|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘಗಳು (ಪ್ಯಾಕ್ಸ್) ಬಹು ಸೇವಾ ಕೇಂದ್ರಗಳಾಗಿ ರೂಪುಗೊಂಡು ರೈತಾಪಿ ವರ್ಗಕ್ಕೆ ವಿವಿಧ ಸೇವೆ ನೀಡಲು ಸಜ್ಜಾಗುತ್ತಿವೆ. ಕರೊನಾ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಘೊಷಿಸಿದ ಆತ್ಮನಿರ್ಭರ ಯೋಜನೆಯ ಫಲವನ್ನು ರಾಜ್ಯದ ಪ್ಯಾಕ್ಸ್​ಗಳಿಗೆ ಪಡೆಯುವ ಮೂಲಕ ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆ ಹೆಚ್ಚಿಸಿ, ಉದ್ಯೋಗ ಅವಕಾಶಗಳನ್ನು ತೆರೆದಿಡಲು ಸಿದ್ಧತೆ ನಡೆದಿದೆ.
ರಾಜ್ಯದಲ್ಲಿ ಒಟ್ಟು 5500 ಪ್ಯಾಕ್ಸ್​ಗಳಿವೆ. ಅವುಗಳ ಪೈಕಿ ಆರ್ಥಿಕವಾಗಿ ಸದೃಢವಾಗಿರುವ, ಉತ್ತಮವಾಗಿ ಕಾರ್ಯಚ ಟುವಟಿಕೆ ಮಾಡುತ್ತಿರುವ 1200 ಸಂಘಗಳನ್ನು ಬಹು ಸೇವಾ ಕೇಂದ್ರಗಳಾಗಿ ಮಾಡಲು ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿ 900 ಪ್ಯಾಕ್ಸ್​ಗಳು ಈ ಸೌಲಭ್ಯ ತಮ್ಮದಾಗಿಸಿಕೊಳ್ಳಲಿವೆ. ಹಂತ ಹಂತವಾಗಿ ಉಳಿದ ಪ್ಯಾಕ್ಸ್​ಗಳು ಬಹುಸೇವಾ ಕೇಂದ್ರಗಳಾಗಲಿವೆ.
ಏನಿದು ಬಹುಸೇವಾ ಕೇಂದ್ರ?:ಕೇವಲ ಸಹಕಾರ ಸಂಘಗಳ ರೀತಿ ಕಾರ್ಯ ನಿರ್ವಹಿಸುತ್ತಿರುವ ಪ್ಯಾಕ್ಸ್​ಗಳನ್ನು ಮೇಲ್ದರ್ಜೆಗೇರಿಸಿ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತಾರಗೊಳಿಸುವುದು ಯೋಜನೆಯ ಉದ್ದೇಶ. ಗ್ರಾಮೀಣ ಭಾಗದಲ್ಲಿ ರೈತರಿಗೆ ಅಗತ್ಯವಾದ ಎಲ್ಲ ರೀತಿಯ ಸೌಲಭ್ಯಗಳು ಒಂದೆಡೆ ಸಿಗಬೇಕು ಎಂಬುದು ಆಶಯವಾಗಿದೆ. ಪಶು ಆಹಾರ, ರಸಗೊಬ್ಬರ, ಬಿತ್ತನೆ ಬೀಜಗಳ ಜತೆಗೆ ಗೋದಾಮು ನಿರ್ವಿುಸಿಕೊಂಡು ರೈತರು ಬೆಳೆದ ಕೃಷಿ ಉತ್ಪನ್ನಗಳ ದಾಸ್ತಾನು ಮಾಡುವುದು, ಶೀತಲಗೃಹಗಳ ನಿರ್ವಣದ ಮೂಲಕ ರೈತರಿಗೆ ನೆರವಾಗುವುದು, ಕೃಷಿ ಯಂತ್ರೋಪಕರಣಗಳ ಮಾರಾಟ ಹಾಗೂ ಬಾಡಿಗೆ ನೀಡುವುದು, ಪಡಿತರ ಮಾರಾಟ… ಹೀಗೆ ಪ್ಯಾಕ್ಸ್​ಗಳು ತಮ್ಮ ಚಟುವಟಿಕೆಗಳನ್ನು ವಿಸ್ತಾರ ಮಾಡಿಕೊಳ್ಳುತ್ತವೆ ಎಂದು ಹೇಳುತ್ತಾರೆ ಸಹಕಾರ ಇಲಾಖೆಯ ಅಧಿಕಾರಿಗಳು.
ಆದಿವಾಸಿಗಳಿಗೂ ನೆರವು:ರಾಜ್ಯದ ಆದಿವಾಸಿಗಳಿಗೆ ನೆರವಾಗುವ ಜೇನು ಸಹಕಾರ ಸಂಘಗಳಿವೆ. ಅಲ್ಲಿ ಜೇನುತುಪ್ಪ, ಚಕ್ಕೆ, ಕಲ್ಲುಹೂ ಹೀಗೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಇಂತಹ ಸಂಘಗಳನ್ನು ಆತ್ಮನಿರ್ಭರ ವ್ಯಾಪ್ತಿಗೆ ತಂದು ಆದಿವಾಸಿಗಳಿಗೆ ನೆರವಾಗಲು ಹಾಗೂ ಆ ಸಂಘಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ.
ಉದ್ಯೋಗಾವಕಾಶ:ಚಟುವಟಿಕೆಗಳು ವಿಸ್ತಾರವಾದಾಗ ತಾನೇ ತಾನಾಗಿ ಉದ್ಯೋಗ ಅವಕಾಶ ಸೃಷ್ಟಿಯಾಗಲಿವೆ. ಗೋದಾಮು ನಿರ್ವಹಣೆ, ಶೀತಲಗೃಹ ನಿರ್ವ ಹಣೆ, ಕೃಷಿ ಯಂತ್ರೋಪಕರಣ ಕೇಂದ್ರದಲ್ಲಿ ಕೆಲಸ ಮಾಡುವವರು, ಉಪಕರಣಗಳ ರಿಪೇರಿ ಮಾಡುವವರು ಹೀಗೆ ಪ್ರತಿ ಪ್ಯಾಕ್ಸ್ ನಲ್ಲಿ ಕನಿಷ್ಠ 10 ರಿಂದ 15 ಜನರಿಗೆ ಉದ್ಯೋಗ ನೀಡಬಹು ದಾಗಿದೆ ಎಂದು ಆಂದಾಜಿಸಲಾಗಿದೆ. 1200 ಕೇಂದ್ರಗಳು ಆರಂಭವಾದರೆ ಕನಿಷ್ಠ 10 ಸಾವಿರ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗದ ಅವಕಾಶ ಸಿಗಲಿದೆ.
ಹಸು ಶೆಡ್​ಗೂ ಸಹಾಯ:ಹಸು ಸಾಕುವವರಿಗೆ ಶೆಡ್ ನಿರ್ಮಾಣ ಹಾಗೂ ನೀರಿನ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಬಹು ಸೇವಾ ಕೇಂದ್ರಗಳ ಮೂಲಕ 14 ಸಾವಿರ ರೂ.ಗಳ ಬಡ್ಡಿ ರಹಿತ ನೆರವು ಸಿಗಲಿದೆ. ಹಸು ಸಾಕುವವರು ಆರ್ಥಿಕವಾಗಿ ಸದೃಢವಾಗಲಿ ಎಂಬ ಕಾರಣಕ್ಕೆ ಈ ರೀತಿಯಲ್ಲಿ ಹಲವು ಯೋಜನೆ ರೂಪಿಸಲಾಗುತ್ತಿದೆ.
ಎಷ್ಟು ಹಣ?:ಆತ್ಮನಿರ್ಭರ ಯೋಜನೆಯಲ್ಲಿ ಆಯ್ಕೆಆಗಿರುವ ಪ್ರತಿ ಪ್ಯಾಕ್ಸ್ ಗೆ 2 ಕೋಟಿ ರೂ. ನೆರವು ಸಿಗಲಿದೆ. ಆ ಹಣದಲ್ಲಿ ತಮ್ಮ ಸಂಘಗಳಲ್ಲಿ ಬಹು ಸೇವಾ ಕೇಂದ್ರ ತೆರೆಯಲು ಮೂಲಸೌಕರ್ಯ ಅಭಿವೃದ್ಧಿ ಮಾಡಿಕೊಂಡು, ಚಟುವಟಿಕೆ ವಿಸ್ತರಿಸಿಕೊಳ್ಳಬೇಕಾದ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ.
ವ್ಯವಸಾಯ ಸೇವಾ ಸಹಕಾರ ಸಂಘಗಳೆಲ್ಲವನ್ನೂ ಒಳಗೊಳ್ಳುವಂತೆ ಪ್ರತ್ಯೇಕ ಸಾಫ್ಟ್ ವೇರ್ ರೂಪಿಸಲಾ ಗುತ್ತಿದೆ. 21 ಡಿಸಿಸಿ ಬ್ಯಾಂಕ್​ಗಳು ಇದರ ವ್ಯಾಪ್ತಿಗೆ ಬರುತ್ತವೆ. ಯಾವ ಸಂಘದಲ್ಲಿ ಏನೇನು ಚಟುವಟಿಕೆ ನಡೆಯುತ್ತಿದೆ ಎಂಬುದನ್ನು ಎಲ್ಲಿ ಬೇಕಾದರೂ ಕುಳಿತು ಪರಿಶೀಲಿಸಬಹುದಾಗಿದೆ. ಚಟುವಟಿಕೆಗಳು ಹೆಚ್ಚಾದಂತೆ ನಿಗಾ ವ್ಯವಸ್ಥೆಯೊಂದು ಬೇಕಾಗುತ್ತದೆ.
|ಎಸ್.ಟಿ. ಸೋಮಶೇಖರ್ಸಹಕಾರ ಸಚಿವ
ಇದು ಲಸಿಕೆ​ಗೂ ಸವಾಲೊಡ್ಡುವ ಕರೊನಾ ವೈರಸ್​; ಚಿಂತೆ ಹೆಚ್ಚಿಸಿದೆ ಈ ಹೊಸ ವೇರಿಯಂಟ್​!
ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
