ಬೆಂಗಳೂರು:ರಾಜ್ಯ ಗೃಹ ಇಲಾಖೆ ಅಸಹಕಾರದಿಂದ ನೊಂದ ಪೊಲೀಸರು ತಮ್ಮ ವೇತನದಲ್ಲಿಯೇ ಹುತಾತ್ಮ ಪೊಲೀಸರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ 55 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಇದರಿಂದ ಪೊಲೀಸ್ ಇಲಾಖೆಗೆ ಪೂರ್ವ ವಿಭಾಗದ ಅಧಿಕಾರಿ, ಸಿಬ್ಬಂದಿ ಮಾದರಿಯಾಗಿದ್ದಾರೆ.
2022ರ ಜೂ.7ರಂದು ಡ್ರಗ್ಸ್ ಪೆಡ್ಲರ್​ಗಳ ಕಾರ್ಯಾಚರಣೆ ವೇಳೆ ಆಂಧ್ರಪ್ರದೇಶದ ಚಿತ್ತೂರು ಬಳಿ ರಸ್ತೆ ಅಪಘಾತ ಸಂಭವಿಸಿ ಶಿವಾಜಿನಗರ ಠಾಣೆ ಎಸ್​ಐ ಅವಿನಾಶ್ ಮತ್ತು ಕಾನ್​ಸ್ಟೆಬಲ್ ಅನಿಲ್ ಮುಲಿಕ್ ಮೃತಪಟ್ಟಿದ್ದರು. ಇದೇ ವೇಳೆ ಪ್ರೊಬೇಷನರಿ ಎಸ್​ಐ ಎಲ್.ದೀಕ್ಷಿತ್ ಮತ್ತು ಕಾನ್​ಸ್ಟೆಬಲ್ ಶರಣ ಬಸವ ಗಾಯಗೊಂಡಿದ್ದರು.
ಮೃತ ಅವಿನಾಶ್ ಮತ್ತು ಅನಿಲ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಕೊಡುವುದಾಗಿ ಸಿಎಂ ಬಸವರಾಜ ಬೊಮ್ಮಯಿ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಭರವಸೆ ನೀಡಿದ್ದರು. ಆದರೆ, ಗೃಹ ಇಲಾಖೆ ಪರಿಹಾರ ಮತ್ತು ಅನುಕಂಪದ ನೌಕರಿ ಕೊಡುವಲ್ಲಿ ಮೀನಮೇಷ ಎಣಿಸುತ್ತಿದೆ.
ಇದನ್ನೂ ಓದಿ:ಸಾವಿನ ಅಂಚಿನಲ್ಲಿದ್ದ ಯುವಕನ ರಕ್ಷಣೆ: ಕಾನ್​ಸ್ಟೆಬಲ್ ಸಮಯಪ್ರಜ್ಞೆಗೆ ಸಲ್ಯೂಟ್​ ಹೊಡೆಯಲೇಬೇಕು
ಈ ಕುರಿತು ‘ವಿಜಯವಾಣಿ’ಯಲ್ಲಿ ವರದಿ ಪ್ರಕಟವಾದ ಮೇಲೆ ಈಚೆಗೆ ಪೊಲೀಸರ ವಿಮಾ ಪಾಲಿಸಿಯಲ್ಲಿ ಬರಬೇಕಾದ 20 ಲಕ್ಷ ರೂ.ಗಳನ್ನು ಮೃತರ ಕುಟುಂಬಕ್ಕೆ ಕೊಡಿಸಿದ್ದಾರೆ. ಜತೆಗೆ ಕುಟುಂಬ ಸದಸ್ಯರನ್ನು ಕರೆದು ಮುಷ್ಕರ, ಪ್ರತಿಭಟನೆ, ಕೋಮು ಗಲಭೆ, ಕರ್ಫ್ಯೂ, ಬಾಂಬ್ ಸ್ಫೋಟ ಮತ್ತು ಅಪರಾಧ ಪ್ರಕರಣ ತಡೆಗಟ್ಟುವ ಸಮಯದಲ್ಲಿ ಹುತಾತ್ಮರಾದವರಿಗೆ ನೀಡುವ ‘ಅನುಗ್ರಹ ಪೂರ್ವಕ ಪರಿಹಾರ 30 ಲಕ್ಷ ರೂ.’ ಸಹ ಕೊಡುವುದಾಗಿ ಭರವಸೆ ನೀಡಿದ್ದರು. ಅನುಕಂಪದ ನೌಕರಿಗೆ ದಾಖಲೆ ಪತ್ರಗಳನ್ನು ಸಂಗ್ರಹಿಸಿದರು. ಆದರೆ, ತಿಂಗಳೇ ಕಳೆದರೂ ಅನುಗ್ರಹಪೂರ್ವಕ ಪರಿಹಾರ ಸುತ್ತೋಲೆಗೆ ತಿದ್ದುಪಡಿ ತಂದಿಲ್ಲ. ಇದರಿಂದಾಗಿ ಹಿರಿಯ ಅಧಿಕಾರಿಗಳ ವಿರುದ್ಧವೂ ಕೆಳಹಂತದ ಪೊಲೀಸರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಪೂರ್ವ ವಿಭಾಗದ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಮ್ಮ ವೇತನದಲ್ಲೇ ಹುತಾತ್ಮರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ಪರಿಹಾರ ನೀಡಲು ಪಣತೊಟ್ಟರು. 55 ಲಕ್ಷ ರೂ. ಸಂಗ್ರಹಿಸಿ ಮೃತರಾದ ಪಿಎಸ್​ಐ ಅವಿನಾಶ್, ಕಾನ್​ಸ್ಟೆಬಲ್ ಅನಿಲ್, ಗಾಯಾಳು ಪಿಎಸ್​ಐ ದೀಕ್ಷಿತ್ ಮತ್ತು ಕಾನ್​ಸ್ಟೆಬಲ್ ಶರಣ ಬಸವ ಅವರಿಗೆ ಪರಿಹಾರ ನೀಡಿ ಮಾನವೀಯತೆ ಮೆರೆಯುವ ಜತೆಗೆ ಗೃಹ ಇಲಾಖೆಗೆ ಸಡ್ಡು ಹೊಡೆದರು.
2010ರಿಂದ ಪರಿಹಾರ ಸಿಕ್ಕಿಲ್ಲ:ಕಾನೂನು ಸುವ್ಯವಸ್ಥೆ ಕಾಪಾಡುವ ಅಂದರೆ ಮುಷ್ಕರ, ಪ್ರತಿಭಟನೆ, ಮೆರವಣಿಗೆ, ಗುಂಪು ಗಲಾಟೆ, ದೊಂಬಿ, ಕಲ್ಲು ತೂರಾಟ, ಕೋಮು ಗಲಭೆ, ಕರ್ಫ್ಯೂ, ನಿಷೇದಾಜ್ಞೆ, ಪ್ರಕೃತಿ ವಿಕೋಪ, ಬಾಂಬ್ ಪತ್ತೆ, ನಿಷ್ಕ್ರಿಯ, ನಕ್ಸಲ್, ಉಗ್ರ ವಿರುದ್ಧ ಕಾರ್ಯಾಚರಣೆ, ಬೆಂಕಿ ಅನಾಹುತ ಎಂದು ಉಲ್ಲೇಖಿಸಲಾಗಿದೆ. ಅಪರಾಧ ತಡೆಗಟ್ಟುವ ಕರ್ತವ್ಯ ಅಂದರೆ ಕಳ್ಳತನ, ಕೊಲೆ, ಅಪಹರಣ, ದರೋಡೆ ತಡೆಗಟ್ಟುವ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಆರೋಪಿಗಳ ಘರ್ಷಣೆಯಲ್ಲಿ ಗಾಯ ಮತ್ತು ಮರಣ ಹೊಂದಿ ದರೆ ಅನುಗ್ರಹಪೂರ್ವ ಪರಿಹಾರ ಸಿಗಲಿದೆ ಎಂದು 2018ರ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ತಿದ್ದುಪಡಿ ತಂದು ಪರಿಹಾರ ಕೊಡುವುದಾಗಿ ಗೃಹ ಸಚಿವಾಲಯ ಭರವಸೆ ನೀಡಿದೆ. ಇಲ್ಲಿಯವರೆಗೂ ಮಾಡಿಲ್ಲ. 2010ರಿಂದ ಹುತಾತ್ಮ ರಾದವರಿಗೆ ಪರಿಹಾರ ಕೊಡದೆ ತಿರಸ್ಕಾರ ಮಾಡಲಾಗಿದೆ.
