ಮಂಡ್ಯ:ಕೋಪಕ್ಕೆ ಬುದ್ಧಿ ಕೊಟ್ಟರೆ ಏನಾಗಲಿದೆ ಎಂಬುದಕ್ಕೆ ಈ ದುರಂತವೇ ಸಾಕ್ಷಿ. ಕ್ಷುಲ್ಲಕ ಕಾರಣಕ್ಕೆ ಕುಪಿತಗೊಂಡ ಮಹಿಳೆಯೊಬ್ಬಳು ಗಂಡನ ಸಾವಿಗೆ ಕಾರಣವಾಗಿದ್ದು, ಅತ್ತೆ-ಮಾವರನ್ನೂ ಸಾವಿನ ಕೂಪಕ್ಕೆ ದೂಡಿದ್ದಾಳೆ.
ಕೆ.ಆರ್.ಪೇಟೆ ತಾಲೂಕಿನ ಹೆಮ್ಮಡಹಳ್ಳಿ ಗ್ರಾಮದ ನಿವಾಸಿ ನಾಗಮಣಿ, ಮನೆಯಲ್ಲಿ ತನ್ನ ಮಾತು ಕೇಳದ ಕಾರಣಕ್ಕೆ ಗಂಡ ನಾಗರಾಜು(43), ಅತ್ತೆ ಕುಳಮ್ಮ(60), ಮಾವ ವೆಂಕಟೇಗೌಡ(70)ರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಳು. ತೆಂಗಿನಕಾಯಿ ತುರಿಯುವ ಮಣೆಯಿಂದ ನಾಗಮಣಿ ಮೂವರ ಮೇಲೂ ಮನಸೋಇಚ್ಛೆ ಹಲ್ಲೆ ನಡೆಸಿದ್ದಳು.
ಪತ್ನಿಯಿಂದ ತೀವ್ರ ಹಲ್ಲೆಗೊಳಲಾಗಿದ್ದ ನಾಗರಾಜುನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದಿದ್ದಾನೆ. ಇನ್ನು ನಾಗರಾಜುವಿನ ತಂದೆ-ತಾಯಿ ಇಬ್ಬರೂ ಗಂಭೀರ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಆರೋಪಿ ನಾಗಮಣಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
VIDE0| ದೆವ್ವ ಬಿಡಿಸಲು ಜೀವಂತ ಕೋಳಿಯನ್ನೇ ನುಂಗುವಂತೆ ಹಿಂಸಿಸಿದ ಮಂತ್ರವಾದಿ! ಬೆಚ್ಚಿ ಬೀಳಿಸುತ್ತೆ ಈ ದೃಶ್ಯ

ಪ್ರೇಮ ವಿವಾಹವಾಗಿದ್ದ ಮಗಳು 5 ವರ್ಷದ ಹಿಂದೆಯೇ ನಾಪತ್ತೆ! ಗಂಡನ ಮನೆಯಲ್ಲಿದೆ ನಿಗೂಢ ರಹಸ್ಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − one =
Remember me
