ಬೆಂಗಳೂರು:ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆಯಿಂದಾಗಿ ಆಡಳಿತಕ್ಕೆ ಲಕ್ವ ಹೊಡೆದಂತಿತ್ತು. ಬಹುತೇಕ ಅಧಿಕಾರಿಗಳು ಚುನಾವಣೆ ಕಾರ್ಯದಲ್ಲಿ ಭಾಗಿಯಾಗಿದ್ದರಿಂದ ಅಭಿವೃದ್ಧಿ ಕಡೆಗೆ ಗಮನಹರಿಸಲಾಗಿದೆ. ಚುನಾವಣೆ ಮುಗಿದಿದೆ, ನೀತಿ ಸಂಹಿತೆ ಸಡಿಲವಾಗಿದೆ. ಆಡಳಿತಕ್ಕೆ ಚುರುಕು ನೀಡಿರಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು, ಉನ್ನತಾಧಿಕಾರಿಗಳ ಸಮಕ್ಷಮ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿಇಒಗಳೊಂದಿಗೆ ಗುರುವಾರ ವಿಡಿಯೋ ಸಂವಾದ ನಡೆಸಿ, ವಸ್ತುಸ್ಥಿತಿ ಮಾಹಿತಿ ಪಡೆದ ಅವರು, ಎಲ್ಲ ಹಂತದ ಅಧಿಕಾರಿಗಳ ಜತೆಗೆ ಸಮನ್ವಯ ಸಾಧಿಸಿ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ, ಕಾರ್ಯಾದೇಶ ತ್ವರಿತವಾಗಿ ನೀಡಬೇಕು ಎಂದರು.
ಈ ಬಾರಿ ಬಜೆಟ್‌ನಲ್ಲಿ 500ಕ್ಕೂ ಹೆಚ್ಚು ೋಷಣೆಗಳಿವೆ. ನೀತಿ ಸಂಹಿತೆಯಲ್ಲಿ ಎರಡು ತಿಂಗಳು ಕಳೆದುಹೋಗಿವೆ. ಒಂದು ವರ್ಷದ ಕಾರ್ಯಕ್ರಮ 10 ತಿಂಗಳಲ್ಲಿ ಅನುಷ್ಠಾನಕ್ಕೆ ತರಬೇಕಾದ ಅನಿವಾರ್ಯತೆಯನ್ನು ಅಧಿಕಾರಿಗಳು ತಿಳಿದು, ಕಾರ್ಯತತ್ಪರವಾಗಬೇಕು ಎಂದು ಹೇಳಿದರು.
ಉತ್ತಮ ಮಳೆಯಿಂದಾಗಿ ಮುಂಗಾರು ಪೂರ್ವ, ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಸನ್ನದ್ಧರಾಗಿದ್ದಾರೆ. ಬ್ಯಾಂಕ್‌ಗಳಿಂದ ಸಕಾಲದಲ್ಲಿ ಹೊಸದಾಗಿ ಬೆಳೆ ಸಾಲ ರೈತರಿಗೆ ಸಿಗುತ್ತಿರುವುದು ಖಾತರಿಪಡಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ಅಭಿವೃದ್ಧಿ ಆಯುಕ್ತರು ರಾಜ್ಯ ಬ್ಯಾಂಕರ್ಸ್ ಸಮಿತಿ, ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಬ್ಯಾಂಕರ್ಸ್ ಸಮಿತಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ಬಿತ್ತನೆ ಚಟುವಟಿಕೆಗಳಿಗೆ ಉತ್ಸುಕ ರೈತರು ಬೆಳೆ ಸಾಲಕ್ಕೆ ಅಲೆದಾಡದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಬರ ಪರಿಹಾರ ಮೊತ್ತವನ್ನು ರೈತರ ಸಾಲಕ್ಕೆ ವಜಾ ಮಾಡಿಕೊಳ್ಳದಂತೆ ಬ್ಯಾಂಕರುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಇದು ಪಾಲನೆಯಾಗಿದ್ದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ತಾಂತ್ರಿಕ ಸಮಸ್ಯೆಗಳು ಆದಷ್ಟು ಬೇಗ ಕೊನೆಗೊಂಡು ಉಳಿದ ರೈತರಿಗೂ ಬರ ಪರಿಹಾರ ಒದಗಿಸಲು ಕ್ರಮವಹಿಸಬೇಕು. ಬೆಳೆ ವಿಮಾ ಕಂಪನಿಗಳೊಂದಿಗೆ ಚರ್ಚಿಸಿ ಬೆಳೆ ವಿಮೆ ಕ್ಲೇಮ್ ಸಂದೇಹಗಳನ್ನು ನಿವಾರಣೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ವಾಡಿಕೆಗಿಂತ ಹೆಚ್ಚು ಮಳೆ ಮುನ್ಸೂಚನೆಯಿರುವ ಕಾರಣ ರಕ್ಷಣೆ, ಪರಿಹಾರೋಪಾಯ ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿನಿಂದಲೇ ಕೈಗೆತ್ತಿಕೊಳ್ಳಬೇಕು. ಹಿಂದಿನ ಪ್ರವಾಹ ಬಾಧಿತ ಪ್ರದೇಶ, ನಿರ್ವಹಣೆ ಅನುಭವದ ಆಧಾರದಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಮೈಸೂರು ತಾಲೂಕಿನ ಎರಡು ಕಡೆ ಕಲುಷಿತ ಕುಡಿಯುವ ನೀರು ಸೇವನೆಯಿಂದ ಕಾಲರಾ ಉಂಟಾಗಿದೆ. ಒಬ್ಬರು ಸತ್ತು, 40ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಎಚ್.ಸಿ.ಮಹದೇವಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಇನ್ನು ಮುಂದೆ ಕಲುಷಿತ ನೀರು ಸೇವನೆಯಿಂದ ಇಂತಹ ಸಮಸ್ಯೆಗಳು ಮರುಕಳಿಸಿದರೆ ಆಯಾ ಜಿಲ್ಲಾಧಿಕಾರಿಯೇ ಹೊಣೆ ಹೊರಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು.
ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳುವುದು ಮೊದಲ ಕ್ರಮವಾದರೆ, ನಿತ್ಯವೂ ಕುಡಿಯುವ ನೀರಿನ ಪರೀಕ್ಷೆ ನಡೆಸಿ ಶುದ್ಧ ಕುಡಿಯುವ ಪೂರೈಕೆ ಖಾತರಿಪಡಿಸಿಕೊಳ್ಳುವುದು ಎರಡನೇ ಕ್ರಮವಾಗಿದೆ.
ಆಯಾ ಡಿಸಿಗಳ ಖಾತೆಯಲ್ಲಿ ಲಭ್ಯವಿರುವ ಹಣವನ್ನು ಕುಡಿಯುವ ನೀರು ಪೂರೈಕೆಗೆ ಅಗತ್ಯಕ್ಕೆ ತಕ್ಕಂತೆ ಬಳಕೆಗೆ ಯಾವುದೇ ಅಡ್ಡಿಯಿಲ್ಲವೆಂದು ಸಿಎಂ ಸಿದ್ದರಾಮಯ್ಯ ಆತ್ಮವಿಶ್ವಾಸ ತುಂಬಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − three =
Remember me
