ಉತ್ತರಕನ್ನಡ:ಯುವಕನೋರ್ವ ಮೂರು ಹಾವುಗಳೊಂದಿಗೆ ಹುಚ್ಚಾಟ ನಡೆಸಿ ಅದನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ ವೇಳೆ ಒಂದು ಹಾವಿನಿಂದ ಕಚ್ಚಿಸಿಕೊಂಡ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾವು ಕಡಿತಕ್ಕೊಳಗಾದ ಉರಗಪ್ರೇಮಿ ಶಿರಸಿ ನಗರದ ಮಾಜ್ ಸಯ್ಯದ್ (21), ಮೂರು ನಾಗರಹಾವುಗಳೊಂದಿಗೆ ವಿಡಿಯೋ ಮಾಡುವ ವೇಳೆ ಈ ಘಟನೆ ನಡೆದಿದೆ. ಕಳೆದ ಭಾನುವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಾವುಗಳನ್ನ ರಕ್ಷಣೆ ಮಾಡಿ ಬಿಡುವ ಮುನ್ನ ವಿಡಿಯೋ ಮಾಡುತ್ತಿದ್ದ ಸಯ್ಯದ್, ಹಾವುಗಳ ಎದುರು ಕುಳಿತು ಮಾತನಾಡುತ್ತಿದ್ದ ವೇಳೆ ಏಕಾಏಕಿ ಒಂದು ನಾಗರಹಾವು ಕಚ್ಚಿದೆ.
ಹಾವು ಕಡಿತದ ತೀವ್ರತೆಗೆ ಪ್ರಜ್ಞಾಹೀನನಾಗಿದ್ದ ಯುವಕನಿಗೆ ಸ್ನೇಹಿತರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 38 ಡೋಸ್ ಆ್ಯಂಟಿ ವೇನಮ್ ನೀಡಿದ ಬಳಿಕ ಸಯ್ಯದ್ ಚೇತರಿಸಿಕೊಂಡಿದ್ದು, ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಕಳೆದ 9 ವರ್ಷಗಳಿಂದ ಹಾವುಗಳ ರಕ್ಷಣೆಯಲ್ಲಿ ತೊಡಗಿರುವ ಸಯ್ಯದ್, ಇದುವರೆಗೆ 3 ಸಾವಿರಕ್ಕೂ ಅಧಿಕ ನಾಗರಹಾವುಗಳ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಹಾವುಗಳ ಕುರಿತು ಮಾಹಿತಿ ಹಂಚಿಕೊಳ್ಳುವ ವೇಳೆ ಈ ದುರ್ಘಟನೆ ನಡೆದಿದೆ.
ಜೇಮ್ಸ್​ ಪೈರಸಿ ಮಾಡಬೇಡಿ, ಇದು ದೇವರ ಸಿನಿಮಾ: ಕೈ ಮುಗಿದು ಬೇಡಿಕೊಂಡ ಅಭಿಮಾನಿಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
