ಚಿತ್ರದುರ್ಗ:ನಾಗರಹಾವು ಇಲಿ-ಹೆಗ್ಗಣ ಮುಂತಾದವುಗಳನ್ನು ನುಂಗುವುದು ಸಾಮಾನ್ಯ. ಆದರೆ ಅದು ಇತರ ದೊಡ್ಡ ಹಾವುಗಳನ್ನು ನುಂಗುವುದು ಅತ್ಯಪರೂಪ. ಅದಾಗ್ಯೂ ಇಲ್ಲೊಂದು ಕಡೆ ದೊಡ್ಡ ಕೊಳಕ ಮಂಡಲವನ್ನೇ ನಾಗರಹಾವೊಂದು ನುಂಗಿಬಿಟ್ಟಿದೆ.
ಚಿತ್ರದುರ್ಗದ ಸಾಂತ್ವನ ಕೇಂದ್ರದ ಬಳಿ ಸೋಮವಾರ ಈ ಅತ್ಯಂತ ಅಪರೂಪದ ಘಟನೆ ಕಂಡುಬಂದಿದೆ. ಒಂದು ದೊಡ್ಡ ಕೊಳಕು ಮಂಡಲ ಹಾವನ್ನೇ ಈ ನಾಗರ ಹಾವು ನುಂಗುತ್ತಿರುವುದನ್ನು ಕಂಡ ಸ್ಥಳೀಯರು ನಿಬ್ಬೆರಗಾಗಿದ್ದಾರೆ.
ಸುಮಾರು ಹನ್ನೆರಡು ಅಡಿ ಇದ್ದ ಈ ನಾಗರಹಾವು ದೊಡ್ಡ ಕೊಳಕು ಮಂಡಲ ಹಾವನ್ನು ಕೆಲವೇ ನಿಮಿಷಗಳಲ್ಲಿ ನುಂಗಿದ್ದಷ್ಟೇ ಅಲ್ಲದೆ, ಅಷ್ಟು ದೊಡ್ಡ ಹಾವನ್ನು ಸೇವಿಸಿದ ಬಳಿಕವೂ ಅಲ್ಲಿ ನಿಲ್ಲದೆ ನೋಡನೋಡುತ್ತಿದ್ದಂತೆ ಕಣ್ಮರೆಯಾಗಿ ಹೋಗಿದೆ.
ಒಂದೂವರೆ ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿದ ತಾಯಿ; ಕಾರಣ ಇದೇನಾ?
Sign in to your account
Please enter an answer in digits:fifteen + thirteen =
Remember me
