾತುಗಳಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಇರಲಿ. ನಾಡಿನ ಶರಣರು, ಸಂತರು, ಸ್ವಾಮೀಜಿಗಳು, ಮಾರ್ಗದರ್ಶಕರ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತದೆ ಎಂದು ಭಾವಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
