ಪ್ರಕಾಶ್ ಮಂಜೇಶ್ವರ ಮಂಗಳೂರು
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಕಾಸರಗೋಡು, ಕಣ್ಣೂರು ಜಿಲ್ಲೆಗಳು ಮತ್ತು ಗೋವಾದ ಮಡಗಾಂವನ್ನು ಸಾಂಸ್ಕೃತಿಕ ನಗರ ಮೈಸೂರು ಜತೆ ಬೆಸೆಯುವ ಯೋಜನೆ ನೈರುತ್ಯ ರೈಲ್ವೆಯ ಮುಂದಿದೆ. ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಸಂಸದರು ಯೋಜನೆ ಜಾರಿಗೆ ಶಿಫಾರಸು ಪತ್ರ ಬರೆದಿದ್ದು, ರೈಲ್ವೆ ವಲಯದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ.
ಪ್ರಸ್ತುತ ಮಂಗಳೂರು ಸೆಂಟ್ರಲ್-ಮಡ್‌ಗಾಂವ್ ಇಂಟರ್‌ಸಿಟಿ ರೈಲು ಹಾಗೂ ವಾರದಲ್ಲಿ ಮೂರುದಿನ ಬೆಂಗಳೂರು-ಕುಣಿಗಲ್- ಕಣ್ಣೂರು (ಮಂಗಳೂರು ಮಾರ್ಗ) ರೈಲುಗಳು ಸಂಚರಿಸುತ್ತಿವೆ. ಇವೆರಡು ರೈಲುಗಳನ್ನು ರದ್ದುಪಡಿಸಿ, ಸದ್ಯ ವಾರದಲ್ಲಿ ಮೂರು ದಿನ ಮೈಸೂರು ಮಾರ್ಗ ಸಂಚರಿಸುತ್ತಿರುವ ಬೆಂಗಳೂರು-ಕಣ್ಣೂರು (ಕೇರಳ)ರೈಲನ್ನು, ಮಂಗಳೂರಿನಲ್ಲಿ ವಿಭಜಿಸಿ ಉಡುಪಿ ಮೂಲಕ ಮಡಗಾಂವ್ ತನಕ ವಿಸ್ತರಿಸುವುದು ಯೋಜನೆ.
ದಿನಂಪ್ರತಿ ರಾತ್ರಿ 8.30ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು 11 ಗಂಟೆಗೆ ಮೈಸೂರು ಹಾಗೂ ಮರುದಿನ ಬೆಳಗ್ಗೆ 8ಕ್ಕೆ ಮಂಗಳೂರು ಸೆಂಟ್ರಲ್ ತಲುಪುವುದು. ದಿನಂಪ್ರತಿ ಬೆಳಗ್ಗೆ 8.20ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಡುತ್ತಿರುವ ಮಡಗಾಂವ್ ಇಂಟರ್‌ಸಿಟಿ ರೈಲು ರದ್ದುಪಡಿಸುವುದು. ಬದಲಿಗೆ ಇದೇ ಸಮಯದಲ್ಲಿ ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಬೆಳಗ್ಗೆ ಮಂಗಳೂರು ತಲಪುವ ರೈಲಿನ ಒಂದು ಭಾಗವನ್ನು ಪ್ರತ್ಯೇಕ ಇಂಜಿನ್‌ನಲ್ಲಿ ಮಡಗಾಂವ್‌ಗೆ, ಇನ್ನೊಂದು ಭಾಗವನ್ನು ಕಣ್ಣೂರಿಗೆ ಕಳುಹಿಸುವುದು.
ಹಳೇ ಯೋಜನೆ ಹೊಸ ರೂಪ2007ರಲ್ಲಿ ಯಶವಂತಪುರ-ಮಂಗಳೂರು (ಮೈಸೂರು ಮಾರ್ಗ) ಹೊಸ ರೈಲು ಆರಂಭವಾಯಿತು. 2009ರಲ್ಲಿ ಇದೇ ರೈಲು ಕೇರಳದ ಕಣ್ಣೂರಿಗೆ ವಿಸ್ತರಣೆಯಾಯಿತು. 2012ರಲ್ಲಿ ಇದೇ ರೈಲು ವಿಭಜನೆಗೊಂಡು ಕಾರವಾರಕ್ಕೆ ವಿಸ್ತರಣೆಯಾಯಿತು. 2018ರಲ್ಲಿ ಶ್ರವಣಬೆಳಗೊಳ ಮಾರ್ಗ ಸಜ್ಜಾದ ಸಂದರ್ಭ ಈ ರೈಲು ವಾರದಲ್ಲಿ ನಾಲ್ಕು ದಿನ ಶ್ರವಣಬೆಳಗೊಳ ಮಾರ್ಗ ಮತ್ತು ಮೂರು ದಿನ ಮೈಸೂರು ಮೂಲಕ ಸಂಚರಿಸತೊಡಗಿತು. ಈ ವರ್ಷ(2020) ಪಡೀಲು ಬೈಪಾಸ್ ಮೂಲಕ ಬೆಂಗಳೂರು- ಕಾರವಾರ ರೈಲು ಆರಂಭ ವಾದ ಸಂದರ್ಭ ಹಳೇ ರೈಲು ರದ್ದುಪಡಿಸಿ ವಾರದಲ್ಲಿ ನಾಲ್ಕು ದಿನ ಕುಣಿಗಲ್ ಮತ್ತು ಮೂರು ದಿನ ಮೈಸೂರು ಮಾರ್ಗ ಮಂಗಳೂರು ಜಂಕ್ಷನ್ ಮೂಲಕ ಬೆಂಗಳೂರು- ಕಣ್ಣೂರು ರೈಲು ಮುಂದುವರಿಸಲಾಯಿತು. ಇದರಿಂದ ಮಂಗಳೂರು ಸೆಂಟ್ರಲ್, ಉಡುಪಿ, ಕಾರವಾರ ಭಾಗದ ಜನರಿಗೆ ಮೈಸೂರು ಸಂಪರ್ಕ ಕಡಿದುಕೊಂಡಂತಾಗಿದೆ. ಈ ಕೊರತೆ ತುಂಬುವುದು ಹೊಸ ಯೋಜನೆ ಉದ್ದೇಶ.
ನಿತ್ಯ ಪ್ರಯಾಣಿಕರ ಅಗತ್ಯ ಹಾಗೂ ಪ್ರವಾಸೋದ್ಯಮ ದೃಷ್ಟಿಯಿಂದ ಕರಾವಳಿ ಭಾಗದ ಜನರಿಗೆ ಮೈಸೂರು ಸಂಪರ್ಕ ಅಗತ್ಯ. ಹೊಸ ಪ್ರಸ್ತಾವನೆ ಜಾರಿಯಾದರೆ ಈ ಕೊರತೆ ತುಂಬಲಿದೆ. ವಲಯ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸದಸ್ಯ ಕೆ.ವೆಂಕಟೇಶ ಕಿಣಿ ಅವರು ಕೂಡ ಈ ಬಗ್ಗೆ ನೈರುತ್ಯ ರೈಲ್ವೆಯನ್ನು ಒತ್ತಾಯಿಸಿದ್ದಾರೆ.ಅನಿಲ್ ಹೆಗ್ಡೆ, ತಾಂತ್ರಿಕ ಸಲಹೆಗಾರರು, ರೈಲ್ವೇ ಯಾತ್ರಿ ಸಮಿತಿ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − eighteen =
Remember me
