ಬಾಗಲಕೋಟೆ:ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದ ಕಾಲೇಜು ವಿದ್ಯಾರ್ಥಿಯೊಬ್ಬ ರಸ್ತೆಯಲ್ಲಿ ನಿಂತು ದಂಡ ವಿಧಿಸುತ್ತಿದ್ದ ಪಿಎಸ್​ಐ ಅಧಿಕಾರಿ ಕಣ್ಣಿಗೆ ಸಿಕ್ಕಿಬಿದ್ದಿದ್ದು, ಫೈನ್ ಪಾವತಿಸಲು ತನ್ನ ಬಳಿ ಹಣವಿಲ್ಲ ಎಂದು ಕಣ್ಣೀರಿಟ್ಟಿದ್ದಾನೆ. ಕಡೆಗೆ ಕಾಲೇಜು ಶುಲ್ಕ ಕಟ್ಟಲು ಇಟ್ಟುಕೊಂಡಿದ್ದ ಹಣವನ್ನೇ ದಂಡವನ್ನಾಗಿ ಕೊಟ್ಟ ಮನಕಲಕುವ ಘಟನೆ ಬಾಗಲಕೋಟೆಯ ಇಳಕಲ್​ನಲ್ಲಿ ವರದಿಯಾಗಿದೆ.
ಇದನ್ನೂ ಓದಿ:ವರುಣನ ಕೃಪೆಯಿಂದ ಕಾವೇರಿಗೆ ಮತ್ತೆ ಜೀವಕಳೆ: ಸಂಪೂರ್ಣ ಭರ್ತಿಯಾದ ಕೆಆರ್​ಎಸ್​ ಡ್ಯಾಂ
ರಸ್ತೆ ಸಂಚಾರ ನಿಯಮ ಪಾಲಿಸದ ಬೈಕ್‌ ಸವಾರನಿಗೆ ಮಹಿಳಾ ಪೊಲೀಸ್ ಅಧಿಕಾರಿ ದಂಡ ವಿಧಿಸಿದ್ದರು. ಡ್ರೈವಿಂಗ್ ಲೈಸನ್ಸ್​ ಇಲ್ಲದೇ ತ್ರಿಬಲ್‌ ರೈಡ್‌ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿಗೆ ಇಳಕಲ್ ನಗರ ಠಾಣಾ‌ ಮಹಿಳಾ ಪಿಎಸ್ಐ ಎಸ್.ಆರ್.‌ ನಾಯಕ್‌ ಎಂಬುವವರು ಬಾಲಕನಿಗೆ ದಂಡ ಕಟ್ಟುವಂತೆ ಒತ್ತಾಯಿಸಿದ್ದರು. ಆದ್ರೆ, ಕಣ್ಣೀರಿಟ್ಟ ಬಾಲಕ, ನನ್ನ ಬಳಿ ಹಣವಿಲ್ಲ ಆದರೆ, ಕಾಲೇಜು ಶುಲ್ಕ ಕಟ್ಟಲೆಂದು ಇಟ್ಟುಕೊಂಡಿರುವ ದುಡ್ಡಿದೆ ಅಷ್ಟೇ, ಅದನ್ನೇ ತಗೆದುಕೊಳ್ಳಿ ಎಂದು ಬಿಕ್ಕಿ ಬಿಕ್ಕಿ ಅಳುತ್ತ ಕೊಟ್ಟಿದ್ದಾನೆ.
ಬಾಲಕನ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಮಹಿಳಾ ಪಿಎಸ್​ಐ ಒಂದು ನಿಮಿಷ ಮೌನಕ್ಕೆ ಜಾರಿದ್ದು, ಆತನ ಸ್ಥಿತಿಗೆ ಕರಗಿದ್ದಾರೆ. ಬಾಲಕನನ್ನು ಅಪ್ಪಿಕೊಂಡು ಸಾಂತ್ವನ ತಿಳಿಸಿ, ತಮ್ಮ ಬಳಿಯಿದ್ದ ದಂಡದ ಹಣವನ್ನು ವಾಪಸ್​ ಕೊಟ್ಟು, ಧೈರ್ಯ ತುಂಬಿದ್ದಾರೆ. ಪೋಷಕರು ಮಕ್ಕಳಿಗೆ ಬೈಕ್‌, ಸ್ಕೂಟರ್​ ಕೊಡುವ ಮುನ್ನ ಹತ್ತು ಬಾರಿ ಎಚ್ಚರ ವಹಿಸಿ ಎಂದು ಮಹಿಳಾ ಪಿಎಸ್​ಐ ಹೇಳಿದ್ದಾರೆ. ಘಟನೆಯ ದೃಶ್ಯಗಳು ಸದ್ಯ ಜಾಲತಾಣದಲ್ಲಿ ವೈರಲ್ ಆಗಿವೆ.
ಚೆನ್ನಾಗಿಯೇ ಕಾಪಿ ಹೊಡೆದಿದ್ದೀರಾ… ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆಗೆ ಪಿ. ಚಿದಂಬರಂ ಟಾಂಗ್

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:17 − eleven =
Remember me
