ಬೆಂಗಳೂರು:‘ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಹೆಚ್ಚು ಸಂಶೋಧನೆ ಅಗತ್ಯವಿದ್ದು, ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಸಹಕಾರ ವಿಶ್ವವಿದ್ಯಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಸಾಧ್ಯಾಸಾಧ್ಯತೆಗಳನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಯುವಕರು, ಮಹಿಳೆಯರನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಹಕಾರ ರಂಗದ ಕಡೆ ಕರೆತರಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು.’
ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ರಾಜ್ಯ ಸಹಕಾರಿ ವಸತಿ ಮಹಾಮಂಡಲದ ಅಧ್ಯಕ್ಷರಾಗಿರುವ ಹಿರಿಯ ಸಹಕಾರಿ ಹಾಗೂಸಹಕಾರ ಸಚಿವ ಎಸ್.ಟಿ. ಸೋಮಶೇಖರ್,ಸಹಕಾರ ಕ್ಷೇತ್ರದ ಬೆಳವಣಿಗೆಗೆ ಕಂಡಿರುವ ಕನಸುಗಳಿವು. ಶನಿವಾರದಿಂದ ಆರಂಭವಾಗಲಿರುವ ಸಹಕಾರ ಸಪ್ತಾಹದ ಹಿನ್ನೆಲೆಯಲ್ಲಿ ನೀಡಿರುವ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
* ಹಿರಿಯ ಸಹಕಾರಿಯಾಗಿದ್ದ ನಿಮಗೆ ಬಯಸಿದ ಖಾತೆ ಸಿಕ್ಕಿದೆ. ಏನನ್ನಿಸಿದೆ? ಮುಂದಿನ ಯೋಜನೆಗಳೇನು?ನಮ್ಮ ರಾಜ್ಯದ ಸಹಕಾರ ವ್ಯವಸ್ಥೆಗೆ ರಾಷ್ಟ್ರದಲ್ಲೇ ಒಳ್ಳೆಯ ಹೆಸರಿದೆ. ಕೃಷಿ ಸಾಲ, ಪಟ್ಟಣ ಸಹಕಾರ ಬ್ಯಾಂಕಿಂಗ್, ಹೈನೋದ್ಯಮದಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. 43 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳು, 2.30 ಕೋಟಿಗೂ ಹೆಚ್ಚು ಸದಸ್ಯರಿರುವ ಈ ವ್ಯವಸ್ಥೆಯನ್ನು ಸಮಗ್ರ ಬೆಳವಣಿಗೆಯತ್ತ ಕೊಂಡೊಯ್ಯಬೇಕು. ಸಹಕಾರ ಚಳವಳಿಯ ಸಮಗ್ರ ಬೆಳವಣಿಗೆಗೆ ಅಗತ್ಯವಾದುದೇನು ಎಂಬ ಬಗ್ಗೆ ಚಿಂತಿಸಲು ಹಿರಿಯ ಸಹಕಾರಿಗಳ ಸಭೆ ಕರೆದು ಸಲಹೆಗಳನ್ನು ಪಡೆದುಕೊಳ್ಳುತ್ತೇನೆ. ಕೆಲ ಕಾನೂನುಗಳಲ್ಲಿ ಬದಲಾವಣೆಯಾಗಬೇಕಾಗಿದ್ದು, ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ. ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೂ ಸಹಕಾರ ವ್ಯವಸ್ಥೆ ತಲುಪಬೇಕು. ಆರ್ಥಿಕವಾಗಿ ಅಬಲರಾದವರ, ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು ಎಂಬುದು ನನ್ನ ಉದ್ದೇಶ.
