ಬೆಂಗಳೂರು:ರಾಜ್ಯದಲ್ಲಿ ಅಧಿಕೃತವಾಗಿ ಶೈಕ್ಷಣಿಕ ವರ್ಷಾರಂಭಕ್ಕೆ ಮುಹೂರ್ತ ನಿಗದಿಯಾಗಿದ್ದು, ಮಂಗಳವಾರದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್​ಗಳ ತರಗತಿಗಳು ಆರಂಭವಾಗಲಿವೆ.
ಕರೊನಾ ಸಂಪೂರ್ಣವಾಗಿ ನಿಮೂಲನೆಯಾಗಿಲ್ಲವಾದ ಕಾರಣ ಶಾಲಾ- ಕಾಲೇಜುಗಳ ಆರಂಭದ ವಿಚಾರವಾಗಿ ಪರ- ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಆದರೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಕಾಲೇಜುಗಳ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಕಾಲೇಜು ಆರಂಭದ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ನ.9ರಂದೇ ಪ್ರಮಾಣಿತ ಕಾರ್ಯಚರಣಾ ವಿಧಾನ (ಎಸ್​ಒಪಿ) ಬಿಡುಗಡೆ ಮಾಡಿತ್ತು. ಮಾರ್ಗ ಸೂಚಿಯಂತೆ ಕಾಲೇಜುಗಳ ತರಗತಿ ಮತ್ತು ಶೌಚಗೃಹಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಇನ್ನೂ ವಿಶ್ವವಿದ್ಯಾಲಯಗಳಲ್ಲಿ ಹಾಸ್ಟೆಲ್​ಗಳೂ ಇರುವುದರಿಂದ ಮೂರು ದಿನದ ಹಿಂದೆಯೇ ಸ್ಯಾನಿಟೈಸ್ ಕಾರ್ಯಕ್ಕೆ ಚಾಲನೆ ದೊರೆತಿದೆ.
ಕರೊನಾ ಬಂದ ಮೇಲೆ ಭೌತಿಕ ತರಗತಿ ನಡೆಸಲು ಅನುಮತಿ ನೀಡರಲಿಲ್ಲ. ಇದರಿಂದ ಆನ್​ಲೈನ್​ನಲ್ಲೇ ಶಿಕ್ಷಣ ನಡೆಯುತ್ತಿತ್ತು. ಒಂದು ಕಡೆ ಪಾಲಕರ ಮುಚ್ಚಳಿಕೆ ಪತ್ರ ಪಡೆದು ಭೌತಿಕ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ಸಹ ಸಿದ್ಧರಾಗಿದ್ದರೆ, ಮತ್ತೊಂದು ಕಡೆ ಕಾಲೇಜು ಆರಂಭದ ಮೊದಲ ದಿನದ ವಾತಾವರಣವನ್ನು ಪರಿಶೀಲಿಸಿ ಆನಂತರ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಮತ್ತಷ್ಟು ಪಾಲಕರು ಆಲೋಚಿಸಿದ್ದಾರೆ.
ಒಪ್ಪಿಗೆ ಪತ್ರ ಕಡ್ಡಾಯ:ಎಸ್​ಒಪಿನಲ್ಲಿ ಭೌತಿಕ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಕರಿಂದ ಒಪ್ಪಿಗೆ ಪತ್ರ ತರಬೇಕೆಂದಿದೆ. ಇದರಿಂದಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವ ಮುನ್ನ ಪತ್ರ ಹಾಗೂ ಕರೊನಾ ಪರೀಕ್ಷೆಯ ಫಲಿತಾಂಶದ ಪತ್ರವನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ.
ವಿದ್ಯಾರ್ಥಿಗಳ ಕರ್ತವ್ಯ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + 9 =
Remember me
