ದೇವನಹಳ್ಳಿ:ಮಕ್ಕಳು ಉನ್ನತ ವ್ಯಾಸಂಗ ಮಾಡಿ ಒಂದು ಒಳ್ಳೆ ಕೆಲಸಕ್ಕೆ ಸೇರಲಿ ಎಂದೆಲ್ಲಾ ಕನಸು ಎಲ್ಲಾ ತಂದೆ ತಾಯಿಂದಿರೂ ಕಟ್ಟಿಕೊಂಡಿರುತ್ತಾರೆ. ಆದರೆ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಬರುವ ಕೆಲ ವಿದ್ಯಾರ್ಥಿಗಳು ಓದೋದು ಬಿಟ್ಟು ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ಗುಂಡಾಗಿರಿ ನಡೆಸುತ್ತಿದ್ದಾರೆ. ಇಲ್ಲೊಂದು ಕಾಲೇಜಿನಲ್ಲಿ ಕ್ಷುಲಕ ಕಾರಣಕ್ಕೆ ವಿದ್ಯಾರ್ಥಿಗಳು ನಡು ರಸ್ತೆಯಲ್ಲಿ ದುಂಡಾವರ್ತನೆ ತೋರಿದಿದ್ದಾರೆ.
ವಿದ್ಯಾರ್ಥಿಗಳು ಗುಂಡಾಗಿರಿ ನಡೆಸಿರುವ ಘಟನೆ ಯಲಹಂಕ ತಾಲೂಕಿನ ರಾಜನುಕುಂಟೆ ಬಳಿಯ ದಿಬ್ಬೂರಿನ ಪ್ರತಿಷ್ಠಿತ ಪ್ರಸಿಡೆನ್ಸಿ ಕಾಲೇಜು ಬಳಿ ನಡೆದಿದೆ. ಕೆಲ ವಿದ್ಯಾರ್ಥಿಗಳು ರೌಡಿಗಳಂತೆ ದೊಣ್ಣೆ ಹಿಡಿದು ಗುಂಡಾಗಿರಿ ನಡೆಸುತ್ತಿರೋದನ್ನು ಕೆಲ ವಿದ್ಯಾರ್ಥಿನಿಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಂದಹಾಗೆ ಪ್ರೆಸೆಡೆನ್ಸಿ ಕಾಲೇಜಿಗೆ ದೇಶದ ನಾನಾ ರಾಜ್ಯಗಳಿಂದ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಬಂದಿದ್ದಾರೆ. ಆದ್ರೆ ಈ ಕಾಲೇಜಿನಲ್ಲಿ ಕೆಲ ರೌಡಿಗಳಂತೆ ವರ್ತಿಸೋ ವಿದ್ಯಾರ್ಥಿಗಳು ನಡು ರಸ್ತೆಯಲ್ಲಿ ಕೈನಲ್ಲಿ ವಿಕೆಟ್ ಮತ್ತು ದೊಣ್ಣೆಗಳಿಡಿದು‌ ಓಡಾಡುವ ದೃಶ್ಯ ಕಾಣ ಸಿಕ್ಕಿದೆ. ಪ್ರತಿನಿತ್ಯ ಕಾಲೇಜು ಬಳಿ ಪುಂಡ‌ ಯುವಕರ ಗ್ಯಾಂಗ್ ಈ ರೀತಿ ದೊಣ್ಣೆ ಹಿಡಿದುಕೊಂಡು ದಾಂದಲೆ ನಡೆಸುತ್ತಿದ್ದಾರೆ. ಇದನ್ನು ಕೆಲ ವಿದ್ಯಾರ್ಥಿಗಳು ನೆನ್ನೆ ಸಂಜೆ ಮೊಬೈಲ್​ನಲ್ಲಿ ಶೂಟ್​ ಮಾಡಿ ವೈರಲ್ ಮಾಡಿದ್ದಾರೆ.
ಕಾಲೇಜಿನ ಕೆಲ ಯುವಕರ ದಾಂಧಲೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಈ ಹಿಂದೆಯೂ ಇದೇ ಕಾಲೇಜಿನ ಯುವಕರು ಬೈಕ್​ಗಳನ್ನು ರಸ್ತೆಯಲ್ಲಿ ಅತಿವೇಗದಿಂದ ಓಡಿಸಿಕೊಂಡು ಸೌಂಡ್ ಮಾಡಿಕೊಂಡು ಕಿಟಲೇ ಮಾಡಿದ್ದರು. ಆಗ ಗ್ರಾಮಸ್ಥರಿಂದ ಪ್ರತಿಭಟನೆ ನಡೆದಿತ್ತು. ಗ್ರಾಮದ ಜನ ಕೆಲ ಕಾಲೇಜು ಪುಂಡರ ಉಪಟಳಕ್ಕೆ ರೋಸಿಹೋಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದು ಮಾಸುವ ಮುನ್ನವೇ ಇದೀಗ ಮತ್ತೊಮ್ಮೆ ಕೈಯಲ್ಲಿ ದೊಣ್ಣೆ, ಬ್ಯಾಟ್ ಹಿಡಿದು ಮಾಡಿದ ದುಂಡಾವರ್ತನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕಾಲೇಜು ಬಳಿ ಪ್ರತಿನಿತ್ಯ ಗಲಾಟೆಗಳಾದ್ರು ಪೊಲೀಸರು ಎಚ್ಚೆತ್ತುಕೊಳ್ಳಲ್ಲ ಎಂದು ಸ್ಥಳಿಯರು ಆಕ್ರೋಶ ಹೋರಹಾಕಿದ್ದಾರೆ. ಅದರಲ್ಲೂ ಡ್ರಗ್ಸ್ ಸೇವಿಸಿ ಕೆಲ ಯುವಕರು ಈ ರೀತಿ ಗುಂಡಾಗಿರಿಗೆ ಇಳಿದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಒಟ್ಟಾರೇ ಕಾಲೇಜಿನ ಕೆಲ ಯುವಕರು ಗುಂಡಾಗಿರಿ ನಡೆಸಿದ್ದು, ಪ್ರೆಸಿಡೆನ್ಸಿ ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ. ಈ ಸಂಬಂಧ ರಾಜನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಇಂತಹ ಪುಂಡ ಯುವಕರಿಗೆ ತಕ್ಕಪಾಠ ಕಲಿಸಬೇಕಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − ten =
Remember me