* ಅಧಿಕಾರ ಸ್ವೀಕರಿಸಿದ ತಕ್ಷಣ ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ಏನಾಗಿತ್ತು?ರೈತರ ಉತ್ಪನ್ನಕ್ಕೆ ಸರಿಯಾದ ಬೆಲೆ ಸಿಗುವುದಿಲ್ಲ, ಅವರ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಇಲ್ಲ ಎಂಬುದು ದೊಡ್ಡ ಸಮಸ್ಯೆ. ಅದರಲ್ಲೂ ಕರೊನಾ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಸಾಗಾಟ ಮಾಡಲೂ ಸಹ ಸಾಧ್ಯವಾಗುತ್ತಿರಲಿಲ್ಲ. ಅಂತಹ ಸಮಸ್ಯೆಯನ್ನು ಕೈಗೆತ್ತಿಕೊಂಡು ಪ್ರಾರಂಭಕ್ಕೆ ಕೃಷಿ ಮಾರುಕಟ್ಟೆ ಸಮಿತಿಗಳ ಕಾರ್ಯದ ಬಗ್ಗೆ ಗಮನಹರಿಸಿ ರೈತರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರಗಳನ್ನು ಕಂಡುಕೊಳ್ಳಲಾಯಿತು. ರೈತರ ಉತ್ಪನ್ನಗಳ ಸಾಗಾಟಕ್ಕೆ ಅಗತ್ಯ ಅನುಕೂಲಗಳನ್ನು ಕಲ್ಪಿಸಿಕೊಡಲಾಯಿತು. ಬೆಳೆಗಳಿಗೆ ಗರಿಷ್ಠ ಬೆಲೆ ಸಿಗುವಂತೆ ಮಾಡಲು ಅವರ ಉತ್ಪನ್ನವನ್ನು ಎಪಿಎಂಸಿಯಲ್ಲಿ, ಅಗತ್ಯವೆನಿಸಿದರೆ ಹೊರಗಡೆಯೂ ಮಾರಾಟ ಮಾಡಲು ಅವಕಾಶವನ್ನು ಕಲ್ಪಿಸಿಕೊಡಲಾಯಿತು.
*ಸಹಕಾರ ವಿಶ್ವವಿದ್ಯಾಲಯ ಸ್ಥಾಪನೆ ಬರೀ ಚರ್ಚೆಯಲ್ಲಿಯೇ ಇದೆ?ಸಹಕಾರ ಕ್ಷೇತ್ರದಲ್ಲಿ ಸಂಶೋಧನೆಗಳು ಹೆಚ್ಚಾಗಬೇಕಾಗಿದೆ. ಸಹಕಾರ ವಲಯದ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಆದ್ದರಿಂದ ಶಾಲಾ ಶಿಕ್ಷಣದ ಹಂತದಲ್ಲಿಯೇ ಸಹಕಾರದ ಬಗ್ಗೆ ಪಠ್ಯ ಇರಬೇಕಾಗಿದೆ. ಜತೆಗೆ ವಿಶ್ವವಿದ್ಯಾಲಯ ಸಹ ಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ.
* ಕರೊನಾ ಸಂಕಷ್ಟದ ಸಂದರ್ಭದಲ್ಲಿ ಸಹಕಾರ ಇಲಾಖೆ ಸ್ಪಂದಿಸಿದ್ದು ಹೇಗೆ?ರೈತರ ಸಮಸ್ಯೆಗಳ ಪರಿಹಾರದತ್ತ ಗಮನ ಹರಿಸುತ್ತಿದ್ದ ಸಂದರ್ಭದಲ್ಲೇ ರಾಜ್ಯದ ಆರ್ಥಿಕ ಸ್ಥಿತಿ ಡೋಲಾಯಮಾನವಾಯಿತು. ಪರಿಹಾರ ನಿಧಿಗೆ ಸಹಕಾರ ಸಂಸ್ಥೆಗಳ ಕೊಡುಗೆಯನ್ನು ಸಂಗ್ರಹಿಸುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಪ್ರಸ್ತಾಪಿಸಿದಾಗ, ಅವರು ಸಮ್ಮತಿಸಿದರು. ತಕ್ಷಣವೇ ಎ.ಪಿ.ಎಂ.ಸಿ., ಅಪೆಕ್ಸ್ ಮತ್ತಿತರ ಸಂಸ್ಥೆಗಳಿಂದ 53 ಕೋಟಿ ರೂ. ಸಂಗ್ರಹಿಸಿ ಕರೊನಾ ಪರಿಹಾರ ನಿಧಿಗೆ ನೀಡಲಾಯಿತು. ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸುತ್ತಿದ್ದ ಆಶಾಕಾರ್ಯಕರ್ತೆಯರಿಗೆ ಪೋ›ತ್ಸಾಹಧನ ನೀಡಬೇಕೆಂಬ ಆಶಯದೊಂದಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಂದ ಅವುಗಳು ಗಳಿಸಿದ ಲಾಭದಲ್ಲಿ ಪ್ರತಿ ಕಾರ್ಯಕರ್ತೆಗೆ 3000 ರೂ. ನಂತೆ 42524 ಮಹಿಳೆಯರಿಗೆ 12.75 ಕೋಟಿ ರೂ. ನೀಡಲಾಯಿತು.
