ಶಿವಮೊಗ್ಗ:ನಗರದ ಹೊರವಲಯದ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಮಂಗಳವಾರ ಬೆಳ್ಳಂಬೆಳಗ್ಗೆ ಎಂಟ್ರಿ ಕೊಟ್ಟಿದ್ದ ನಾಗಪ್ಪ, ಸದ್ದಿಲ್ಲದೇ ಆಪರೇಷನ್ ಶುರು ಮಾಡಿ ಒಂದರ ಮೇಲೊಂದು ಬರೋಬ್ಬರಿ ಒಂಬತ್ತು ಕೋಳಿ ಮರಿಗಳನ್ನು ಗುಳುಂ ಮಾಡಿದ್ದ.
ಕೋಳಿಫಾರಂನಲ್ಲಿ ಯಾವತ್ತೂ ಇಲ್ಲದ ಸದ್ದನ್ನು ಕೇಳಿದ ಮಹಾವಿದ್ಯಾಲಯದ ಜಾನುವಾರು ಸಾಕಾಣಿಕೆ ಸಂಕೀರ್ಣದ ಸಿಬ್ಬಂದಿ ಸ್ಥಳಕ್ಕೆ ಹೋಗಿ ನೋಡಿದಾಗ ಅಚ್ಚರಿ ಕಾದಿತ್ತು. ಕೋಳಿಫಾರಂನ ಮರಿಗಳಿರುವ ಅಡ್ಡದಲ್ಲಿ ಬುಸುಗುಡುತ್ತಿದ್ದ ನಾಗರಹಾವು 20ಕ್ಕೂ ಅಧಿಕ ಕೋಳಿ ಮರಿಗಳನ್ನು ಸಾಯಿಸಿ ಅದರಲ್ಲಿ 9 ಮರಿಗಳನ್ನು ತಿಂದಿತ್ತು.
ನಾಲ್ಕೈದು ಅಡಿ ಉದ್ದದ ನಾಗರಹಾವು ಕಂಡು ಬೇಸ್ತುಬಿದ್ದ ಸಂಕೀರ್ಣದ ಸಿಬ್ಬಂದಿ ತಕ್ಷಣ ಪಶುವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಕೋಳಿಮರಿಗಳ ಫಾರಂನಲ್ಲಿ ಅಡಗಿದ್ದ ನಾಗರಹಾವನ್ನು ಸೆರೆ ಹಿಡಿದು ರಕ್ಷಣೆ ಮಾಡಿದರು. ಸ್ವಲ್ಪ ಹೊತ್ತಿನಲ್ಲೇ ನಾಗರಹಾವು ನುಂಗಿದ್ದ ಕೋಳಿ ಮರಿಗಳನ್ನು ಒಂದೊಂದಾಗಿ ಹೊರಗೆ ಹಾಕಿತು. ನಂತರ ಕಿರಣ್ ಹಾವನ್ನು ಸಮೀಪದ ಅರಣ್ಯಕ್ಕೆ ಬಿಟ್ಟುಬಂದರು.

ಸಂಭ್ರಮದ ಸಾವು: ಮದುವೆ ಸಮಾರಂಭದಲ್ಲಿ ಕುಣಿಯುತ್ತ ಕುಣಿಯುತ್ತ ಕುಸಿದು ಬಿದ್ದು ಪ್ರಾಣ ಕಳ್ಕೊಂಡ!

ರಾಜ್ಯದಲ್ಲಿ ಒಂದೇ ದಿನ 108 ಇನ್​ಸ್ಪೆಕ್ಟರ್​ಗಳ ವರ್ಗಾವಣೆ; ನಿಮ್ಮೂರಿಗೆ ಯಾರು ಇನ್​ಸ್ಪೆಕ್ಟರ್? ಇಲ್ಲಿದೆ ಪೂರ್ತಿ ಪಟ್ಟಿ..

ನೀರಿಗೆ ಬಿತ್ತು ಪ್ರಪೋಸ್ ಮಾಡಲೆಂದು ತಂದ ಉಂಗುರ; ಸಮುದ್ರಕ್ಕೇ ಧುಮುಕಿದ ಪ್ರಿಯಕರ: ಆಮೇಲೇನಾಯ್ತು!

ಶ್ರದ್ಧಾ ಪ್ರಕರಣದ ಆರೋಪಿ ಅಫ್ತಾಬ್​ನನ್ನು ಕರೆದೊಯ್ಯುತ್ತಿದ್ದ ಪೊಲೀಸ್​ ವ್ಯಾನ್​ ಅಡ್ಡಗಟ್ಟಿದ ಖಡ್ಗಧಾರಿಗಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × three =
Remember me
