ಬೆಂಗಳೂರು:ರಾಜ್ಯಾದ್ಯಂತ ಚಳಿ ತೀವ್ರಗೊಂಡಿದ್ದು, ಸಾರ್ವಜನಿಕರು ಬಿಸಿಬಿಸಿ ಕಾಫಿ-ಟೀ, ತಿಂಡಿ ಸವಿಯೋಣ ಎಂದು ಹೋಟೆಲ್​ಗೆ ಹೋಗಬೇಕೆಂದರೂ ಎಲ್ಲಿಗೆ ಹೋಗಬೇಕು ಎಂದು ಯೋಚಿಸಿ ಹೋಗಬೇಕಾಗಬಹುದು. ಏಕೆಂದರೆ ಹೋಟೆಲ್​ಗಳಲ್ಲಿ ದರ ಹೆಚ್ಚಳವಾಗಲಿದ್ದು, ಈಗಾಗಲೇ ಕೆಲವೆಡೆ ದರ ಪರಿಷ್ಕರಣೆಯೂ ನಡೆದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕೆಲವು ಹೋಟೆಲ್​ಗಳವರು ದರ ಪರಿಷ್ಕರಿಸಲು ಚಿಂತನೆ ನಡೆಸಿದ್ದರೆ, ಇನ್ನು ಕೆಲವು ಹೋಟೆಲ್​ಗಳಲ್ಲಿ ದರ ಪರಿಷ್ಕರಣೆ ಮಾಡಲಾಗಿದ್ದು, ಪರಿಷ್ಕೃತ ದರವನ್ನು ಶೀಘ್ರದಲ್ಲೇ ಜಾರಿಗೊಳಿಸುವ ಕುರಿತಂತೆ ಹೋಟೆಲ್​ಗಳಲ್ಲಿ ಸೂಚನೆಗಳನ್ನೂ ಅಳವಡಿಸಲಾಗಿದೆ.
ಬೆಣ್ಣೆ, ತುಪ್ಪ, ಕಾಫಿ ಪುಡಿ ಇತ್ಯಾದಿಯ ಬೆಲೆ ಈಗಾಗಲೇ ಹೆಚ್ಚಳಗೊಂಡಿದ್ದು, ಸದ್ಯ ಹಾಲಿನ ದರವೂ ಏರುವ ಸೂಚನೆ ಇದೆ. ಇಂದು ಆ ಕುರಿತ ನಿರ್ಧಾರವೂ ಪ್ರಕಟವಾಗುವ ಸಾಧ್ಯತೆ ಇದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಹೋಟೆಲ್​ ಮಾಲೀಕರು ದರ ಹೆಚ್ಚಳಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಹೋಟೆಲೊಂದರಲ್ಲಿ ಈಗಾಗಲೇ ಕಾಫಿ ಮತ್ತು ದೋಸೆ ದರದಲ್ಲಿ ಏರಿಕೆ ಮಾಡಲಾಗಿದ್ದು, ಹೊಸ ದರ ನ. 24ರಂದು ಜಾರಿಗೆ ಬರುವ ಕುರಿತು ಸೂಚನೆಯನ್ನೂ ಪ್ರಕಟಿಸಲಾಗಿದೆ. ಉಳಿದಂತೆ ಇತರ ಹೋಟೆಲ್​ಗಳಲ್ಲೂ ಕಾಫಿ-ಟೀ ಜತೆಗೆ ಆಯ್ದ ಕೆಲವು ತಿಂಡಿ-ತಿನಿಸುಗಳ ಬೆಲೆ ಹೆಚ್ಚಳ ಆಗುವ ಸಾಧ್ಯತೆಗಳಿವೆ.
ಶಾಸಕರಿಗೇ ಹೊಡೆದು ಬಟ್ಟೆ ಹರಿದು ಹಾಕಿದ ಜನರು; ಕತ್ತಲಲ್ಲಿ ಹರಿದ ಅಂಗಿಯಲ್ಲೇ ಪರಿಸ್ಥಿತಿ ವಿವರಿಸಿದ ಕುಮಾರಸ್ವಾಮಿ..

ಸಿದ್ದರಾಮಯ್ಯ ಅರ್ಜಿ, ಹೈಕಮಾಂಡ್ ಮರ್ಜಿ: ಮುಂದಿನ ಚುನಾವಣೆಯಲ್ಲಿ ಸಿದ್ದು ಸ್ಪರ್ಧೆ ಎಲ್ಲಿಂದ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