* ಆತ್ಮನಿರ್ಭರ ಭಾರತ ಯೋಜನೆಯನ್ನು ಸಹಕಾರ ವಲಯಕ್ಕೆ ತರಲು ಏನು ಪ್ರಯತ್ನ ಮಾಡಿದ್ದೀರಿ?ರೈತರಿಗೆ, ಹೈನುಗಾರರಿಗೆ, ಮೀನುಗಾರರಿಗೆ, ಸಣ್ಣಪುಟ್ಟ ಕೆಲಸಗಳಲ್ಲಿ ನಿರತರಾಗಿರುವವರಿಗೆ ಬಹಳಷ್ಟು ಹಣದ ಅವಶ್ಯಕತೆ ಇರುತ್ತದೆ. ಹಾಗಾಗಿ ‘ಆತ್ಮನಿರ್ಭರ ಭಾರತ’ ಅಡಿಯಲ್ಲಿ ಲಭ್ಯವಾದ ಹಣ, ಬೇರೆ ಬೇರೆ ಮೂಲಗಳಿಂದ ಒಟ್ಟು 39300 ಕೋಟಿ ರೂ.ಗಳನ್ನು ಸಂಗ್ರಹಿಸಿ ವಿವಿಧ ಕೃಷಿ ಹಾಗೂ ಪೂರಕ ಚಟುವಟಿಕೆಗಳಿಗೆ ಸೌಲಭ್ಯ ಒದಗಿಸಲು ರಾಜ್ಯದ 4 ವಿಭಾಗಗಳಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮ ರೂಪಿಸಲಾಗಿದೆ.
* ತಾವು ಸಹಕಾರ ವಸತಿ ಕ್ಷೇತ್ರದಿಂದ ಬಂದವರು, ಆ ಕ್ಷೇತ್ರದ ಬೆಳವಣಿಗೆ ಹೇಗಿದೆ?ವಸತಿ ಕ್ಷೇತ್ರ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಮಹಾರಾಷ್ಟ್ರ, ತಮಿಳುನಾಡುಗಳಲ್ಲಿ ವಸತಿ ಸಹಕಾರ ಸಂಘಗಳು ಉತ್ತಮವಾಗಿ ಕೆಲಸ ಮಾಡುತ್ತಿವೆಯಾದರೂ ಅಲ್ಲಿನ ಸನ್ನಿವೇಶ ವಿಭಿನ್ನವಾಗಿದೆ. ನಮ್ಮ ರಾಜ್ಯದಲ್ಲಿಯೂ ವಸತಿ ಸಹಕಾರ ಸಂಘಗಳು ಉತ್ತಮವಾಗಿ ಕೆಲಸ ಮಾಡಿ ಸಮಾಜದ ಅಬಲರ ತಲೆ ಮೇಲೊಂದು ಸೂರು ನಿರ್ವಿುಸಿಕೊಳ್ಳಲು ನೆರವಾಗಬೇಕೆಂಬ ಆಶಯ ನಮ್ಮೆಲ್ಲರದಾಗಿದೆ.
* ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳ ಬಲವರ್ಧನೆ ತಮ್ಮ ಕಾರ್ಯತಂತ್ರ?ಇತ್ತೀಚಿನ ದಿನಗಳಲ್ಲಿ ಕೆಲವು ಬ್ಯಾಂಕುಗಳನ್ನು ಹೊರತುಪಡಿಸಿದರೆ ಉಳಿದಂತೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ನಾನು ಸಚಿವನಾಗಿ ಬಹುತೇಕ ಬ್ಯಾಂಕುಗಳಿಗೆ ಭೇಟಿ ನೀಡಿದ್ದೇನೆ. ಕಾರ್ಯಕ್ಷಮತೆಯನ್ನು ಅವಲೋಕಿಸಿದ್ದೇನೆ. ಅಗತ್ಯ ಸೂಚನೆಗಳನ್ನು ನೀಡಿದ್ದೇನೆ. ಎಲ್ಲ ಜಿಲ್ಲಾ ಸಹಕಾರ ಬ್ಯಾಂಕುಗಳು ರೈತರ ಪೂರ್ಣ ಅಗತ್ಯಗಳನ್ನು ಪೂರೈಸುವಂತೆ ಮಾಡಲು ಪ್ರಯತ್ನಿಸುತ್ತೇನೆ.
* ಕೆಎಂಎಫ್ ಅಭಿವೃದ್ಧಿಗೆ ನಿಮ್ಮ ಪ್ರಯತ್ನವೇನಿದೆ?ಕೆ.ಎಂ.ಎಫ್. ದಿನಂಪ್ರತಿ 80 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತಿದೆ. ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹಾಲು ಉತ್ಪಾದಕ ಸಹಕಾರ ಸಂಘಗಳು, ಹಾಲು ಒಕ್ಕೂಟಗಳು, ಕೆ.ಎಂ.ಎಫ್. ಕೆಲವು ಆಡಳಿತಾತ್ಮಕ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳ ಪರಿಹಾರಕ್ಕೆ ಸರ್ಕಾರ ಗಮನಹರಿಸುತ್ತದೆ.
* ಸಹಕಾರಾಭಿವೃದ್ಧಿಗೆ ಏನೇನು ಯೋಜನೆ ರೂಪಿಸಿದ್ದೀರಿ?ಸಹಕಾರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕಾರ ಶಿಕ್ಷಣ-ತರಬೇತಿ ಅತ್ಯಂತ ಅವಶ್ಯ. ತರಬೇತಿಯನ್ನು ಆಧುನೀಕರಣಗೊಳಿಸಿ ದೂರಶಿಕ್ಷಣ ಪದ್ಧತಿಯಡಿ ಹೆಚ್ಚಿನ ಜನರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಗ್ರಾಮಗಳಲ್ಲಿ ಕ್ಲಸ್ಟರ್ ಮಾದರಿ ಶಿಕ್ಷಣ ನೀಡುವ ಕೆಲಸ ಆಗ್ತಾ ಇದೆ. ಸಹಕಾರ ಚಳವಳಿ ಕ್ಷಿಪ್ರ ಗತಿಯಲ್ಲಿ ಬೆಳೀತಾ ಇರೋದ್ರಿಂದ ಶಿಕ್ಷಣ-ತರಬೇತಿ-ಪ್ರಚಾರ ಹೆಚ್ಚು ವ್ಯಾಪಕ ಆಗಬೇಕು, ಹೆಚ್ಚು ಪರಿಣಾಮಕಾರಿ ಆಗಬೇಕು. ಕೆಲ ಕಾನೂನು ತಿದ್ದುಪಡಿ ಆಗಬೇಕಾಗಿದೆ.
ಬಿಹಾರ ಸರ್ಕಾರ ರಚನೆ: ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ – ಭಾನುವಾರ ಎನ್​ಡಿಎ ಸಭೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + one =
Remember me
