
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಲೆಕ್ಷನ್ ಮಾಸ್ಟರ್ ಎಂದು ಟೀಕಿಸಿರುವ ಬಿಜೆಪಿ ಇದೊಂದು ಎಟಿಎಂ ಸರ್ಕಾರ ಎಂದು ಪೋಸ್ಟರ್ ವಾರ್ ನಡೆಸಿದೆ.ಕೆಲ ಗುತ್ತಿಗೆದಾರರ ಮನೆ ಮೇಲೆ ಐಟಿ ದಾಳಿ ನಡೆದಾಗ ಸಿಕ್ಕಿರುವ ನಗದು ಹಣ ಸಿಕ್ಕಿರುವ ಹಿನ್ನೆಲೆಯಲ್ಲಿ ಇದೊಂದು ಎಟಿಎಂ ಸರ್ಕಾರ ಎಂದು ಜರಿದಿದೆ.ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಸೂಟ್ಕೇಸ್ ಹಿಡಿದುಕೊಂಡಿರುವ ಚಿತ್ರ ಹಾಗೂ ಅದರ ಕೆಳಗೆ ಕಲೆಕ್ಷನ್ ಮಾಸ್ಟರ್ ಎಂದು ಬರೆದಿರುವ ಪೋಸ್ಟರ್‌ನ್ನು ಹಾಕಲಾಗಿದೆ.ಬಿಜೆಪಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಸಮಗ್ರ ಭ್ರಷ್ಟಾಚಾರಕ್ಕಾಗಿ ವಿಧಾನಸೌಧವನ್ನು ಭ್ರಷ್ಟಾಚಾರದ ಹೆಡ್ ಆಫೀಸ್ ಮಾಡಿಕೊಂಡು ಪಂಚರಾಜ್ಯ ಚುನಾವಣೆಗೆ ಭರಪೂರ ಂಡಿಂಗ್ ಮಾಡುವ ಹೊಣೆ ಹೊತ್ತಿರುವ ಕರ್ನಾಟಕ ಮಾಸ್ಟರ್ಸ್ ಇವರೇ ಎಂದು ಸಿಎಂ ಸಿದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೆಗಲ ಮೇಲೆ ಕೈ ಹಾಕಿಕೊಂಡಿರುವ ಮೈತುಂಬ 500 ನೋಟ್ ಇರುವ ಪೋಸ್ಟರ್ ಹಾಕಿ ಕಾಲೆಳೆದಿದೆ. ಪ್ರತಿ ಇಲಾಖೆವಾರು ಎಷ್ಟೆಷ್ಟು ಸಂಗ್ರಹಕ್ಕೆ ಟಾರ್ಗೆಟ್ ನೀಡಲಾಗಿದೆ ಎಂದು ಪಟ್ಟಿಯನ್ನು ಹಾಕಲಾಗಿದೆ.ಮತ್ತೊಂದು ಪೋಸ್ಟ್‌ನಲ್ಲಿ ಪಂಚರಾಜ್ಯ ಚುನಾವಣೆಗಳಿಗೆ ಕಾಂಗ್ರೆಸ್ ಹೈಕಮಾಂಡ್ 1 ಸಾವಿರ ಕೋಟಿ ಕಲೆಕ್ಷನ್ ಟಾರ್ಗೆಟ್ ನೀಡಿದೆ ಎಂದು ತಿಳಿಸಿದೆ. ಮೊದಲ ಹಂತದ ಸಾವಿರ ಕೋಟಿ ರೂ ಟಾರ್ಗೆಟ್‌ನಲ್ಲಿ ತೆಲಂಗಾಣ ಕಾಂಗ್ರೆಸ್‌ಗೆ 300 ಕೋಟಿ ರೂ, ಮಿಜೋರಾಂ ಕಾಂಗ್ರೆಸ್‌ಗೆ 100 ಕೋಟಿ ರೂ, ಛತ್ತೀಸ್‌ಘಡ, ರಾಜಸ್ಥಾನ, ಮಧ್ಯಪ್ರದೇಶ ಕಾಂಗ್ರೆಸ್‌ಗೆ ತಲಾ 200 ಕೋಟಿ ಎಂದು ಟೀಕಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
