ಬೆಂಗಳೂರು:ಈಶಾನ್ಯ ರಾಜ್ಯದಿಂದ ನಗರದಲ್ಲಿ ವ್ಯಾಸಂಗಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಅದೇ ರಾಜ್ಯದ ಯುವಕನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬ್ಯಾಡರಹಳ್ಳಿ ಸಮೀಪದ ಕಾಲೇಜ್‌ನ 20 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಅನಿಸುಲ್ ರೆಹಮಾನ್ (21) ಬಂಧಿತ. 2ನೇ ವರ್ಷದ ಪ್ಯಾರಾಮೆಡಿಕಲ್ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಅನಿಸುಲ್, ಬುಧವಾರ ಬೆಳಗ್ಗೆ ವಿದ್ಯಾರ್ಥಿನಿಗೆ ಕರೆ ಮಾಡಿದ್ದ. ‘ನಿನ್ನ ಬಳಿ ಮಾತನಾಡುವುದಿದೆ. ಬ್ಯಾಡರಹಳ್ಳಿ ಸಮೀಪವಿರುವ ನನ್ನ ರೂಂ ಬಳಿ ಬಾ’ ಎಂದು ಹೇಳಿದ್ದ. ಪರಿಚಿತ ಎಂಬ ಕಾರಣಕ್ಕೆ ಯುವತಿ ತಾನು ತಂಗಿದ್ದ ಹಾಸ್ಟೆಲ್‌ನಿಂದ ಆಟೋ ಮಾಡಿಕೊಂಡು ಅನಿಸುಲ್ ರೂಂಗೆ ಬಂದಿದ್ದಳು. ಆಗ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಖತರ್​ನಾಕ್​ ಲೇಡಿಯಿಂದ ವಂಚನೆ; 34 ವಾಹನ ಜಪ್ತಿ, ಹತ್ತಕ್ಕೂ ಹೆಚ್ಚು ಪ್ರಕರಣ ದಾಖಲು…
ಆಟೋದಲ್ಲಿ ಸಾಗಿಸಿದ: ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿದ್ದರಿಂದ ಆತಂಕಗೊಂಡ ಆರೋಪಿ, ಕೆಲ ಹೊತ್ತಿನ ಬಳಿಕ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದವರ ಬಳಿ ಬಂದು, ನನ್ನ ಸ್ನೇಹಿತೆಯೊಬ್ಬಳು ಉಸಿರಾಡುತ್ತಿಲ್ಲ. ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದ. ಬಳಿಕ ಇಬ್ಬರು ಸ್ನೇಹಿತರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದ. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ೋಷಿಸಿದ್ದರು. ಅನಿಸುಲ್ ರೂಂನ ನೆರೆಹೊರೆಯವರು ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದರು.
ಪರಿಚಯವಾಗಿದ್ದು ಹೇಗೆ?: ಮೃತ ಯುವತಿಯ ಸಹೋದರ ಈ ಹಿಂದೆ ಬೆಂಗಳೂರಿನ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಆತನ ಮೂಲಕ ಅನಿಸುಲ್‌ನ ಪರಿಚಯವಾಗಿತ್ತು. ಒಂದೇ ರಾಜ್ಯದವರಾದ್ದರಿಂದ ಯುವತಿಯ ಕುಟುಂಬಸ್ಥರಿಗೂ ಆರೋಪಿ ಪರಿಚಿತನಾಗಿದ್ದ. ಪ್ಯಾರಾಮೆಡಿಕಲ್ ಕೋರ್ಸ್‌ಗೆ ಹೆಚ್ಚಿನ ಬೇಡಿಕೆಯಿದ್ದು, ತಾನು ಓದುತ್ತಿರುವ ಕಾಲೇಜಿಗೆ ಸೇರಿಸಲು ಸಹಾಯ ಮಾಡುವುದಾಗಿ ತಿಳಿಸಿದ್ದ. ಅದರಂತೆ ಪ್ರವೇಶಾತಿ ಪಡೆಯಲು ಸಹಾಯ ಮಾಡಿದ್ದ. ಹಾಸ್ಟೆಲ್‌ನಲ್ಲಿ ತಂಗಲು ವ್ಯವಸ್ಥೆಯೂ ಆಗಿತ್ತು. ಮಂಗಳವಾರ ಊರಿನಿಂದ ವಿದ್ಯಾರ್ಥಿನಿ ರೈಲಿನಲ್ಲಿ ಬೆಂಗಳೂರಿಗೆ ಬಂದು, ಕಾಲೇಜಿನ ಹಾಸ್ಟೆಲ್‌ನಲ್ಲೇ ತಂಗಿದ್ದಳು. ಪ್ರವೇಶಾತಿಗೆ ಅಂತಿಮ ಹಂತದ ಕೆಲ ಪ್ರಕ್ರಿಯೆ ಬಾಕಿಯಿದ್ದವು. ಬುಧವಾರ ಬೆಳಗ್ಗೆ ವಿದ್ಯಾರ್ಥಿನಿ ಪಾಲಕರಿಗೆ ಕರೆ ಮಾಡಿದ್ದ ಅನಿಸುಲ್, ‘ಕಾಲೇಜಿಗೆ ಪೂರ್ಣ ಶುಲ್ಕ ಪಾವತಿಸಬೇಕು’ ಎಂದು ನೆನಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೇಸ್​ ಸಾಲ್ವ್​ ಮಾಡೋಕೆ ಸಹಾಯ ಮಾಡಿದರೆ ನಿಮಗೆ ಸಿಗುತ್ತೆ 2.7 ಕೋಟಿ ರೂಪಾಯಿ!

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ! ಹಣದಾಸೆಗೆ ಗಂಡನಿಂದಲೇ ಕೊಲೆ?!

ಬೈಕ್​ನಲ್ಲಿ ಕುಳಿತು ನಿದ್ರೆಗೆ ಜಾರಿದ ತಾಯಿ-ಮಕ್ಕಳು ತರಗೆಲೆಯಂತೆ ರಸ್ತೆಗೆ ಉರುಳಿದರು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದವ ಪಂಚಾಯಿತಿ ಆವರಣದಲ್ಲೇ ಸಾವು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five + twenty =
Remember me
