ಬೆಂಗಳೂರು:ರಾಜ್ಯದ ಸ್ವಾಸ್ಥ್ಯ ಕಾಪಾಡುವ ವಿಚಾರದಲ್ಲಿ ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ನಡುವೆ ನಡೆದ ತಿಕ್ಕಾಟದ ಬಳಿಕ ಈಗ ಸಂಪುಟದಲ್ಲಿರುವ ಇಬ್ಬರು ‘ಡಾಕ್ಟರ್ ಸಚಿವರ’ ನಡುವೆ ಶೀತಲ ಸಮರ ಆರಂಭವಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮತ್ತು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ನಡುವೆ ಪ್ರತಿಷ್ಠೆಯ ಕಾಳಗ ನಡೆದಿದೆ.
ಕರೊನಾ ಬಾಧೆ ರಾಜ್ಯದಲ್ಲಿ ಕಾಣಿಸಿಕೊಂಡಾಗಿನಿಂದಲೂ ಡಾ.ಸುಧಾಕರ್ ಕ್ರಿಯಾಶೀಲರಾಗಿ ತೊಡಗಿಕೊಂಡಿದ್ದು ಗುಟ್ಟಿನ ವಿಚಾರವೇನಲ್ಲ. ಆರೋಗ್ಯ ಸಚಿವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಚುಟುವಟಿಕೆ ನಡೆಸಿದರು. ಇದು ಆರೋಗ್ಯ ಸಚಿವರಿಗೂ ಇರಿಸುಮುರಿಸು ಉಂಟಾಯಿತು. ಜತೆಗೆ ಇವರಿಬ್ಬರೂ ಮಾಧ್ಯಮಗಳಿಗೆ ಪ್ರತ್ಯೇಕವಾಗಿ ಹೇಳಿಕೆ ನೀಡುವಾಗ ಪೈಪೋಟಿ ಏರ್ಪಟ್ಟಂತೆ ಕಾಣಿಸಿತು. ಸಿಎಂ ಮಧ್ಯಪ್ರವೇಶದ ಬಳಿಕ ಶ್ರೀರಾಮುಲು, ನಾವಿಬ್ಬರೂ ಅಣ್ಣ-ತಮ್ಮಂದಿರಂತೆ ಎಂದು ವಿಷಯಕ್ಕೆ ತೇಪೆ ಹಚ್ಚಲು ಮುಂದಾದರು.
ಇಷ್ಟರ ನಡುವೆ, ಕೋವಿಡ್-19 ನಿರ್ವಹಣೆ ಜವಾಬ್ದಾರಿ ಪೂರ್ಣ ಪ್ರಮಾಣದಲ್ಲಿ ಡಾ.ಸುಧಾಕರ್ ಹೆಗಲೇರಿತು. ಈ ಮೂಲಕ ಕರೊನಾ ನೆಪದಲ್ಲಿ ಆರೋಗ್ಯ ಇಲಾಖೆಯನ್ನೂ ನಿರ್ವಹಿಸುವ ಪರೋಕ್ಷ ಅವಕಾಶವೂ ಒದಗಿಬಂತು. ಶ್ರೀರಾಮುಲು ಆರೋಗ್ಯ ಸಚಿವರಾಗಿ ಜಿಲ್ಲೆ ಪ್ರವಾಸದ ಹೊಣೆಹೊತ್ತು ರಾಜ್ಯ ಸುತ್ತಲಾರಂಭಿಸಿದರು.
ಇದೀಗ ಡಾ.ಅಶ್ವತ್ಥನಾರಾಯಣ ಸರದಿ. ಡಿಸಿಎಂ ಆಗಿ ವೈದ್ಯರಾದರೂ ಕರೊನಾ ನಿರ್ವಹಣೆ ಬಗ್ಗೆ ಸರ್ಕಾರದಲ್ಲಿ ತಮ್ಮನ್ನು ಪರಿಗಣಿಸಿಲ್ಲ ಎಂಬ ಅಸಮಾಧಾನ ಮೊಳಕೆಯೊಡೆದಿದೆ. ಇನ್ನು ಲಾಕ್​ಡೌನ್ ಸಂಬಂಧ ಪಾಸ್ ವಿಚಾರದಲ್ಲೂ ಬೆಂಗಳೂರು ಪೊಲೀಸ್ ಆಯುಕ್ತರ ಕುರಿತು ಸಿಎಂ ಸಮ್ಮುಖದಲ್ಲೇ ತುಂಬಿದ ಸಭೆಯಲ್ಲಿ ಆಡಿದ ಮಾತುಗಳು ಸರ್ಕಾರದ ಮಟ್ಟದಲ್ಲಿ, ಅಧಿಕಾರಿಗಳ ಹಂತದಲ್ಲಿ ಸಾಕಷ್ಟು ಚರ್ಚೆಯಾಗಿ ಡಿಸಿಎಂ ಬಗ್ಗೆಯೇ ಆಕ್ಷೇಪ ವ್ಯಕ್ತವಾಗಿತ್ತು.
ಡಾ.ಸುಧಾಕರ್​ಗೆ ಸರ್ಕಾರದಲ್ಲಿ ಹೆಚ್ಚೆಚ್ಚು ಪ್ರಾತಿನಿಧ್ಯ ಸಿಗುತ್ತಿರುವುದು ಮತ್ತು ಪ್ರತಿಯೊಂದನ್ನೂ ಸುಧಾಕರ್ ಅವರೇ ನಿರ್ಧರಿಸಿರುವುದು ಡಾ.ಅಶ್ವತ್ಥನಾರಾಯಣ ನೆಮ್ಮದಿ ಕೆಡಿಸಿದೆ. ಇನ್ನೂ ಮುಖ್ಯವಾಗಿ ವೈದ್ಯರಾಗಿ ಡಿಸಿಎಂ ಆಗಿದ್ದರೂ ತಮ್ಮನ್ನು ಯಾವುದಕ್ಕೂ ಪರಿಗಣಿಸುತ್ತಿಲ್ಲ, ಸಲಹೆ ಕೇಳುತ್ತಿಲ್ಲ ಎಂಬುದು ತಿಕ್ಕಾಟಕ್ಕೆ ಮೂಲ ಕಾರಣ ಎನ್ನಲಾಗಿದೆ. ಈ ನಡುವೆ ಕರೊನಾ ನಿರ್ವಹಣೆಯಲ್ಲಿನ ಕೆಲವು ಲೋಪಗಳನ್ನು ಎತ್ತಿ ತೋರಿಸುವ ಮಾಹಿತಿಗಳು ಹರಿದಾಡುತ್ತಿದ್ದು, ಇದಕ್ಕೆ ಸರ್ಕಾರದೊಳಗೆ ಕುದಿಯುತ್ತಿರುವ ಅಸಮಾಧಾನ ಕಾರಣ ಎಂದೂ ಹೇಳಲಾಗುತ್ತಿದೆ.
ಕರೊನಾ ವಿಚಾರದಲ್ಲಿ ಸುಳ್ಳಿನ ಮಹಾಗೋಡೆ ಕಟ್ಟಿತೇ ಚೀನಾ? ಎಚ್ಚರಿಸಿದ ವೈದ್ಯನನ್ನೇ ಶಿಕ್ಷಿಸಿ ಸಾವಿಗೆ ಕಾರಣರಾದರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
