ಬೆಂಗಳೂರು:ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಭಾನುವಾರ ‘ಮೈಚಾಂಗ್’ ಚಂಡಮಾರುತ ರೂಪುಗೊಂಡಿದ್ದು, ರಾಜ್ಯದಲ್ಲಿ ಮೂರು ದಿನ ಜಿಟಿಜಿಟಿ ಮಳೆ ಬೀಳುವ ಸಾಧ್ಯತೆ ಇದೆ.
ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಬಳ್ಳಾಪುರ, ಶಿವಮೊಗ್ಗದಲ್ಲಿ ಮುಂದಿನ ಎರಡು ದಿನ, ಉಡುಪಿ, ದ.ಕನ್ನಡ, ಉ.ಕನ್ನಡದಲ್ಲಿ ಡಿ.4ರಂದು ಸಾಧಾರಣ ಮಳೆ ಸುರಿಯಲಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಡಿ.5, 6ರಂದು ಹಗುರ ಮಳೆ ಬೀಳಲಿದೆ. ಬೆಂಗಳೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಭಾನುವಾರ ಮೋಡ ಕವಿದ ವಾತಾವರಣ ಜತೆಗೆ ಥಂಡಿ ಸೃಷ್ಟಿಯಾಗಿತ್ತು. ಹಲವು ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಸರಾಸರಿ 2-3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕುಸಿತವಾಗಿತ್ತು.
ಮಂಗಳವಾರ(ಡಿ.5) ಮುಂಜಾನೆ ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಭಾಗದ ನೆಲ್ಲೂರು, ಮಚಲಿಪಟ್ಟಣಂ ನಡುವೆ ಮಾರುತಗಳು ಹಾದುಹೋಗಲಿವೆ. 100 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಸಮುದ್ರ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕೆಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ ) ಮಾಹಿತಿ ನೀಡಿದೆ.
ಇದನ್ನೂ ಓದಿ:ತೆಲಂಗಾಣದಲ್ಲಿ ಫಲಿಸಲಿಲ್ಲ ಪವನ್ ಕಲ್ಯಾಣ್ ಪ್ರಯತ್ನ: ಠೇವಣಿ ಕಳೆದುಕೊಂಡ ಜನಸೇನಾ ಅಭ್ಯರ್ಥಿಗಳು
ಪುದುಚೇರಿಯ ಪೂರ್ವ ಆಗ್ನೇಯದಿಂದ 290 ಕಿ.ಮೀ, ಚೆನ್ನೈನಿಂದ 290 ಕಿ.ಮೀ.ನೆಲ್ಲೂರಿನಿಂದ 420 ಕಿ.ಮೀ ಹಾಗೂ ಚಾಪಟ್ಲಾದಿಂದ 530 ಕಿ.ಮೀ.ದೂರದಲ್ಲಿ ಚಂಡಮಾರುತವಿದೆ. ಡಿ.4ರಂದು ಮಾರುತಗಳು ದಕ್ಷಿಣ ಆಂಧ ಹಾಗೂ ಉತ್ತರ ತಮಿಳುನಾಡಿನ ಕಡೆಯತ್ತ ಸಾಗಲಿವೆ. ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ತೆಲಂಗಾಣ, ಒಡಿಶಾದಲ್ಲಿ ಮುಂದಿನ ಮೂರ‌್ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 13 =
Remember me
