ಬೆಂಗಳೂರು:“ಕೋಲುಮಂಡೆ ಜಂಗಮ ದೇವರು” ರ‍್ಯಾಪ್​ ಸಾಂಗ್ ವಿವಾದ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ರ‍್ಯಾಪರ್​ ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.
ಹಿಂದು ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ರೀತಿಯಲ್ಲಿ ಜಾನಪದ ಗೀತೆಯನ್ನು ಚಿತ್ರೀಕರಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಚಂದನ್ ಶೆಟ್ಟಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಜರಂಗದಳ ಮುಖಂಡ ತೇಜಸ್ ಗೌಡ ದೂರು ನೀಡಿದ್ದು, ಪೊಲೀಸರು ಎನ್​ಸಿಆರ್​ ದಾಖಲಿಸಿದ್ದಾರೆ.
ಇದನ್ನೂ ಓದಿರಿವರವಾದ ವಿವಾದ: ಕೋಲುಮಂಡೆ ಸಾಂಗ್​ ವಿರುದ್ಧ ಆಕ್ರೋಶದ ಬೆನ್ನಲ್ಲೇ ಚಂದನ್​ ಶೆಟ್ಟಿಗೆ ಬಂಪರ್​!
ಆ. 22ರಂದು ಯೂಟ್ಯೂಬ್‌ನಲ್ಲಿ “ಕೋಲುಮಂಡೆ ಜಂಗಮ ದೇವರು” ರ‍್ಯಾಪ್​ ಸಾಂಗ್ ಅನ್ನು ಚಂದನ್​ ಶೆಟ್ಟಿ ಬಿಡುಗಡೆ ಮಾಡಿದ್ದರು. ಈ ಬಗ್ಗೆ ವಿವಾದ ಶುರುವಾಗುತ್ತಿದ್ದಂತೆ ನಿನ್ನೆ(ಮಂಗಳವಾರ) ಸ್ಪಷ್ಟನೆ ನೀಡಿದ್ದ ಚಂದನ್​ ಶೆಟ್ಟಿ, ಯಾವುದೇ ವ್ಯಕ್ತಿ, ಜಾತಿ ಮತ್ತು ಧರ್ಮಕ್ಕೆ ಅವಮಾನ ಮಾಡುವ ಉದ್ದೇಶದಿಂದ ಸಾಂಗ್​ ಮಾಡಿಲ್ಲ. ಒಳ್ಳೆಯ ಉದ್ದೇಶದಿಂದ ಸಾಂಗ್​ ಮಾಡಿದ್ದೇವೆ. ಇದರಿಂದ ನಿಮಗೆ ನೋವಾಗಿದ್ದರೆ ನಮ್ಮ ಇಡೀ ತಂಡದ ಪರವಾಗಿ ಕ್ಷಮೆಯಾಚಿಸುತ್ತೇನೆ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.
ತೀವ್ರ ವಿರೋಧದ ಬೆನ್ನಲ್ಲೇ ಕೋಲುಮಂಡೆ ರ‍್ಯಾಪ್​ ಸಾಂಗ್ ಯೂಟ್ಯೂಬ್​ನಿಂದ ನಾಪತ್ತೆ!

ಕನ್ನಡ ಕಿರುತೆರೆ ನಟಿಗೆ ವರದಕ್ಷಿಣೆ ಕಿರುಕುಳ, ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − ten =
Remember me
