| ಡಾ. ಎಂ.ಆರ್. ವೆಂಕಟೇಶ್ಇತ್ತೀಚಿನ ದಿನಗಳಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಠೇವಣಿದಾರರಲ್ಲಿ, ಗ್ರಾಹಕರಲ್ಲಿ ಗೊಂದಲ ಮೂಡಿದ್ದು, ಸಹಕಾರ ಬ್ಯಾಂಕುಗಳಲ್ಲಿ ವಹಿವಾಟು ಮಾಡುವುದೇ ಸೂಕ್ತವಲ್ಲವೆಂಬ ಭಾವನೆ ಸಹಜವಾಗಿ ಮೂಡಿದೆ. ಇಂದಿಗೂ ತನ್ನ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಆರ್ಥಿಕ ಶಿಸ್ತಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸಂಖ್ಯಾತ ಸಹಕಾರ ಬ್ಯಾಂಕುಗಳನ್ನು ಕೂಡ ಸಾರ್ವಜನಿಕರು, ಗ್ರಾಹಕರು, ಠೇವಣಿದಾರರು ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ.
ಕೇಂದ್ರದಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾಗಿ ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆ 2020ಕ್ಕೆ ತಿದ್ದುಪಡಿ ತಂದ ನಂತರ, ದೇಶದ ಎಲ್ಲ ಸಹಕಾರ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಕಾಲಕಾಲಕ್ಕೆ ನಿಯಮಿತವಾಗಿ ಸೂಕ್ತ ನಿರ್ದೇಶನ ನೀಡುತ್ತಾ ಸಹಕಾರ ಬ್ಯಾಂಕುಗಳ ಸಮಗ್ರ ಸುಧಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕುಗಳು ಅಥವಾ ಷೆಡ್ಯೂಲ್ ಬ್ಯಾಂಕುಗಳ ಮಾದರಿಯಲ್ಲೇ ಪಟ್ಟಣ ಸಹಕಾರ ಬ್ಯಾಂಕುಗಳೂ ಕಟ್ಟುನಿಟ್ಟಾಗಿ ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಗಳನ್ನು ಪಾಲಿಸಬೇಕೆಂದು ಆದೇಶಿಸಿದೆ. ಆದಾಗ್ಯೂ ಕೂಡ ಯಾವುದೇ ವಾಣಿಜ್ಯ ಷೆಡ್ಯೂಲ್ ಬ್ಯಾಂಕುಗಳ ದಿನನಿತ್ಯದ ಸುಲಲಿತ ವಹಿವಾಟಿಗೆ ಹಾಗೂ ತನ್ನ ಲಾಭ ಗಳಿಕೆಗೆ ನೀಡಿರುವಷ್ಟೇ ಆದ್ಯತೆ ಮತ್ತು ಸವಲತ್ತುಗಳ ವಿಸ್ತರಣೆ ಸಹಕಾರ ಬ್ಯಾಂಕುಗಳಿಗೂ ಸಿಗಬೇಕೆಂಬುದು ನ್ಯಾಯಸಮ್ಮತವಾದದ್ದು.
ಗ್ರಾಮೀಣ ಭಾಗದ, ಕೆಳ ಮಧ್ಯಮ ವರ್ಗದ ಅದರಲ್ಲೂ ವಿಶೇಷವಾಗಿ ಅಸಂಘಟಿತ ವಲಯದ ಆಸರೆಯಾಗಿ ಇಂದು ಪಟ್ಟಣ ಸಹಕಾರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ದೇಶದ, ರಾಜ್ಯದ ಆರ್ಥಿಕತೆಗೆ ತನ್ನದೇ ಆದ ಅಮೂಲ್ಯ ಕೊಡುಗೆ ನೀಡುತ್ತ ಬಂದಿದೆ. ಇಂತಹ ಸಹಕಾರ ಕ್ಷೇತ್ರದ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಮತ್ತಷ್ಟು ಬಲವರ್ಧನೆಗೆ ಕೇಂದ್ರ ಸರ್ಕಾರ ಗಂಭೀರವಾಗಿ ಆಲೋಚಿಸಬೇಕಿದೆ.
