| ಮೂರ್ತಿ ಟಿ.ಸಿ.ಎಸ್​.ತಿಪಟೂರುಕಳೆದ ಏಪ್ರಿಲ್​-ಮೇನಲ್ಲಿ ಕ್ವಿಂಟಾಲ್​ಗೆ 16,700 ರೂ. ತಲುಪಿದ್ದ ಕೊಬ್ಬರಿ ಬೆಲೆ ಈಗ 12,250 ರೂಪಾಯಿಗೆ ಕುಸಿದಿದೆ.
ತಿಪಟೂರು ತಾಲೂಕಿನಲ್ಲಿ ಅಂದಾಜು 31,700 ಹೆಕ್ಟೇರ್​ ಪ್ರದೇಶದಲ್ಲಿ ಬೆಳೆಯಲಾಗುತ್ತಿರುವ ತೆಂಗು, ಇಲ್ಲಿನ ರೈತರ ಜೀವನಾಡಿ. ತಾಲೂಕಿನ ಪ್ರತಿಶತ ಶೇ.90ಕ್ಕಿಂತ ಹೆಚ್ಚು ರೈತರು ಜೀವನೋಪಾಯಕ್ಕಾಗಿ ಕೊಬ್ಬರಿಯನ್ನೇ ನಂಬಿದ್ದಾರೆ. ರೈತ, ತೆಂಗಿನ ಕಾಯಿ ಕಟಾವು ಮಾಡಿ ಕೊಬ್ಬರಿ ಮಾಡಲು ಕನಿಷ್ಠ 9 ರಿಂದ 12 ತಿಂಗಳು ಬೇಕು. ಈ ಅವಧಿಯಲ್ಲಿ ತೆಂಗಿನಕಾಯಿಯಲ್ಲಿರುವ ನೀರಿನ ಅಂಶ ಶೇ.6ಕ್ಕಿಂತ ಕಡಿಮೆಯಾಗಿ ಉಂಡೆ ಕೊಬ್ಬರಿಯಾಗಿ ಮಾರ್ಪಾಡಾಗುತ್ತದೆ.
ಎರಡ್ಮೂರು ವರ್ಷಗಳಲ್ಲಿ ಅತಿಯಾದ ಮಳೆ ಮತ್ತು ಹೆಚ್ಚು ತೇವಾಂಶದ ಕಾರಣ ಕೊಬ್ಬರಿ ಗುಣಮಟ್ಟ ಕಡಿಮೆಯಾಗುತ್ತಿದೆ. ವರ್ಷಗಳು ಕಳೆದರೂ ಕೊಬ್ಬರಿಯಲ್ಲಿರುವ ನೀರಿನ ಅಂಶ ಕಡಿಮೆ ಆಗದಿರುವುದು ಸಮಸ್ಯೆಗೆ ಕಾರಣವಾಗಿದೆ. ಶೇ.40ಕ್ಕಿಂತ ಹೆಚ್ಚಿನ ಪ್ರಮಾಣದ ಕೊಬ್ಬರಿಯಲ್ಲಿ ಶೇ.7ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತೇವಾಂಶ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಖರೀದಿದಾರರು ಟೆಂಡರ್​ಗಳಲ್ಲಿ ಭಾಗವಹಿಸುತ್ತಿಲ್ಲ ಎನ್ನಲಾಗುತ್ತಿದೆ.
ರವಾನೆದಾರರ ಖರೀದಿ ಆಸಕ್ತಿ ಕಡಿಮೆಯಾಗಲು ಕಾರಣ: ತಿಪಟೂರು ತಾಲೂಕು ಸೇರಿದಂತೆ ಸುತ್ತಮುತ್ತಲ ತಾಲೂಕುಗಳಿಂದಲೂ ಎಪಿಎಂಸಿ ಮಾರುಕಟ್ಟೆಗೆ ಬರುವ ಕೊಬ್ಬರಿ, ಮಹಾರಾಷ್ಟ್ರ, ಗುಜರಾತ್​, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್​, ಹರಿಯಾಣ, ಬಿಹಾರ, ಜಾರ್ಖಂಡ್​ ಇನ್ನಿತರ ರಾಜ್ಯಗಳಿಗೆ ರವಾನೆಯಾಗುತ್ತಿದೆ. ಈ ಅವಧಿಯಲ್ಲಿ ಹೆಚ್ಚು (ಶೇ.7ಕ್ಕಿಂತ ಅಧಿಕ) ತೇವಾಂಶವಿರುವ ಕೊಬ್ಬರಿಯನ್ನು ರವಾನೆ ಮಾಡಿದರೆ ಮಾರ್ಗಮಧ್ಯೆ ಹಾಳಾಗುವ ಸಂಭವ ಇರುವ ಕಾರಣ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.
ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ಪರ ಈಗಾಗಲೇ ರೈತ ಮುಖಂಡರು, ವಿರೋಧ ಪಕ್ಷದವರು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದು, ಕನಿಷ್ಠ ಬೆಂಬಲಬೆಲೆಯನ್ನು 15 ಸಾವಿರಕ್ಕೆ ನಿಗದಿ ಪಡಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಸಚಿವ ಬಿ.ಸಿ.ನಾಗೇಶ್​, ನ.21ರಂದು ಮುಖ್ಯಮಂತ್ರಿ ಮತ್ತು ಸಹಕಾರ ಸಚಿವ ಎಸ್​.ಟಿ.ಸೋಮಶೇಖರ್​ ಬಳಿ, ಅತಿವೃಷ್ಟಿಯಿಂದ ಕೊಬ್ಬರಿ ಹಾಳಾಗಿ ಬೇಡಿಕೆ, ಖರೀದಿ ದರ ಕಡಿಮೆ ಆಗಿದೆ. ಕಂಗಾಲಾಗಿರುವ ರೈತರಿಗೆ ನೆರವಾಗಲು ಕನಿಷ್ಠ ಬೆಂಬಲ ಬೆಲೆಯನ್ನು 15 ಸಾವಿರಕ್ಕೆ ನಿಗದಿಪಡಿಸಲು ಕೇಂದ್ರವನ್ನು ಒತ್ತಾಯಿಸುವಂತೆ ಮನವಿ ಸಲ್ಲಿಸಿದ್ದಾರೆ.
ಮಾಜಿ ಶಾಸಕ ಕೆ.ಷಡಕ್ಷರಿ ಅವಧಿಯಲ್ಲಿ ಕೊಬ್ಬರಿ ಬೆಲೆ ಕುಸಿತ ಕಂಡಾಗ, ಕೇಂದ್ರ ನಿಗದಿ ಪಡಿಸಿದ್ದ ದರದ ಜತೆಗೆ ರಾಜ್ಯ ಸರ್ಕಾರದಿಂದ ಕ್ವಿಂಟಾಲಿಗೆ 2 ಸಾವಿರ ರೂಪಾಯಿ ಪ್ರೋತ್ಸಾಹಧನ ನಿಗದಿಪಡಿಸುವಲ್ಲಿ ಯಶಸ್ವಿಯಾಗಿದ್ದರು. ಅದೇ ರೀತಿ ಹಾಲಿ ಇರುವ 11 ಸಾವಿರದ ಜತೆಗೆ ರಾಜ್ಯ ಸರ್ಕಾರ 2 ಸಾವಿರ ಸೇರಿಸಿ ಕೊಡುವ ಮೂಲಕ ರೈತರಿಗೆ ನೆರವಾಗಲಿ.|ಎನ್​.ಎಂ.ಸುರೇಶ್​ತಾಪಂ ಮಾಜಿ ಅಧ್ಯಕ್ಷ
ಕಳೆದ ನಾಲ್ಕು ವರ್ಷಗಳಿಂದ ಕುಸಿಯುತ್ತಿರುವ ಕೊಬ್ಬರಿ ಬೆಲೆಗೆ ಕಾರಣ ಹುಡುಕಿ ಸಮೀಕ್ಷೆ ಮಾಡುವುದು ಆರ್ಥಿಕ ಇಲಾಖೆಯ ಜವಾಬ್ದಾರಿ. ಅವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು.| ಎಂ.ನಾಗೇಶ್​ರೈತ, ಬಿಳಿಗೆರೆ ಪಾಳ್ಯ
ಹೊನ್ನಾಳಿಯಲ್ಲಿ ಭೀಕರ ಅಪಘಾತ, ASI ಪುತ್ರ ಸಾವು: ರೇಣುಕಾಚಾರ್ಯರ ಸಹೋದರನ‌ ಪುತ್ರನ ಪ್ರಕರಣ ನೆನಪಿಸುತ್ತಿದೆ ಈ ದುರ್ಘಟನೆ

ತಡರಾತ್ರಿ ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ 5 ಕೆಜಿ ಚಿನ್ನಾಭರಣ ದರೋಡೆ: ಸಿನಿಮೀಯ ರೀತಿಯಲ್ಲಿ ನುಗ್ಗಿದ ದರೋಡೆಕೋರರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − five =
Remember me
