ಬಳ್ಳಾರಿ:ಪರೀಕ್ಷೆ ಬರೆಯುತ್ತಿದ್ದ ಯುವತಿಗೆ ತನ್ನ ಅಣ್ಣ ಬಂದಿರುವುದಾಗಿ ತಿಳಿಸಿ, ಕೊಠಡಿಯಿಂದ ಹೊರ ಬರುವವರೆಗೂ ಕಾದು ಕುಳಿತ್ತಿದ್ದ ಕಾಮುಕರು ಆಕೆಯನ್ನು ಕಿಡ್ನಾಪ್​ ಮಾಡಿ ಲೈಂಗಿಕ ಕಿರುಕುಳ ನೀಡಿದ ಘಟನೆ ಬಳ್ಳಾರಿಯಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಪ್ರೀತಿ ಮಂದುವರಿಸದೆ ಬ್ರೇಕ್​ ಅಪ್​ ಎಂದಿದಕ್ಕೆ ಕ್ಯಾಬ್​​ನಲ್ಲಿ ಕುಳ್ಳಿರಿಸಿ ಚಾಕುವಿನಿಂದ 13 ಬಾರಿ ಇರಿದ ಯುವಕ..!
ಸಿನಿಮಯ ರೀತಿಯಲ್ಲಿ ಯುವತಿಯನ್ನು ಕಿಡ್ನಾಪ್​ ಮಾಡಿದ ಆರೋಪಿಗಳು ಆಕೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಸದ್ಯ ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಲು ಸಂಚು ರೂಪಿಸಿದ ನಾಲ್ವರು, ಆಕೆ ಪರೀಕ್ಷೆ ಬರೆಯುವ ಸಮಯಕ್ಕೆ ಕಾಲೇಜಿನ ಬಳಿ ತೆರಳಿ ಅವರ ಅಣ್ಣ ಆಕೆಯನ್ನು ನೋಡಲು ಬಂದಿದ್ದಾರೆ ಕೂಡಲೇ ಕರೆಸಿ ಎಂದು ಹೇಳಿದ್ದಾರೆ.
ಪರೀಕ್ಷೆ ಬರೆಯುತ್ತಿದ್ದ ಯುವತಿ ಅರ್ಧಕ್ಕೆ ಬಿಟ್ಟು ಹೊರಗೆ ಬಂದ ಕೂಡಲೇ ಆಕೆಯನ್ನು ಆಟೋದಲ್ಲಿ ಕಿಡ್ನಾಪ್ ಮಾಡಿದ ಆರೋಪಿಗಳು, ಯುವತಿಗೆ ಮದ್ಯಪಾನ ಮಾಡಿಸಿ, ಲೈಂಗಿಕ ಕಿರುಕುಳ ನೀಡಿದ್ದು, ಕೊಪ್ಪಳ ಜಿಲ್ಲೆಯ ಸಣಾಪುರ ಬಳಿಯ ಹೋಟೆಲ್​ನಲ್ಲಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:KS Eshwarappa PressMeet: ಕಾಂಗ್ರೆಸ್​ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಕೆ.ಎಸ್​. ಈಶ್ವರಪ್ಪ
ಘಟನೆಯ ಬೆನ್ನಲ್ಲೇ ಬಳ್ಳಾರಿ ಮಹಿಳಾ ಠಾಣೆಯಲ್ಲಿ ನಾಲ್ವರ ವಿರುದ್ಧ ಸಂತ್ರಸ್ತ ಯುವತಿ ದೂರು ನೀಡಿದ್ದಾಳೆ. ತನಿಖೆ ನಡೆಸಿದ ಪೊಲೀಸರು ಬಳ್ಳಾರಿ ನಗರದ ಕೌಲ್ ಬಜಾರ್​ನ ನವೀನ್, ಸಾಕೀಬ್, ತನ್ನು ಸೇರಿದಂತೆ ನಾಲ್ವರ ವಿರುದ್ಧ ರೇಪ್ ಕೇಸ್ ದಾಖಲಿಸಿಕೊಂಡಿದ್ದಾರೆ. ಆರೋಪಿ ಯುವತಿಯ ಸ್ನೇಹಿತ ಎಂದು ಹೇಳಲಾಗಿದೆ.
‘ಇಂಡಿಯನ್ ನ್ಯಾಷನಲ್ ಕಮಿಷನ್ ಹಸಿವು ಯಾವ ಮಟ್ಟಿಗಿದೆ ಎಂದರೆ….’: ತೇಜಸ್ವಿ ಸೂರ್ಯ ಆರೋಪ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 6 =
Remember me
