ಬೆಂಗಳೂರು:ಸಹಕಾರ ಸಂಘಗಳು, ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ ಚುನಾವಣೆ ಮುಂದೂಡಿಕೆಯು ಕಾನೂನು ಸಮರದ ತಿರುವು ಪಡೆದಿದೆ. ಆದರೂ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯದ ಕಾರಣ ಆಡಳಿತ ಮಂಡಳಿ ಚುನಾವಣೆ ಅತಂತ್ರವಾಗಿದೆ.
ಪದಾವಧಿ ಮುಗಿದ ಸಹಕಾರ ಸಂಘಗಳು, ಮಂಡಳಿ, ಒಕ್ಕೂಟಗಳಿಗೆ ಚುನಾವಣೆ ಮುಂದೂಡಿದ ನಿರ್ಧಾರಕ್ಕೆ ಸರ್ಕಾರ ಅಂಟಿಕೊಂಡಿದೆ. ಚುನಾವಣೆ ಪೂರ್ವ ಪ್ರಕ್ರಿಯೆಯಾದ ಅನರ್ಹ ಸದಸ್ಯರ ಪಟ್ಟಿ ತಯಾರಿ, ಅನರ್ಹ ಸದಸ್ಯರಿಗೆ ನೋಟಿಸ್ ನೀಡುವುದಕ್ಕೂ ನಿರ್ಬಂಧ ವಿಧಿಸಿದೆ.
ನೀತಿ ಸಂಹಿತೆ ಜೂ.6ರವರೆಗೆ ಜಾರಿಯಲ್ಲಿರುವ ಕಾರಣ ಕರಡುಪಟ್ಟಿ ತಯಾರಿಸಲು, ಅನರ್ಹ ಸದಸ್ಯರಿಗೆ ನೋಟಿಸ್ ನೀಡುವ ಪ್ರಕ್ರಿಯೆಗೆ ಅವಕಾಶವಿಲ್ಲ ಎಂದು ಸಹಕಾರ ಸಂಘಗಳ ಚುನಾವಣಾಧಿಕಾರಿಗಳಿಗೆ ಸಹಕಾರ ಇಲಾಖೆ ಜಂಟಿ ಕಾರ್ಯದರ್ಶಿ ಹಾಗೂ ವಿಶೇಷ ಕರ್ತವ್ಯಾಧಿಕಾರಿ ಎ.ಸಿ.ದಿವಾಕರ್ ನಿರ್ದೇಶನ ನೀಡಿದ್ದಾರೆ.
ಆಡಳಿತ ಮಂಡಳಿಯಲ್ಲಿ ಆಕಸ್ಮಿಕವಾಗಿ ತೆರವಾಗಿರುವ/ ತೆರವಾಗುವ ಪದಾಧಿಕಾರಿಗಳ ಚುನಾವಣೆ ನಡೆಸಲು ಯಾವುದೇ ನಿರ್ಬಂಧವಿಲ್ಲವೆಂದು ಮೇ 23ರ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಹಕಾರ ಕಾಯ್ದೆ ಪ್ರಕಾರ ನಿಗದಿತ ವರ್ಷಗಳ ಕಾಲಮಿತಿಯೊಳಗೆ ಆಡಳಿತ ಚುನಾವಣೆ ನಡೆಸಬೇಕು. ಅಷ್ಟೇ ಅಲ್ಲ, ಪದಾವಧಿ ವಿಸ್ತರಣೆಗೂ ಅವಕಾಶವಿಲ್ಲ. ಹಿಂದಿನ ಎರಡು ಚುನಾವಣೆಗಳು ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ನಡೆದಿವೆ.
ಈ ಬಾರಿ ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿರುವ ಹಂತದಲ್ಲಿ ಸರ್ಕಾರ ನೀತಿ ಸಂಹಿತೆ ಮುಂದಿಟ್ಟು ತಡೆಯೊಡ್ಡಿತು. ನಂತರ ಕೋರ್ಟ್ ಆದೇಶದಂತೆ ಮುಂದುವರಿಸಲು ಅವಕಾಶ ನೀಡಿತು. ಆದರೆ ಕೋರ್ಟ್ ನಿರ್ದಿಷ್ಟ ಸೂಚನೆ ನೀಡದೆ ಇರುವ ಅವಕಾಶ ಬಳಸಿಕೊಂಡು ಮತ್ತೆ ಮುಂದೂಡಿದೆ.
ಇದೀಗ ಚುನಾವಣೆ ಪೂರ್ವ ಪ್ರಕ್ರಿಯೆಗಳಾದ ಕರಡುಪಟ್ಟಿ ತಯಾರಿಕೆ, ಅನರ್ಹ ಸದಸ್ಯರಿಗೆ ನೋಟಿಸ್ ನೀಡುವುದನ್ನು ಜೂ.6ರ ಬಳಿಕ ನಿಂತಲ್ಲಿಂದಲ್ಲೇ ಪುನರಾರಂಭಿಸಲು ಇಲಾಖೆ ಸೂಚಿಸಿದೆ.
ಸಹಕಾರ ಇಲಾಖೆ ನಡೆಯಲ್ಲಿ ರಾಜಕೀಯ ತಂತ್ರಗಾರಿಕೆ ಶಂಕೆಯಿದೆ. ಸಹಕಾರ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದ ವಿಧೇಯಕ ವಿಧಾನ ಪರಿಷತ್ ಪರಿಶೀಲನಾ ಸಮಿತಿಗೆ ಒಪ್ಪಿಸಿದೆ.
ಈ ಮಸೂದೆ ಅಂಗೀಕಾರವಾಗಿ ಕಾಯ್ದೆ ರೂಪದಲ್ಲಿ ಹೊರಬರುವ ತನಕ ಮುಂದೂಡಲು ಸರ್ಕಾರ ತಂತ್ರಗಾರಿಕೆ ರೂಪಿಸಿದೆ ಎಂದು ಸಹಕಾರಿಗಳು ದೂರುತ್ತಿದ್ದಾರೆ. ಸಹಕಾರ ಸಂಘ-ಮಂಡಳಿಗಳ ಆಡಳಿತ ಮಂಡಳಿ ಚುನಾವಣೆಗಳನ್ನು ಕಾಯ್ದೆ ಪ್ರಕಾರ ನಿಗದಿತ ಕಾಲಮಿತಿಯೊಳಗೆ ನಡೆಸಬೇಕು.
ಕಳೆದ 2014, 2019ರಲ್ಲಿ ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ನಡೆದಿವೆ. ಈ ಬಾರಿ ನೀತಿ ಸಂಹಿತೆ ಕಾರಣವೊಡ್ಡಿ ಮುಂದೂಡಿರುವ ಸರ್ಕಾರದ ನಡೆ ಅನುಮಾನಾಸ್ಪದವಾಗಿದೆ ಎಂದು ರಾಜ್ಯ ಗ್ರಾಹಕರ ಸಹಕಾರ ಮಹಾಮಂಡಳಿ ಅಧ್ಯಕ್ಷ ಜಿ.ಪಿ.ಪಾಟೀಲ ಹೇಳುತ್ತಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 14 =
Remember me
