|ವಿಲಾಸ ಮೇಲಗಿರಿಬೆಂಗಳೂರು
ಕರೊನಾ ಕಾರಣದಿಂದ ಸಹಕಾರ ಸಂಘಗಳು ಈಗಾಗಲೆ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, ಇದೀಗ ಚುನಾವಣೆಯನ್ನು ಮುಂದೂಡುವ ಮೂಲಕ ಸರ್ಕಾರ ಸಂಘಗಳನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ರಾಜ್ಯದಲ್ಲಿ ಒಟ್ಟು 52 ಸಾವಿರ ಸಹಕಾರ ಸಂಘಗಳಿದ್ದು, ಮಾರ್ಚ್ ಅಂತ್ಯದ ವೇಳೆಗೆ ಸುಮಾರು 700ಕ್ಕೂ ಹೆಚ್ಚು ಸಂಘಗಳಿಗೆ ಚುನಾವಣೆ ನಡೆಯಬೇಕಿದೆ. ಆದರೆ, ಕೋವಿಡ್ 3ನೇ ಅಲೆ ಹಾಗೂ ಒಮಿಕ್ರಾನ್ ಸೋಂಕಿನ ತೀವ್ರತೆಯ ಆತಂಕದಿಂದ ಸರ್ಕಾರ ಚುನಾವಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ. ಸಹಕಾರ ಸಂಘಗಳ ಕೊನೆಯ ತ್ರೖೆಮಾಸಿಕ ಅವಧಿಯಲ್ಲಿ ಈ ಆದೇಶ ಸಹಕಾರಿಗಳಲ್ಲಿ ಆಘಾತ ಉಂಟು ಮಾಡಿದೆ. ಕೋವಿಡ್ 2ನೇ ಅಲೆಯಲ್ಲೂ ಸಹಕಾರ ಸಂಘ/ಬ್ಯಾಂಕ್ ಹಾಗೂ ಸೌಹಾರ್ದ ಸಹಕಾರಿಗಳ ಸಾರ್ವತ್ರಿಕ ಚುನಾವಣೆಯನ್ನು ಡಿಸೆಂಬರ್ 2021ರ ಅಂತ್ಯದವರೆಗೆ ಮುಂದೂಡಲಾಗಿತ್ತು.
ದೊಡ್ಡ ಸಂಖ್ಯೆ ಸದಸ್ಯರಿಲ್ಲ:ಸಹಕಾರ ಸಂಘ/ ಸೌಹಾರ್ದ ಸಹಕಾರ ಬ್ಯಾಂಕ್ ಸಾಮಾನ್ಯವಾಗಿ 500 ರಿಂದ 3000 ವರೆಗೆ ಸದಸ್ಯರನ್ನು ಹೊಂದಿರುತ್ತವೆ. ರೈತರಿಗೆ, ತಳಮಟ್ಟದಲ್ಲಿ ಈ ಸಂಘಗಳು ಬಡ ಮತ್ತು ಮಧ್ಯಮ ವರ್ಗದ ಕಷ್ಟಗಳಿಗೆ ಸ್ಪಂದಿಸುತ್ತವೆ. ಆದರೆ, ಈಗ ಚುನಾವಣೆ ಮುಂದೂಡಿ ಆಡಳಿತಾಧಿಕಾರಿಗಳನ್ನು ನೇಮಿಸುವುದರಿಂದ ಸಹಕಾರ ಸಂಘಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ ಎಂಬುದು ಸಹಕಾರಿಗಳ ಅಭಿಪ್ರಾಯ.
ಆಡಳಿತಾಧಿಕಾರಿಗಳಿಂದ ಅಡ್ಡಿ:ಸಹಕಾರ ಸಂಘಗಳ ಅಭಿವೃದ್ಧಿಗೆ ಆಡಳಿತಾಧಿಕಾರಿಗಳನ್ನು ಹೇರುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಆಡಳಿತಾಧಿಕಾರಿಗಳು ತಮ್ಮ ಕೆಲಸದ ಜತೆಗೆ ಹೆಚ್ಚುವರಿಯಾಗಿ ಆಡಳಿತಾಧಿಕಾರಿ ಹುದ್ದೆ ನಿರ್ವಹಿಸುವುದರಿಂದ ಹೆಚ್ಚು ಗಮನಕೊಡಲು ಸಾಧ್ಯವಾಗುವುದಿಲ್ಲ.