ಈ ಹಿಂದೆ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕಿ ಷೇರುದಾರರಿಗೆ, ಗ್ರಾಹಕರಿಗೆ ಸಂಕಷ್ಟ ಎದುರಾಗುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಗ್ರಾಹಕರು ಅಥವಾ ಷೇರುದಾರರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದಂತೆ ಮುತುವರ್ಜಿ ವಹಿಸಿ ಹಣಕಾಸಿನ ನೆರವನ್ನು ನೀಡಿರುವ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಈಗಾಗಲೇ ಕೇಂದ್ರ ಸರ್ಕಾರವು ರಾಷ್ಟ್ರೀಯ ಸಹಕಾರ ನೀತಿಯೊಂದನ್ನು ತರಲು ಗಂಭೀರವಾಗಿ ತಯಾರಿ ನಡೆಸಿದ್ದು, ಅದರ ಮುಂದುವರಿದ ಭಾಗವಾಗಿ ನಮ್ಮ ಸಹಕಾರ ಬ್ಯಾಂಕುಗಳು ಸಹ ಯಾವುದೇ ರೀತಿಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಭಾರತೀಯ ರಿಸರ್ವ್ ಬ್ಯಾಂಕ್ 35 ಎ ಅಥವಾ ಆಡಳಿತ ಮಂಡಳಿಯ ವಜಾದಂತಹ ಕಠಿಣ ನಿರ್ಧಾರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ಗ್ರಾಹಕರಲ್ಲಿ, ಠೇವಣಿದಾರರಲ್ಲಿ ಆತಂಕ ಸೃಷ್ಟಿಸಿ ಜನಸಾಮಾನ್ಯರು ಸಹಕಾರ ಬ್ಯಾಂಕುಗಳಲ್ಲಿ ವ್ಯವಹಾರ ನಡೆಸಲು ಹಿಂದೇಟು ಹಾಕುವಂತ ಪರಿಸ್ಥಿತಿ ನಿರ್ವಣವಾಗುತ್ತಿದೆ. ಇದು ಸಹಜ ನೀತಿ ವಿರೋಧಿ ಅನಿಸದೇ ಇರದು. ಪಟ್ಟಣ ಸಹಕಾರ ಬ್ಯಾಂಕುಗಳನ್ನೂ ವಾಣಿಜ್ಯ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಪರಿಧಿಯಲ್ಲೇ ಸಮತೋಲನ ದೃಷ್ಟಿಯಿಂದ ನೋಡಬೇಕು. ಹಾಗಾಗಿ ದೇಶದ ಎಲ್ಲಾ ಸಹಕಾರ ಪಟ್ಟಣ ಬ್ಯಾಂಕುಗಳ ಅಪೇಕ್ಷೆಯಂತೆ ಈ ಹಿಂದೆ ಪಿಎನ್​ಬಿ ಬ್ಯಾಂಕ್, ನ್ಯಾಷನಲ್ ಬ್ಯಾಂಕ್, ಯೆಸ್ ಬ್ಯಾಂಕ್, ಇಂಡಿಯನ್ ಬ್ಯಾಂಕ್
ಇತ್ಯಾದಿ ಬ್ಯಾಂಕುಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದಂತೆ ದೇಶದ ಯಾವುದೇ ಸಹಕಾರ ಬ್ಯಾಂಕುಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಠೇವಣಿದಾರರು, ಗ್ರಾಹಕರಲ್ಲಿ ಆತಂಕ ಸೃಷ್ಟಿಸುವಂತಹ ಬ್ಯಾಂಕಿನ ದಿನನಿತ್ಯದ ವ್ಯವಹಾರಗಳಿಗೆ ತಡೆ ನೀಡುವಂತಹ ಕಠಿಣ ನಿರ್ಧಾರಗಳ ಬದಲು ತೀರ ಅವಶ್ಯಕತೆ ಇರುವ ನಿಧಿಯನ್ನು ಕೂಡಲೇ ಬ್ಯಾಂಕಿನ ವ್ಯವಸ್ಥೆಗೆ ಒದಗಿಸುವುದು. ಇಂತಹ ತಾತ್ಕಾಲಿಕ ವ್ಯವಸ್ಥೆಯಿಂದ ಜನಸಾಮಾನ್ಯರಲ್ಲಿ, ಠೇವಣಿದಾರರಲ್ಲಿ ಸಹಕಾರ ಬ್ಯಾಂಕುಗಳ ಬಗ್ಗೆ ಯಾವುದೇ ರೀತಿಯ ನಕಾರಾತ್ಮಕ ಭಾವನೆ ಮೂಡದೇ ನಿರ್ಭಯವಾಗಿ ವ್ಯವಹಾರ ಮಾಡಲು ಅನುಕೂಲವಾಗುತ್ತದೆ. ಬ್ಯಾಂಕಿನ ವ್ಯವಸ್ಥೆಗೆ ಒದಗಿಸುವ ನಿಧಿಯ ಹರಿವಿಗೆ ಕೆಲವೊಂದು ನಿಯಮಗಳನ್ನು ರೂಪಿಸಿ ಅದರನ್ವಯ ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ಅವಶ್ಯಕತೆಯಿರುವ ಹಣ ಬ್ಯಾಂಕಿಗೆ ನೀಡಬಹುದು. ಈ ರೀತಿಯ ಕಾರ್ಪಸ್ ಫಂಡ್ ಒಂದನ್ನು ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ಪಟ್ಟಣ ಸಹಕಾರ ಬ್ಯಾಂಕುಗಳ ಪುನಶ್ಚೇತನಕ್ಕೆಂದೇ ಶಾಶ್ವತ ನಿಧಿಯೊಂದನ್ನು ಮೀಸಲಿಡುವುದು. ಆರ್ಥಿಕ ಸಂಕಷ್ಟದಲ್ಲಿರುವ ಯಾವುದೇ ಸಹಕಾರ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದನ್ವಯ ಅವಶ್ಯಕತೆಯಿರುವ ನಿಧಿಯನ್ನು ನೀಡಿದ ಮೇಲೆ ಅದರ ವಸೂಲಿಯನ್ನೂ ಅದೇ ಬ್ಯಾಂಕಿನ ಅನುತ್ಪಾದಕ ಆಸ್ತಿಗಳನ್ನು ಹರಾಜು ಹಾಕಿ ಜಮಾ ಮಾಡಿಕೊಳ್ಳಬಹುದು. ಹರಾಜಿನ ನಂತರವೂ ಉಳಿದ ಬಾಕಿ ಮೊತ್ತದ ಉಳಿದ ಕಂತುಗಳ ಹಣವನ್ನು ಮರುಪಾವತಿ ಮಾಡುವ ನಿಬಂದನೆಗಳೊಂದಿಗೆ ಈ ಕಾರ್ಪಸ್ ಫಂಡ್​ನಿಂದ ಹಣವನ್ನು ಬಿಡುಗಡೆ ಮಾಡಬಹುದು. ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ನಿಗಮದ (ಡಿಐಸಿಜಿಎಸ್) ಅಡಿಯಲ್ಲಿ ನೀಡುವ 5 ಲಕ್ಷ ರೂಪಾಯಿ ವಿಮೆಯ ಅವಶ್ಯಕತೆ ಇರುವುದಿಲ್ಲವೆಂದು ನನ್ನ ಭಾವನೆ.
ಪ್ರತಿ ವರ್ಷ ಪಟ್ಟಣ ಸಹಕಾರ ಬ್ಯಾಂಕುಗಳು ಠೇವಣಿದಾರರ ಹಿತ ಕಾಯಲು ಡಿಐಸಿಜಿಎಸ್​ಗೆ ವಿಮೆಯ ಬಾಬ್ತಿನಲ್ಲಿ ಪಾವತಿ ಮಾಡುವ ಕೋಟ್ಯಂತರ ರೂ.ಗಳನ್ನು ಪ್ರತಿವರ್ಷ ಸಹಕಾರ ಬ್ಯಾಂಕುಗಳು ಉಳಿಸಿದಂತಾಗುತ್ತದೆ. ಈ ವ್ಯವಸ್ಥೆ ಜಾರಿಗೆ ತರುವುದರಿಂದ ಠೇವಣಿದಾರರು ನಿರಾತಂಕವಾಗಿ ಯಾವುದೇ ಸಹಕಾರ ಬ್ಯಾಂಕುಗಳಲ್ಲಿ ಮಿತಿಯಿಲ್ಲದಷ್ಟು ಠೇವಣಿಯನ್ನು ತೊಡಗಿಸಲು ಸಹಕಾರಿಯಾಗಬಲ್ಲದು. ಇಂತಹ ವ್ಯವಸ್ಥೆಯಿಂದ ದೇಶದ ಆರ್ಥಿಕತೆಗೆ ಹಿಂದಿನಿಂದಲೂ ಬಹುದೊಡ್ಡ ಕೊಡುಗೆ ನೀಡಿರುವ ಸಹಕಾರ ಕ್ಷೇತ್ರದ ಬ್ಯಾಂಕುಗಳ ಬಗ್ಗೆ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತೆ. ಬಹುಶಃ ಇಂತಹ ಪುನಶ್ಚೇತನದ ಉಪಕ್ರಮಕ್ಕೆ ಒಂದು ಬಾರಿ ಮಾತ್ರ ಅಂದಾಜು ಹತ್ತು ಸಾವಿರ ಕೋಟಿ ರೂಪಾಯಿಯಷ್ಟು ಶಾಶ್ವತ ಅನುದಾನವನ್ನು ನೀಡಿ ಇಂತಹ ಕಾರ್ಪಸ್ ಫಂಡ್ ಸೃಷ್ಟಿಸುವುದು ಕೇಂದ್ರ ಸರ್ಕಾರಕ್ಕೆ ಯಾವುದೇ ರೀತಿಯ ಹೊರೆಯಾಗುವುದಿಲ್ಲವೆಂಬುದು ನಮ್ಮ ಭಾವನೆ. ಇಂತಹ ನಿಧಿಯಿಂದ ಅವಶ್ಯಕತೆಯಿರುವ, ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಸಹಕಾರ ಬ್ಯಾಂಕುಗಳಿಗೆ ನೆರವು ನೀಡಿ, ಈ ನೆರವಿನ ಹಣವನ್ನು ಮತ್ತೆ ಅದೇ ಬ್ಯಾಂಕ್ ಮರುಪಾವತಿ ಮಾಡುವುದರಿಂದ ಕೇಂದ್ರ ಸರ್ಕಾರಕ್ಕಾಗಲೀ ಅಥವಾ ಭಾರತೀಯ ರಿಸರ್ವ್ ಬ್ಯಾಂಕಿಗಾಗಲೀ ಯಾವುದೇ ನಷ್ಟವಾಗುವ ಮಾತೇ ಇಲ್ಲ. ಒಟ್ಟಾರೆಯಾಗಿ ಪಟ್ಟಣ ಸಹಕಾರ ಬ್ಯಾಂಕುಗಳ ಆರ್ಥಿಕ ಸಂಕಷ್ಟದ ನೆರವಿಗೆ ಧಾವಿಸಲು ಶಾಶ್ವತ ವ್ಯವಸ್ಥೆಯೊಂದನ್ನು ರೂಪಿಸಬೇಕಿದೆ. ಈ ಸಲಹೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪಟ್ಟಣ ಸಹಕಾರ ಬ್ಯಾಂಕುಗಳನ್ನು ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕುಗಳ ಪರಿಧಿಯಲ್ಲೇ ನೋಡುತ್ತಾ ಕಷ್ಟ-ನಷ್ಟ ಸಂದರ್ಭಗಳಲ್ಲಿ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕುಗಳ ನೆರವಿಗೆ ಧಾವಿಸಿ ಬರುತ್ತಿರುವಂತೆ ಪಟ್ಟಣ ಸಹಕಾರ ಬ್ಯಾಂಕುಗಳ ನೆರವಿಗೂ ಧಾವಿಸಿ ಬರಬೇಕೆಂಬುದು ದೇಶದ ಪಟ್ಟಣ ಸಹಕಾರ ಬ್ಯಾಂಕುಗಳ ವಲಯದ ಒಕ್ಕೊರಲ ಧ್ವನಿಯಾಗಿದೆ.
(ಲೇಖಕರು, ಅಧ್ಯಕ್ಷರು, ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್)
ಸದ್ಯ ಈ ಬಿಯರ್ ಕುಡಿಯಬೇಡಿ!; ಸೆಡಿಮೆಂಟ್ ಶೇಖರಣೆ ಆಗಿರುವುದರಿಂದ ತಡೆ ಹಿಡಿದ ಅಬಕಾರಿ ಇಲಾಖೆ

ತಿರುಪತಿ ಭಕ್ತಾದಿಗಳ ಗಮನಕ್ಕೆ.. ಪಾದಚಾರಿ ಮಾರ್ಗದಲ್ಲಿ ಇನ್ಮುಂದೆ ಕೈಯಲ್ಲಿ ಕೋಲು, ಗುಂಪಲ್ಲಿ ಗೋವಿಂದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