ಇದನ್ನೂ ಓದಿ:ನಂಗೇನು ನಾಚಿಕೆ ಇಲ್ಲ! ಮೋದಿ ಕುರಿತ ಹಳೇ ಟ್ವೀಟ್ ವೈರಲ್​, ಸಮರ್ಥನೆ ನೀಡಿದ ಖುಷ್ಬೂ ಸುಂದರ್
55 ಲಕ್ಷ ರೂಪಾಯಿ ಸಂಗ್ರಹಪೂರ್ವ ವಿಭಾಗದ ಕಾನ್​ಸ್ಟೆಬಲ್, ಹೆಡ್​ಕಾನ್​ಸ್ಟೆಬಲ್​ಗಳು 4 ದಿನದ, ಎಎಸ್​ಐ ಮತ್ತು ಪಿಎಸ್​ಐಗಳು 15 ದಿನದ ವೇತನ ಮತ್ತು ಪಿಐ, ಎಸಿಪಿ, ಡಿಸಿಪಿ 1 ತಿಂಗಳ ವೇತನವನ್ನು ಪರಿಹಾರಕ್ಕೆ ನೀಡಿದ್ದಾರೆ. ಒಟ್ಟಾರೆ 55 ಲಕ್ಷ ರೂ. ಸಂಗ್ರಹವಾಗಿತ್ತು. ಮೃತ ಅವಿನಾಶ್ ಕುಟುಂಬಕ್ಕೆ 15 ಲಕ್ಷ ರೂ., ಅನಿಲ್ ಮುಲಿಕ್ ಕುಟುಂಬಕ್ಕೆ -ಠಿ;25 ಲಕ್ಷ ನೀಡಲಾಗಿದೆ. ಗಾಯಗೊಂಡಿದ್ದ ಪಿಎಸ್​ಐ ದೀಕ್ಷಿತ್​ಗೆ 5 ಲಕ್ಷ ರೂ. ಮತ್ತು ಕಾನ್​ಸ್ಟೆಬಲ್​ಗೆ ಶರಣ ಬಸವಗೆ 10 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ತಿಳಿದುಬಂದಿದೆ.
ವಿದ್ಯಾರ್ಹತೆಗೆ ತಕ್ಕಂತೆ ನೌಕರಿ ಕೊಡಿಅನುಕಂಪದ ನೌಕರಿ ಪಡೆಯಲು ಕನಿಷ್ಠ ವಿದ್ಯಾರ್ಹತೆ ಎಸ್​ಎಸ್​ಎಲ್​ಸಿ ಮಾಡಲಾಗಿದೆ. ಆದರೆ, ಕಾನ್​ಸ್ಟೆಬಲ್ ಅನಿಲ್ ಮುಲಿಕ್ ಕುಟುಂಬದಲ್ಲಿ ಎಸ್​ಎಸ್​ಎಲ್​ಸಿ ಪಾಸ್ ಮಾಡಿದವರು ಯಾರು ಇಲ್ಲ. ಅನಿಲ್ ಸಹೋದರ 8ನೇ ತರಗತಿ ಓದಿದ್ದು, ಸಿ ಗ್ರೂಪ್ ನೌಕರಿ ಆದರೂ ಕೊಡಬೇಕೆಂದು ಪೊಲೀಸ್ ವಲಯದಿಂದ ಒತ್ತಾಯ ಕೇಳಿಬಂದಿದೆ.
ಅಪಘಾತದಲ್ಲಿ ಎಸ್​ಐ, ಪೇದೆ ಸಾವು ಪ್ರಕರಣ: ಹುತಾತ್ಮ ಖಾಕಿ ಕುಟುಂಬಕ್ಕಿಲ್ಲ ಬಿಡಿಗಾಸು, ಫಲ ಕೊಡದ ಸಿಎಂ ಭರವಸೆ

ತುಂಬಿದ ಮಾಲ್​ನಲ್ಲಿ ಯುವಕನಿಂದ ಅಶ್ಲೀಲ ವರ್ತನೆ: ಕೊನೆಗೂ ಸತ್ಯಾಂಶ ತಿಳಿಸಿದ ನಟಿ ಸಾನಿಯಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 14 =
Remember me