ನಮಗೆ ಮಾತ್ರ ಏಕೆ ನಿರ್ಬಂಧ:ಸೋಂಕಿನ ತೀವ್ರತೆ ಜನರನ್ನು ಅಷ್ಟಾಗಿ ಬಾಧಿಸಿಲ್ಲ. ಕೋವಿಡ್ ಸಾವಿನ ಪ್ರಮಾಣ ಕೂಡ ಕಡಿಮೆ ಇದೆ. ಈ ಹಿನ್ನೆಲೆ ಯಲ್ಲಿ ಸರ್ಕಾರ ಸಿನಿಮಾ ಮಂದಿರ, ಮದುವೆ, ಜಿಮ್ ಮಾಲ್​ಗಳಿಗೆ ನಿರ್ಬಂಧಗಳನ್ನು ಸಡಿಲಿಸಿದೆ. ಆದರೆ, ನೂರಿನ್ನೂರರಿಂದ ಸಾವಿರ ಸಂಖ್ಯೆಯಲ್ಲಿರುವ ಸಹಕಾರ ಸಂಘಗಳ ಚುನಾವಣೆ ನಡೆಸುವ ವಿಚಾರದಲ್ಲಿ ಸರ್ಕಾರ ಹಿಂದೇಟು ಹಾಕಿರುವುದು ಏಕೆ ಎಂಬ ಪ್ರಶ್ನೆ ಸಹಕಾರ ವಲಯದಲ್ಲಿ ಕೇಳಿ ಬರುತ್ತಿದೆ.
ಮಹಾಮಂಡಳಕ್ಕೂ ಎಫೆಕ್ಟ್!:ಪ್ರಾಥಮಿಕ ಸಹಕಾರ ಸಂಘಗಳ ಸದಸ್ಯರನೇಕರು ಜಿಲ್ಲಾ ಒಕ್ಕೂಟ ಮತ್ತು ರಾಜ್ಯ ಮಟ್ಟದ ಮಹಾ ಮಂಡಳಗಳ ನಿರ್ದೇಶಕರಾಗಿರುತ್ತಾರೆ. ಪ್ರಾಥಮಿಕ ಹಂತದಲ್ಲಿ ಚುನಾವಣೆ ನಡೆಸದೇ ಆಡಳಿತಾಧಿಕಾರಿ ನೇಮಕ ಮಾಡಿದಲ್ಲಿ ಒಕ್ಕೂಟ, ಮಹಾಮಂಡಳಗಳಲ್ಲಿ ತನ್ನಿಂದ ತಾನೇ ಸದಸ್ಯತ್ವ ರದ್ದಾಗುತ್ತದೆ. ಇದರಿಂದ ಒಕ್ಕೂಟ ಮತ್ತು ಮಹಾಮಂಡಳದ ಆಡಳಿತ ನಿರ್ವಹಣೆಗೂ ಅಡಚಣೆಯಾಗುವ ಸಾಧ್ಯತೆಗಳಿವೆ.
ಚುನಾವಣೆ ಮುಂದೂಡಿ ಆಡಳಿತಾಧಿಕಾರಿ ನೇಮಿಸುವುದರಿಂದ ಸಹಕಾರ ಸಂಘಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ. ಆದ್ದರಿಂದ ಚುನಾವಣೆ ನಡೆಯುವವರೆಗೆ ಈಗಿರುವ ಆಡಳಿತ ಮಂಡಳಿಯನ್ನೇ ಮುಂದುವರಿಸಬೇಕು. ಸರ್ಕಾರ ಚುನಾವಣೆ ಮುಂದೂಡಿಕೆ ಆದೇಶ ಪುನರ್ ಪರಿಶೀಲಿಸಬೇಕು. ಇಲ್ಲದಿದ್ದರೆ ನಾವು ನ್ಯಾಯಾಲಯದ ಮೆಟ್ಟಿಲೇರುವ ಬಗ್ಗೆ ಚಿಂತಿಸುತ್ತೇವೆ.
|ಬಿ.ಎಚ್.ಕೃಷ್ಣಾರೆಡ್ಡಿಅಧ್ಯಕ್ಷರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + fourteen =
Remember me
