ಬೆಂಗಳೂರು:ಊಟಕ್ಕೆಂದು 4 ಸ್ಟಾರ್ ಹೋಟೆಲ್​ಗೆ ತೆರಳಿದ್ದ ವಕೀಲೆಯೊಬ್ಬರು ತಮ್ಮ ಊಟದಲ್ಲಿ ಜಿರಳೆ ಇದ್ದದ್ದನ್ನು ಪತ್ತೆಹಚ್ಚಿದ್ದು, ಜಿರಳೆ ಇರುವ ಆಹಾರವನ್ನು ಬಡಿಸುತ್ತೀರಾ ಎಂದು ಹೋಟೆಲ್ ಸಿಬ್ಬಂದಿ ವಿರುದ್ಧ ಹರಿಹಾಯ್ದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಬಿಇಎಲ್‌ನಿಂದ ಅಪ್ರೆಂಟಿಸ್ ಹುದ್ದೆಗೆ ಕರೆ; ಜನವರಿ 10ರಂದು ನೇರ ಸಂದರ್ಶನಕ್ಕೆ ಆಹ್ವಾನ
ಹೋಟೆಲ್​ಗೆ ಭೇಟಿ ನೀಡಿದ್ದ ಗ್ರಾಹಕಿ ಶಿಲ್ಪಾ ದೀಪಕ್ ಎಂಬುವವರು ಪನ್ನೀರ್​ ಡಿಶ್​​ ಆರ್ಡರ್​ ಮಾಡಿದ್ದಾರೆ. ಈ ವೇಳೆ ಊಟದಲ್ಲಿ ಜಿರಳೆ ಪತ್ತೆಯಾಗಿದ್ದು, ಇದನ್ನು ಕಂಡ ಶಿಲ್ಪಾ ಹೋಟೆಲ್ ಸಿಬ್ಬಂದಿ ವಿರುದ್ಧ ತೀವ್ರ ಕೆಂಡಾಮಂಡಲಗೊಂಡಿದ್ದಾರೆ. ಕೂಡಲೇ ಸಿಬ್ಬಂದಿಯೊಡನೆ ಜಗಳ ಮಾಡಿದ ಅವರು, ಹೋಟೆಲ್​ನ ಅಡುಗೆ ಕೋಣೆಗೆ ತೆರಳಿ ಸ್ವಚ್ಛತೆ ಹೇಗಿದೆ ಎಂಬುದನ್ನು ವಿಡಿಯೋ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ:ನಟ ಗಣೇಶ್ ಅಭಿನಯಿಸುತ್ತಿರುವ 41ನೇ ಚಿತ್ರಕ್ಕೆ ಇವರೇ ನಾಯಕಿ!
ಅಡುಗೆಮನೆಗೆ ಏಕಾಏಕಿ ನುಗ್ಗಿದ ಮಹಿಳಾ ಗ್ರಾಹಕಿ ಅಲ್ಲಿನ ಶುಚಿತ್ವ ಹೇಗಿದೆ ಎಂಬುದನ್ನು ತಮ್ಮ ಮೊಬೈಲ್​ನಲ್ಲಿ ಚಿತ್ರೀಕರಿಸಲು ಪ್ರಾರಂಭಿಸಿದ್ದಾರೆ. ಆಕೆಯ ನಡೆಯನ್ನು ಖಂಡಿಸಿದ ಹೋಟೆಲ್ ಸಿಬ್ಬಂದಿ, ಮಹಿಳೆಯಿಂದ ಕ್ಯಾಮೆರಾ ಕಸಿಯಲು ಪ್ರಯತ್ನಿಸಿದ್ದು, ಆವರಣವನ್ನು ರೆಕಾರ್ಡ್ ಮಾಡದಂತೆ ಅಲ್ಲಿಂದ ಅವರನ್ನು ಎಳೆದೊಯ್ದಿದ್ದಾರೆ ಎಂದು ವರದಿಯಾಗಿದೆ. ಘಟನೆಯ ಕುರಿಂತೆ ಹತ್ತಿರದ ಪೊಲೀಸ್ ಠಾಣೆಗೆ ಹೋದ ಮಹಿಳೆ, ಹೋಟೆಲ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಎಫ್‌ಐಆರ್ ದಾಖಲು:ವರದಿಗಳ ಪ್ರಕಾರ, ಮಹಿಳೆ ನೀಡಿದ ದೂರಿನ ಅನ್ವಯ ಐಪಿಸಿ ಸೆಕ್ಷನ್ 352 (ಹಲ್ಲೆಗೆ ಶಿಕ್ಷೆ), 341 (ತಪ್ಪು ತಡೆಗೆ ಶಿಕ್ಷೆ), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗೆ ಮುಂದಾಗಿದ್ದಾರೆ,(ಏಜೆನ್ಸೀಸ್).
ನಟ ಗಣೇಶ್ ಅಭಿನಯಿಸುತ್ತಿರುವ 41ನೇ ಚಿತ್ರಕ್ಕೆ ಇವರೇ ನಾಯಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
