ಕೇಶವಮೂರ್ತಿ ವಿ.ಬಿ. ಹಾವೇರಿಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಂಧಿತರಾದ ಕೆಲ ಆರೋಪಿಗಳು ಸೀಕ್ರೆಟ್ ಕೋಡ್​ವರ್ಡ್​ಗಳನ್ನು ಬಳಸಿ ನೈತಿಕ ಪೊಲೀಸ್​ಗಿರಿಗೆ ಇಳಿದಿದ್ದರು. ಜನನಿಬಿಡ ಪ್ರದೇಶಗಳಲ್ಲಿ ತಮ್ಮವರನ್ನು ಬಿಟ್ಟು ಬಹುದೊಡ್ಡ ನೆಟ್ವರ್ಕ್ ಸೃಷ್ಟಿಸಿಕೊಂಡಿದ್ದರು. ಯುವಕ- ಯುವತಿಯರ ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್​ವೆುೕಲ್ ಮಾಡುತ್ತಿದ್ದರು ಎಂಬ ಭಯಾನಕ ಅಂಶ ಬೆಳಕಿಗೆ ಬಂದಿದೆ.
ಗ್ಯಾಂಗ್​ರೇಪ್ ಕೇಸ್​ನಲ್ಲಿ ಬಂಧಿತ ತಂಡಕ್ಕೆ ‘ಝುಡ್’ ಎಂದು ಹೆಸರಿದ್ದರೆ, ಉಳಿದವಕ್ಕೆ ಈಗಲ್, ಎಕ್ಸ್, ವೈ, ಝುಡ್.. ಎಂಬಿತ್ಯಾದಿ ಹೆಸರಿತ್ತು. ಉಳಿದಂತೆ ಹಾವೇರಿ, ಬ್ಯಾಡಗಿ, ಮತ್ತಿತರ ಪ್ರದೇಶಗಳಲ್ಲೂ ಕಾರ್ಯಾಚರಿಸುತ್ತಿತ್ತು. ತಮ್ಮದೇ ಸಮುದಾಯದ ಯುವತಿಯರ ರಕ್ಷಣೆ ಹೆಸರಲ್ಲಿ ನೆಟ್​ವರ್ಕ್ ಸೃಷ್ಟಿಸಿಕೊಂಡು ತಮ್ಮವರಿಗೇ ವಂಚಿಸುತ್ತಿದ್ದರು. ಯುವತಿ ಬೇರೆಯವರೊಂದಿಗೆ ಮಾತನಾಡಿದರೆ, ಬೈಕ್​ನಲ್ಲಿ ಕಂಡರೆ ಕ್ಷಣಾರ್ಧದಲ್ಲಿ ಈ ತಂಡಗಳು ಹಾಜರಾಗುತ್ತಿದ್ದವು. ಅವರ ಮೇಲೆ ಹಲ್ಲೆ ನಡೆಸುತ್ತಿದ್ದವು. ಖಾಕಿಪಡೆ ಇದಕ್ಕೆ ಕಡಿವಾಣ ಹಾಕಿದ್ದರೆ ಜ.8ರಂದು ಗ್ಯಾಂಗ್​ರೇಪ್ ನಡೆಯುತ್ತಿರಲಿಲ್ಲ ಎಂಬದು ಸ್ಥಳೀಯರ ಅನಿಸಿಕೆ.
ಗ್ಯಾಂಗ್​ರೇಪ್ ನಡೆದ ಬಳಿಕ ಜ.4ರಂದು ನಡೆದಿದ್ದ ಮತ್ತೊಂದು ಪ್ರಕರಣ ಹೊರಬಂತು. ನಂತರ ಬ್ಯಾಡಗಿಯಲ್ಲಿ ಜ.19ರಂದು ಮತ್ತೊಂದು ಕೇಸ್ ವರದಿಯಾಯಿತು. ಮೇಲಿಂದ ಮೇಲೆ ನೈತಿಕ ಪೊಲೀಸ್​ಗಿರಿ ನಡೆದರೂ ಖಾಕಿಪಡೆ ಇದಕ್ಕೆ ಅಂಕುಶ ಹಾಕುವಲ್ಲಿ ಎಡವುತ್ತಿದೆ. ಇದೇ ಕಾರಣಕ್ಕೆ ಈ ದುಷ್ಟರು ಉಪಟಳ ಮಿತಿಮೀರಿತ್ತು. ವಿಡಿಯೋ ಮಾಡಿಟ್ಟುಕೊಳ್ಳುವುದರಿಂದ ಮಾನ, ಮರ್ಯಾದೆಗೆ ಅಂಜುವ ಯುವಕ- ಯುವತಿಯರು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ, ದೂರು ಕೊಡುವುದಿಲ್ಲ ಎಂಬ ಭಂಡಧೈರ್ಯ ಈ ದುಷ್ಟರು ಮತ್ತಷ್ಟು ಅನಾಚಾರ ನಡೆಸುವುದಕ್ಕೆ ಕುಮ್ಮಕ್ಕು ನೀಡಿತ್ತು ಎಂದು ನಾಗರಿಕರು ಆರೋಪಿಸುತ್ತಾರೆ.
ಸುಲಿಗೆಗೂ ಸೈ: ನೈತಿಕ ಪೊಲೀಸ್​ಗಿರಿ, ಗ್ಯಾಂಗ್ ರೇಪ್ ಬೆಳಕಿಗೆ ಬಂದ ನಂತರ ಇದೀಗ ಅತ್ಯಾಚಾರಿಗಳ ಮತ್ತೊಂದು ಮುಖವಾಡ ಕಳಚಿದೆ. ಗ್ಯಾಂಗ್​ರೇಪ್​ಗೂ ಮುನ್ನ ವ್ಯಕ್ತಿಯ ಬಳಿ ಇದ್ದ ಚಿನ್ನದ ಸರ, ಮೊಬೈಲ್ ಹಾಗೂ 15,000 ನಗದು ಸುಲಿಗೆ ಮಾಡಿದ್ದಾರೆ. ಜ.4ರಂದು ನಡೆದ ಘಟನೆಯಲ್ಲೂ ಯುವಕನಿಂದ ಮೊಬೈಲ್ ಕಿತ್ತುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗ್ಯಾಂಗ್ ರೇಪ್ ಆರೋಪಿತರ ಮೊಬೈಲ್​ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅವರು ತಂಡಗಳನ್ನು ರಚಿಸಿಕೊಂಡು, ಕೋಡ್ ವರ್ಡ್​ಗಳ ಮೂಲಕ ಸಂವಹನ ನಡೆಸುತ್ತಿದ್ದರೇ ಎಂಬುದು ಮೊಬೈಲ್​ನಲ್ಲಿನ ಡೇಟಾ ಪರಿಷ್ಕರಣೆ ಬಳಿಕ ಬಳಿಕ ಗೊತ್ತಾಗಲಿದೆ.
| ಸಿ. ಗೋಪಾಲ ಎಎಸ್​ಪಿ ಹಾಗೂ ತನಿಖಾಧಿಕಾರಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 5 =
Remember me
